ETV Bharat / business

ಬ್ಯಾಂಕುಗಳಿಗೆ ವಂಚನೆ: ಚೋಕ್ಸಿ,ನೀರವ್ ಮೋದಿಯ ಲಕ್ಸುರಿ ಕಾರು ಹರಾಜು - undefined

ಬ್ಯಾಂಕುಗಳಿಗೆ ವಂಚನೆ ಎಸಗಿ, ಅಕ್ರಮವಾಗಿ 2 ಬಿಲಿಯನ್ ಅಮೆರಿಕನ್ ಡಾಲರ್ ಹಣ ವರ್ಗಾವಣೆ ಮಾಡಿರುವ ತನಿಖೆಯ ಭಾಗವಾಗಿ ಮೋದಿ ಹಾಗೂ ಚೋಕ್ಸಿಗೆ ಸೇರಿದ 13 ಐಷಾರಾಮಿ ಕಾರುಗಳನ್ನು ವಶಕ್ಕೆ  ಪಡೆಯಲು ಮಾರ್ಚ್ ತಿಂಗಳಲ್ಲಿ ಮುಂಬೈನ ಪಿಎಂಎಲ್​ಎ ವಿಶೇಷ ನ್ಯಾಯಾಲಯದಿಂದ ಇಡಿ ಅನುಮತಿ ಪಡೆದುಕೊಂಡಿತ್ತು.

ಸಂಗ್ರಹ ಚಿತ್ರ
author img

By

Published : Apr 26, 2019, 5:05 PM IST

ನವದೆಹಲಿ: ಪಂಜಾಬ್ ನ್ಯಾಷನಲ್​ ಬ್ಯಾಂಕ್ ಹಗರಣದ ಆರೋಪಿಗಳಾದ ವಜ್ರದ ಉದ್ಯಮಿ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಅವರಿಗೆ ಸೇರಿದ್ದ 12 ಐಷಾರಾಮಿ ಕಾರುಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಹರಾಜು ಹಾಕಿದೆ.

ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ಈ ಕಾರುಗಳನ್ನು ಜಾರಿ ನಿರ್ದೇಶನಾಲಯ ತನ್ನ ವಶಕ್ಕೆ ಪಡೆದುಕೊಂಡಿದೆ. ನ್ಯಾಯಾಲಯ ಕೂಡ 13 ಕಾರುಗಳ ಹರಾಜಿಗೆ ಸಮ್ಮತಿ ಸೂಚಿಸಿತ್ತು. ಎಂಎಸ್​ಟಿಸಿ ಕಂಪನಿಯಿಂದ ಇ- ಹರಾಜು ಮಾಡಲಾಗಿದ್ದು, ಕಾರುಗಳು ಒಟ್ಟು ₹ 3.029 ಕೋಟಿಗೆ ಬಿಕರಿಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಬ್ಯಾಂಕುಗಳಿಗೆ ಹಣ ವಂಚನೆ ಪ್ರಕರಣದಲ್ಲಿ, 2 ಬಿಲಿಯನ್ ಅಮೆರಿಕನ್ ಡಾಲರ್ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಮೋದಿ ಹಾಗೂ ಚೋಕ್ಸಿಗೆ ಸೇರಿದ ಈ ಕಾರುಗಳನ್ನು ವಶಕ್ಕೆ ಪಡೆಯಲು ಮಾರ್ಚ್ ತಿಂಗಳಲ್ಲಿ ಮುಂಬೈನ ಪಿಎಂಎಲ್​ಎ ಸ್ಪೆಷಲ್ ಕೋರ್ಟಿನಿಂದ ಇಡಿ ಅನುಮತಿ ಪಡೆದುಕೊಂಡಿತ್ತು.

13 ಕಾರುಗಳ ಪೈಕಿ 11 ಕಾರುಗಳು ನೀರವ್ ಮೋದಿ ಗ್ರೂಪಿಗೆ ಸೇರಿದರೆ, 2 ಕಾರುಗಳು ಮೆಹುಲ್ ಚೋಕ್ಸಿ ಸಮೂಹಕ್ಕೆ ಸೇರಿವೆ. ಈ 13 ಕಾರುಗಳ ಪೈಕಿ 12 ಕಾರುಗಳಿಗೆ ₹ 3,28,94,293 ಬಿಡ್ ಮಾಡಲಾಗಿದೆ.

ಆದಾಯ ತೆರಿಗೆ ಇಲಾಖೆ ಕಳೆದ ತಿಂಗಳು ನೀರವ್ ಮೋದಿಗೆ ಸೇರಿರುವ ಕೆಲವು ಕಲಾಕೃತಿಗಳನ್ನು ₹ 59. 37 ಕೋಟಿಗೆ ಹರಾಜು ಮಾಡಿತ್ತು.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.