ನವದೆಹಲಿ: ಡ್ರೈವರ್ ಸೈಡ್ ಏರ್‌ಬ್ಯಾಗ್ ಮಾಡ್ಯೂಲ್ ಸಮಸ್ಯೆಯಿಂದಾಗಿ ಜಪಾನಿನ ಆಟೋ ದೈತ್ಯ ಟೊಯೋಟಾ ಇಂಡಿಯಾ 9,498 ಯುನಿಟ್ಗಳ ಅರ್ಬನ್ ಕ್ರೂಸರ್ ಕಾರುಗಳನ್ನು ಹಿಂದಕ್ಕೆ ಪಡೆಯುತ್ತಿದೆ.
ವರದಿಗಳ ಪ್ರಕಾರ, 2020ರ ಜುಲೈ 28ರಿಂದ 2021ರ ಫೆಬ್ರವರಿ 11ರವರೆಗೆ ತಯಾರಿಸಿದ ವಾಹನಗಳಲ್ಲಿ ಏರ್‌ಬ್ಯಾಗ್ ಸಮಸ್ಯೆ ಕಂಡು ಬಂದಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: 'ಜನರಿಗೆ ಕೋವಿಡ್ ಲಸಿಕೆ ನೀಡುವಲ್ಲಿ ಕೇಂದ್ರ ದಯನೀಯವಾಗಿ ಸೋತಿದೆ'
ಈ ಎಸ್ಯುವಿಗಳಲ್ಲಿ ಡ್ರೈವರ್ ಬದಿಯಲ್ಲಿ ಇರುವ ಏರ್‌ಬ್ಯಾಗ್‌ನೊಂದಿಗೆ ಈ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಕಾರು ತಯಾರಕರು ಹೆಚ್ಚಿನ ಪರೀಕ್ಷೆಗಳನ್ನು ನಡೆಸಿ, ಅವುಗಳನ್ನು ಬದಲಾಯಿಸಿಕೊಡಲಾಗುವುದು. ಈ ಅವಧಿಯಲ್ಲಿ ಖರೀದಿಸಿದ ವಾಹನ ಮಾಲೀಕರು ಕಂಪನಿಯ ಅಧಿಕೃತ ಮಾರಾಟಗಾರರನ್ನು ಸಂಪರ್ಕಿಸಬೇಕು. ಅದರಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ ಎಂದಿದೆ.