ETV Bharat / business

ಪಿಎಂಸಿ ಬ್ಯಾಂಕ್​ ಹಗರಣ: ಚಾರ್ಜ್​ಶೀಟ್ ದಾಖಲಿಸಿದ ಆರ್ಥಿಕ ಅಪರಾಧ ದಳ

ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್ ಹಗರಣದ ಬಹುಕೋಟಿ ವಂಚನೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸ್‌ ಇಲಾಖೆಯ ಆರ್ಥಿಕ ಅಪರಾಧ ತನಿಖಾ ದಳ ಎಸ್‌ಪ್ಲನೇಡ್ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ. ಕೆಲವು ದಿನಗಳ ಹಿಂದೆಯಷ್ಟೇ ಜಾರಿ ನಿರ್ದೇಶನಾಲಯ ಪ್ರತ್ಯೇಕ ಚಾರ್ಜ್​ಶೀಟ್​ ಸಲ್ಲಿಸಿತ್ತು.

author img

By

Published : Dec 27, 2019, 4:18 PM IST

PMC Bank
ಪಿಎಂಸಿ ಬ್ಯಾಂಕ್

ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ (ಪಿಎಂಸಿ) ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್‌ ಇಲಾಖೆಯ 'ಆರ್ಥಿಕ ಅಪರಾಧ ತನಿಖಾ ದಳ'ದ (ಇಒಡಬ್ಲ್ಯು) ಅಧಿಕಾರಿಗಳು ಎಸ್‌ಪ್ಲನೇಡ್ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಇದೇ ಹಗರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆಯಷ್ಟೇ ಜಾರಿ ನಿರ್ದೇಶನಾಲಯವು (ಇಡಿ) ಪ್ರತ್ಯೇಕ ಚಾರ್ಜ್‌ಶೀಟ್ ಅನ್ನು ಸಲ್ಲಿಸಿತ್ತು.

ಆರ್ಥಿಕ ಅಕ್ರಮಗಳ ಆರೋಪದ ಮೇಲೆ ಸೆಪ್ಟೆಂಬರ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಆರು ತಿಂಗಳ ಕಾಲ ಪಿಎಂಸಿ ಬ್ಯಾಂಕ್‌ ಮೇಲೆ ವಹಿವಾಟಿನ ನಿಯಂತ್ರಣದ ನಿರ್ಬಂಧಗಳನ್ನು ವಿಧಿಸಿತ್ತು.

ಯಾವುದೇ ಸಾಲ ಮತ್ತು ಮುಂಗಡಗಳನ್ನು ನೀಡಬಾರದು ಅಥವಾ ನವೀಕರಿಸಬಾರದು. ಯಾವುದೇ ಹೂಡಿಕೆ ಮಾಡಬಾರದು ಅಥವಾ ಯಾವುದೇ ಸಾಲವನ್ನು ತೆಗೆದುಕೊಳ್ಳಬಾರದು ಎಂದು ಆರ್‌ಬಿಐ ಪಿಎಂಸಿಗೆ ಸೂಚಿಸಿತ್ತು. ಈ ಬಳಿಕ ಬ್ಯಾಂಕ್ ಠೇವಣಿದಾರರ ವಾಪಸಾತಿ ಮಿತಿಯನ್ನು 1,000 ರೂ.ಗೆ ಏರಿಸಿ, ಕ್ರಮೇಣ ಅದನ್ನು 50,000 ರೂ.ಗೆ ಹೆಚ್ಚಿಸಿತ್ತು.

Intro:Body:

Mumbai Police Economic Offences Wing (EOW) has filed a charge sheet in Esplanade Court in connection with the Punjab and Maharashtra Co-operative (PMC) Bank scam.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.