ಬೆಂಗಳೂರು: ಜಾಗತಿಕ ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್ ಪೇಪಾಲ್ ತನ್ನ ಭಾರತದಲ್ಲಿನ ಅಭಿವೃದ್ಧಿ ಸೆಂಟರ್ಗಳಿಗೆ ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ನಾದ್ಯಂತ 1,000 ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲಿದೆ ಎಂದು ತಿಳಿಸಿದೆ.
ಏಪ್ರಿಲ್ 1ರಿಂದ ಭಾರತದಲ್ಲಿ ತನ್ನ ದೇಶೀಯ ಪಾವತಿ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ಪೇಪಾಲ್ ಕಳೆದ ತಿಂಗಳು ಘೋಷಿಸಿತ್ತು. ಇದರ ಹೊರತಾಗಿಯೂ ನೇಮಕಾತಿ ಮಾಡಿಕೊಳ್ಳುವುದಾಗಿ ಹೇಳಿದೆ. ಏಪ್ರಿಲ್ 1ರಿಂದ ಭಾರತೀಯ ವ್ಯವಹಾರಗಳಿಗೆ ಹೆಚ್ಚಿನ ಅಂತಾರಾಷ್ಟ್ರೀಯ ಮಾರಾಟವನ್ನು ಸಕ್ರಿಯಗೊಳಿಸಲು ಕಂಪನಿಯು ತನ್ನ ಗಮನ ದೇಶದತ್ತ ಕೇಂದ್ರೀಕರಿಸುತ್ತಿದೆ.
ಭಾರತದಲ್ಲಿ ನೇಮಕಾತಿ ಯೋಜನೆ ಬಹಿರಂಗಪಡಿಸಿದ ಡಿಜಿಟಲ್ ಪಾವತಿ ಮೇಜರ್, ಸಾಫ್ಟ್‌ವೇರ್, ಉತ್ಪನ್ನ ಅಭಿವೃದ್ಧಿ, ಡೇಟಾ ಸೈನ್ಸ್, ರಿಸ್ಕ್ ಅನಾಲಿಟಿಕ್ಸ್ ಮತ್ತು ಬಿಸಿನೆಸ್ ಅನಾಲಿಟಿಕ್ಸ್ ಆರಂಭಿಕ, ಮಧ್ಯಮ ಮಟ್ಟದ ಮತ್ತು ಹಿರಿಯ ರೋಲ್ಗಳಿಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದೆ.
ಪೇಪಾಲ್ ಇಂಡಿಯಾ ಭಾರತದಾದ್ಯಂತ ಉನ್ನತ ಎಂಜಿನಿಯರಿಂಗ್ ಕಾಲೇಜುಗಳಿಂದ ಕ್ಯಾಂಪಸ್ ನೇಮಕ ಮಾಡುವ ಯೋಜನೆ ಪ್ರಕಟಿಸಿದೆ.
ಭಾರತದ ತಂತ್ರಜ್ಞಾನ ಸೆಂಟರ್ಗಳು ಅಮೆರಿಕ ಹೊರಗಿನ ಪೇಪಾಲ್ಗೆ ದೊಡ್ಡ ಮಾರುಕಟ್ಟೆಯಾಗಿದೆ. ನಿರಂತರವಾಗಿ ಹೊಸತನ ಮತ್ತು ಸ್ಕರ್ವ್ ರೇಖೆಯಲ್ಲಿ ಮುಂದೆ ಉಳಿಯಲು ನಮಗೆ ಸಹಾಯ ಮಾಡುವಲ್ಲಿ ಭಾರತದ ತಂತ್ರಜ್ಞಾನ ಸೆಂಟರ್ಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಪೇಪಾಲ್ ಇಂಡಿಯಾ ಜಿಎಂ ಗುರು ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯ ಬಜೆಟ್ ಮೇಲೆ ರಾಮನಗರ ಜನತೆಗೆ ನೂರಾರು ನಿರೀಕ್ಷೆ...