ನವದೆಹಲಿ: ದೇಶದಲ್ಲಿ ಅತಿಹೆಚ್ಚು ಉದ್ಯೋಗಿಗಳನ್ನು ನೇಮಕ ಮಾಡಿಕೊಂಡ ಸಾರ್ವಜನಿಕ ವಲಯದ ಭಾರತೀಯ ರೈಲ್ವೆ ಇಲಾಖೆ, ಈಗಿರುವ ನೌಕರರ ಸಂಖ್ಯೆಯನ್ನು ಕಡಿತಗೊಳಿಸಲು ಮುಂದಾಗಿದೆ ಎಂಬುದರ ಕುರಿತು ಸಚಿವಾಲಯ ಸ್ಷಷ್ಟನೆ ನೀಡಿದೆ.
ರೈಲ್ವೆ ಸಚಿವಾಲಯವು ಎಲ್ಲ ವಲಯಗಳಿಗೂ ಪತ್ರ ಬರೆದು, ತಮ್ಮ- ತಮ್ಮ ವ್ಯಾಪ್ತಿಯಲ್ಲಿನ 5 ವರ್ಷ ಮೇಲ್ಪಟ್ಟವರ ಹಾಗೂ ಕಳೆದ 30 ವರ್ಷಗಳಿಂದ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಉದ್ಯೋಗಿಗಳ ಕಾರ್ಯಕ್ಷಮತೆ, ಕೆಲಸದ ಸಾಮರ್ಥ್ಯ ಪರಿಶೀಲಿಸುವಂತೆ ಸೂಚಿಸಿದೆ ಎಂದು ಹೇಳಿದೆ.
ಗಣನೀಯ ಪ್ರಮಾಣದಲ್ಲಿ ನೌಕರರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಲಿದೆ ಎಂಬುದು ಊಹಾಪೋಹ. ನೌಕರರ ಸಾಮರ್ಥ್ಯ ವಿಮರ್ಶೆಯು ರೈಲ್ವೆ ಸ್ಥಾಪನೆ ಸಂಹಿತೆಯಡಿ ನಿಗದಿಪಡಿಸಲಾಗಿದೆ. ಕಾರ್ಯಕ್ಷಮತೆ ಪರಿಶೀಲನೆಯು ಆಡಳಿತದ ಸಾರ್ವಜನಿಕ ಹಿತಾಸಕ್ತಿಯಲ್ಲಿ ನಡೆಸಬೇಕಾಗುತ್ತದೆ ಎಂದು ರೈಲ್ವೆ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ರೈಲ್ವೆಯಲ್ಲಿ 1.4 ಮಿಲಿಯನ್ (14 ಲಕ್ಷ ಉದ್ಯೋಗಿಗಳು) ನೌಕರರನ್ನು ಹೊಂದಿದೆ. 2014-19ರ ಅವಧಿಯಲ್ಲಿ ರೈಲ್ವೆಯ ವಿವಿಧ ವಿಭಾಗಗಳಲ್ಲಿ 1,84,262 ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಹೇಳಿದೆ.