ನವದೆಹಲಿ: ಭಾರತದ ಅಗ್ರಗಣ್ಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಬಾಂಬ್ ಶೋಧಕ, ವಿಲೇವಾರಿ ಹಾಗೂ ನಿಷ್ಕ್ರಿಯೆಯಂತಹ ಅಪಾಯಕಾರಿ ಕೆಲಸಗಳನ್ನು ನಿರ್ವಹಿಸುವ ರೋಬೊಟಿಕ್ ಯಂತ್ರವನ್ನು ತಯಾರಿಸಿದೆ.
ದೇಶದ ಸಶಸ್ತ್ರ ಪಡೆಗಳ ಹಲವು ಕಾರ್ಯಾಚರಣೆಗಳಲ್ಲಿ ಈಗಾಗಲೇ ಯಶಸ್ವಿಯಾಗಿ ಬಳಸಲ್ಪಟ್ಟ ಈ ಯಂತ್ರಗಳು ಅಥವಾ ರೋಬೊಟ್‌ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಅಭಿವೃದ್ಧಿಪಡಿಸಲಾದ ಯಂತ್ರವನ್ನು ಭಾರತೀಯ ರೈಲು ಸೇರಿ ಇತರೆ ಸಂಪರ್ಕ ವಾಹಕಗಳಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಲಿವೆ.
ಭಾರತೀಯ ಸಾರ್ವಜನಿಕ ಮತ್ತು ಖಾಸಗಿ ವಲಯದ ತಯಾರಕಾ ಕಂಪನಿಯಾದ ಡಿಆರ್‌ಡಿಒ ದಕ್ಷ್ ಮತ್ತು ದಕ್ಷ್ ಮಿನಿ ರೋಬೊಟ್‌ಗಳನ್ನು ವಿನ್ಯಾಸಗೊಳಿಸಿ ಮತ್ತು ಅವುಗಳನ್ನು ಅಭಿವೃದ್ಧಿಪಡಿಸಿದೆ. ಎರಡು ಅಡಿ ಎತ್ತರದ ದಕ್ಷ್ ರೋಬೊಟ್ ಭಾರತದ ಸೈನ್ಯಕ್ಕೆ ಸೇರಿಸಲಾಗಿದೆ. ಮತ್ತೊಂದು ಅದರ ಸಣ್ಣ ಸಹೋದರ ದಕ್ಷ್ ಮಿನಿ (ಸಿಎಸ್‌ಆರ್‌ಒವಿ) ಮತ್ತು ಸಣ್ಣ ಆವೃತ್ತಿಗಳನ್ನು ಸೇರ್ಪಡೆ ಮಾಡಬೇಕಿದೆ.
ಸೀಮಿತ ಅಥವಾ ಸಣ್ಣ ಸ್ಥಳಗಳಲ್ಲಿ ಕಾರ್ಯನಿರ್ವಹಿಸಬಹುದಾದ ಹಲವು ಇತರ ಆರ್‌ಒವಿಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಈ ರೋಬೋಟ್ಗಳು ಬಹಳ ಕಡಿದಾದ ಸಣ್ಣ-ಸಣ್ಣ ಸ್ಥಳಗಳಿಗೆ ತೆರಳಿ ಸಮೀಕ್ಷೆ ನಡೆಸಲಿವೆ. ಅಲ್ಲಿ ಕಣ್ಗಾವಲಿನಂತಹ ವ್ಯವಸ್ಥೆಗೂ ಸಹ ಬಳಸಬಹುದಾಗಿದೆ ಎಂದು ಲಖನೌ ಡಿಫೆನ್ಸ್ ಎಕ್ಸ್‌ಪೋ ಸಂವಾದದಲ್ಲಿ ಡಿಆರ್‌ಡಿಒದ ಶಸ್ತ್ರಾಸ್ತ್ರ ಮತ್ತು ಯುದ್ಧ ಎಂಜಿನಿಯರಿಂಗ್ ವಿಭಾಗದ ಮಹಾನಿರ್ದೇಶಕ ಪಿಕೆ ಮೆಹ್ತಾ 'ಈಟಿವಿ ಭಾರತ್'ಗೆ ತಿಳಿಸಿದರು.
ಸುಧಾರಿತ ಸ್ಫೋಟಕ ಸಾಧನಗಳನ್ನು ನಿರ್ವಹಿಸಲು, ಪತ್ತೆ ಮಾಡಲು ಮತ್ತು ನಿಷ್ಕ್ರಿಯಗೊಳಿಸಲು ದಕ್ಷ್ ರೋಬೊಟ್ ಸಮರ್ಥವಾಗಿವೆ. ಡಿಆರ್‌ಡಿಒನ ದಕ್ಷ್ ಬ್ಯಾಟರಿ ಚಾಲಿ ವಾಹನವಾಗಿದ್ದು, ಇದು ನಗರ ಮತ್ತು ದೇಶಾದ್ಯಂತ ಭೂಪ್ರದೇಶಗಳಲ್ಲಿ ಕಾರ್ಯನಿರ್ವಹಿಸಬಲ್ಲದು.
2.5 ಮೀಟರ್ ಎತ್ತರದಲ್ಲಿ 20 ಕಿ. ಗ್ರಾಂ.ನಷ್ಟು ಭಾರ ಎತ್ತಬಲ್ಲದು. ಅನುಮಾನಾಸ್ಪದ ವಸ್ತುವಿನಲ್ಲಿ ನಿಜವಾಗಿಯೂ ಸ್ಫೋಟಕಗಳು ಹೊಂದಿವೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಅದು ತನ್ನದೇ ಆದ ಸಿಸ್ಟಮ್ನಡಿ ಎಕ್ಸ್‌ರೆ ಮಾಡುತ್ತದೆ. ಡಿಆರ್‌ಡಿಒ ಎಂಜಿನಿಯರ್‌ಗಳ ಪ್ರಕಾರ ಇದನ್ನು ಮುಂಬೈ ಭಯೋತ್ಪಾದಕ ದಾಳಿಯಂತಹ ಸಂದರ್ಭದಲ್ಲಿ ಬಳಸಬಹುದು ಎಂದಿದ್ದಾರೆ.
ಡಿಆರ್‌ಡಿಒ ತನ್ನ ಸಣ್ಣ ಆವೃತ್ತಿಯಲ್ಲಿ ಅಭಿವೃದ್ಧಿಪಡಿಸಿದ್ದು, ಇದನ್ನು ಜನಪ್ರಿಯವಾಗಿ ದಕ್ಷ್ ಮಿನಿ ಅಥವಾ ಸಿಎಸ್‌ಆರ್‌ಒವಿ ಎಂದು ಕರೆಯಲಾಗುತ್ತದೆ. ಇದು ಸೀಮಿತ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತದೆ. ದಕ್ಷ್ ಮಿನಿ ಮತ್ತು ಅದರ ಸಣ್ಣ ಆವೃತ್ತಿಗಳನ್ನು ಭಾರತೀಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.