ಮುಂಬೈ: ಇನ್ಫೋಸಿಸ್ ಸಹ ಸಂಸ್ಥಾಪಕ ಮತ್ತು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಮಾಜಿ ಮುಖ್ಯಸ್ಥ ಕನ್ನಡಿಗ ನಂದನ್ ನಿಲೇಕಣಿ ಅವರಿಗೆ ಬಾಂಬೆ ಐಐಟಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಶನಿವಾರ ಐಐಟಿ ಕ್ಯಾಂಪಸ್ ಸಭಾಂಗಣದಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್ ಅವರು ನಿಲೇಕಣಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ಬಾಂಬೆ ಐಐಟಿಯ ಹಳೆಯ ವಿದ್ಯಾರ್ಥಿ ಆಗಿರುವ ನಂದನ್ ಅವರಿಗೆ ಪ್ರತಿಷ್ಠಿತ ಪದವಿ ನೀಡುತ್ತಿರುವುದು ಹೆಮ್ಮೆ ತಂದಿದೆ ಎಂದು ಆಡಳಿತ ಮಂಡಳಿ ಹೇಳಿದೆ.
ಶಿಕ್ಷಣ ವಿದ್ಯಾರ್ಥಿಗಳು, ಅವರ ಕುಟುಂಬಸ್ಥರು ಹಾಗೂ ಸಮಾಜದಲ್ಲಿನ ಜನಜೀವನವನ್ನು ಪರಿವರ್ತಿಸಬಲ್ಲ ಒಂದು 'ಆಯುಧ'ವಾಗಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತ ಶೈಕ್ಷಣಿಕ ರಂಗದ ವಿಶ್ವ ನಾಯಕನಾಗಿಸುವಲ್ಲಿ ಐಐಟಿಗಳ ಪಾತ್ರ ಪ್ರಮುಖವಾಗಿದೆ ಎಂದು ನಂದನ್ ಅಭಿಪ್ರಾಯಪಟ್ಟರು.