ಮುಂಬೈ: ಕಳೆದ ವಾರದ ಷೇರುಪೇಟೆಯಲ್ಲಿ ಭಾರತದ ಬಹುದೊಡ್ಡ ಹಾಗೂ ಮೌಲ್ಯಯುತ ಹತ್ತು ಕಂಪನಿಗಳ ಪೈಕಿ 9 ಕಂಪನಿಗಳು ನಷ್ಟ ಅನುಭವಿಸಿವೆ.
ಆಗಸ್ಟ್ 16ಕ್ಕೆ ಕೊನೆಗೊಂಡ ಪೇಟೆಯ ಮಾರುಕಟ್ಟೆಯಲ್ಲಿ ದೇಶದ ಐಟಿ ರಫ್ತು ದಿಗ್ಗಜ ಟಾಟಾ ಕನ್ಸಲ್ಟನ್ಸಿ ಸರ್ವಿಸ್ (ಟಿಸಿಎಸ್) ಸೇರಿದಂತೆ ಇತರೆ 9 ಕಂಪನಿಗಳು ₹ 84,354 ಕೋಟಿಯಷ್ಟು ಸಂಪತ್ತು ಕಳೆದುಕೊಂಡಿವೆ. ಇದೇ ಅವಧಿಯಲ್ಲಿ ಸೆನ್ಸೆಕ್ಸ್ 231.58 ಅಂಶಗಳಷ್ಟು ಇಳಿಕೆಯಾಗಿದೆ.
ಅಗ್ರ ಹತ್ತು ಕಂಪನಿಗಳಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಮಾತ್ರವೇ ಲಾಭ ಬಾಚಿಕೊಂಡಿದೆ. ಆಗಸ್ಟ್ 12ರಂದು ತನ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಾಗರೋತ್ತರ ಹೂಡಿಕೆ ಘೋಷಿಸಿದ ಬಳಿಕ ₹ 72,153 ಕೋಟಿಯಷ್ಟಿದ್ದ ಪೇಟೆಯ ಸಂಪತ್ತು ₹ 8,09,755 ಕೋಟಿಗೆ ಏರಿಕೆಯಾಗಿದೆ.
ಟಿಸಿಎಸ್, ಎಚ್ಡಿಎಫ್ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (ಎಚ್ಯುಎಲ್), ಎಚ್ಡಿಎಫ್ಸಿ, ಇನ್ಫೋಸಿಸ್, ಐಟಿಸಿ, ಕೋಟಕ್ ಮಹೀಂದ್ರ, ಐಸಿಐಸಿ ಬ್ಯಾಂಕ್ ಮತ್ತು ಎಸ್ಬಿಐ ವಾರದ ವಹಿವಾಟಿನಲ್ಲಿ ನಷ್ಟಕಂಡುಕೊಂಡಿವೆ.