ನವದೆಹಲಿ: ವಿಶಿಷ್ಟ ಗುರುತಿನ ಆಧಾರ್ ಕಾರ್ಡ್ ಛಾಯಾಚಿತ್ರದ ಬಗ್ಗೆ ಅತೃಪ್ತಿ ಹೊಂದಿರುವವರು ತಮ್ಮ ಫೋಟೋ ಬದಲಾಯಿಸುವ ಅವಕಾಶ ಕಲ್ಪಿಸುತ್ತಿದೆ.
ಕಾರ್ಡ್ದಾರರು ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ತಮ್ಮ ಫೋಟೋ ನವೀಕರಣ ಮಾಡಿಕೊಳ್ಳಬಹುದು.
ಯುಐಡಿಎಐ ಪ್ರಕಾರ, ಆಧಾರ್ ಕಾರ್ಡ್ ಫೋಟೋ ನವೀಕರಣಕ್ಕೆ ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಬೇಕು. ಅಲ್ಲಿನ ಆಧಾರ್ ಕಾರ್ಯನಿರ್ವಾಹಕರಿಂದ ಛಾಯಾಚಿತ್ರ ಬದಲಾವಣೆ ಬಗ್ಗೆ ಕೇಳಬೇಕು. ಫೋಟೋ ಬದಲಾವಣೆ ಶುಲ್ಕ 25 ರೂ. ಜೊತೆಗೆ ಜಿಎಸ್ಟಿ ಒಳಗೊಂಡಿರುತ್ತದೆ. ಆಧಾರ್ ಕಾರ್ಯನಿರ್ವಾಹಕನು ಆಧಾರ್ ಕಾರ್ಡ್ ಹೊಂದಿರುವವರಿಗೆ ನವೀಕರಣ ವಿನಂತಿ ಸಂಖ್ಯೆ (ಯುಆರ್ಎನ್) ಜತೆಗೆ ಸ್ವೀಕೃತಿ ಸ್ಲಿಪ್ ನೀಡುತ್ತಾರೆ.
ಆಧಾರ್ ಕಾರ್ಡ್ ಫೋಟೋ ನವೀಕರಣ ವಿಧಾನ ಹೀಗಿದೆ
1) ಯುಐಡಿಎಐ ವೆಬ್‌ಸೈಟ್ - uidai.gov.in ಭೇಟಿ ಕೊಟ್ಟು, ಆಧಾರ್ ದಾಖಲಾತಿ ಫಾರ್ಮ್ ಡೌನ್‌ಲೋಡ್ ಮಾಡಿ
2) ಆಧಾರ್ ದಾಖಲಾತಿ ಫಾರ್ಮ್ ಭರ್ತಿ ಮಾಡಿ ಮತ್ತು ಹತ್ತಿರದ ಆಧಾರ್ ದಾಖಲಾತಿ ಕೇಂದ್ರದಲ್ಲಿ ಆಧಾರ್ ಕಾರ್ಯನಿರ್ವಾಹಕರಿಗೆ ಸಲ್ಲಿಸಿ
3) ಆಧಾರ್ ಕಾರ್ಯನಿರ್ವಾಹಕ ನಿಮ್ಮ ಬಯೋ ಮೆಟ್ರಿಕ್ ವಿವರ ಪಡೆಯುತ್ತಾರೆ
4) ಆಧಾರ್ ದಾಖಲಾತಿ ಕೇಂದ್ರದ ಕಾರ್ಯನಿರ್ವಾಹಕ ನಿಮ್ಮ ಫೋಟೋ ತೆಗೆದುಕೊಳ್ಳುತ್ತಾರೆ
5) ಕಾರ್ಯನಿರ್ವಾಹಕ ನಿಮ್ಮ ಆಧಾರ್ ಕಾರ್ಡ್ ಫೋಟೋ ನನವೀಕರಣಕ್ಕೆ 25 ರೂ. + ಜಿಎಸ್ಟಿ ಚಾರ್ಜ್ ಮಾಡುತ್ತಾರೆ
6) ಕಾರ್ಯನಿರ್ವಾಹಕ ನಿಮಗೆ ನವೀಕರಣ ವಿನಂತಿ ಸಂಖ್ಯೆ (ಯುಆರ್ಎನ್) ಜತೆಗೆ ಸ್ವೀಕೃತಿ ಸ್ಲಿಪ್ ನೀಡುತ್ತಾರೆ
7) ಆಧಾರ್ ಕಾರ್ಡ್ ಛಾಯಾಚಿತ್ರ ಬದಲಾಯಿಸಲಾಗಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಲು ಯುಆರ್ಎನ್ ಬಳಸಿ
8) ಆಧಾರ್ ಕಾರ್ಡ್ ಫೋಟೋ ನವೀಕರಣದ ನಂತರ, ಹೊಸ ಛಾಯಾಚಿತ್ರದೊಂದಿಗೆ ನವೀಕರಿಸಿದ ಆಧಾರ್ ಕಾರ್ಡ್ ಅನ್ನು ಯುಐಡಿಎಐ ವೆಬ್‌ಸೈಟ್ - uidai.gov.inನಿಂದ ಡೌನ್ಲೋಡ್ ಮಾಡಬಹುದು