ETV Bharat / business

ಒಂದೂ ಅಪಘಾತವಿಲ್ಲದೆ 6.17 ಲಕ್ಷ ಟ್ರಿಪ್​​, 1,827 ದಿನ ಸಂಚರಿಸಿದ ಮೆಟ್ರೊ ಮೇರು ಸಾಧನೆ..! -

ರಿಲಯನ್ಸ್​ ಇನ್​ಫ್ರಾಸ್ಟ್ರಕ್ಚರ್​ ​- ಪ್ರಮೋಟೆಡ್​ ಮುಂಬೈ ಮೆಟ್ರೊ ತನ್ನ ಐದನೇ ವಾರ್ಷಿಕೋತ್ಸವವನ್ನು ಶೂನ್ಯ ಅಪಘಾತದೊಂದಿಗೆ ಆಚರಣೆ ಮಾಡುತ್ತಿದೆ. ಹೀಗಂತಾ ಇಲ್ಲಿನ ಮೆಟ್ರೊ ತಿಳಿಸಿದೆ.

ಸಾಂದರ್ಭಿಕ ಚಿತ್ರ
author img

By

Published : Jun 8, 2019, 3:29 PM IST

ಮುಂಬೈ: ಮುಂಬೈ ಉಪನಗರ ರೈಲೈ ವ್ಯವಸ್ಥೆಯ 'ಲೈಫ್​ ಲೈನ್​' ಎಂದು ಕರೆಯಲಾಗುವ ಸಬ್​ ಅರ್ಬನ್​ ರೈಲ್ವೆ ಹಳಿಗಳ ಮೇಲೆ ನಿತ್ಯ 9 ಮಂದಿ ಸಾವನ್ನಪ್ಪುತ್ತಾರೆ. ಆದರೆ, ಇದೇ ನಗರದಲ್ಲಿ ಇದಕ್ಕೆ ತದ್ವಿರುದ್ಧವಾದ ಸಂಚಾರ ವ್ಯವಸ್ಥೆ ಕಳೆದ ಐದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ.

ರಿಲಯನ್ಸ್​ ಇನ್​ಫ್ರಾಸ್ಟ್ರಕ್ಷರ್​- ಪ್ರಮೋಟೆಡ್​ ಮುಂಬೈ ಮೆಟ್ರೊ ತನ್ನ ಐದನೇ ವಾರ್ಷಿಕೋತ್ಸವವನ್ನು ಶೂನ್ಯ ಅಪಘಾತದೊಂದಿಗೆ ಆಚರಣೆ ಮಾಡುತ್ತಿದೆ.

2014ರ ಜೂನ್ 8ರಂದು ಸಾರ್ವಜನಿಕ ಬಳಕೆಗೆ ಲಭ್ಯವಾದ ಮುಂಬೈ ಮೆಟ್ರೊ, ಶೇ 99.9 ಪ್ರತಿಶತ ಸಮಯಕ್ಕೆ ಅನುಗುಣವಾಗಿ ಸಂಚರಿಸಿ 6.17 ಲಕ್ಷ ಟ್ರಿಪ್​ಗಳನ್ನು ಈ ಐದು ವರ್ಷಗಳಲ್ಲಿ ಪೂರ್ಣಗೊಳಿಸಿದೆ.

ಕಳೆದ ಐದು ವರ್ಷಗಳಲ್ಲಿ 540 ದಶಲಕ್ಷ ಜನರು ಮೆಟ್ರೊ ಸೇವೆ ಪಡೆದಿದ್ದು, ಶೂನ್ಯ ಅಪಘಾತ ಹಾಗೂ ಯಾವುದೇ ಸಾವು ಕೂಡ ಸಂಭವಿಸಿಲ್ಲ. ಮುಂಬೈನ ಒಟ್ಟು ಜನಸಂಖ್ಯೆಯಲ್ಲಿ ಶೇ 40ರಷ್ಟು ಜನರು ಮೆಟ್ರೊ ಸೇವೆ ಪಡೆದವರಿದ್ದಾರೆ. ವರ್ಸೊವಾ- ಅಂದೇರಿ0 ಘಾಟ್ಕಾಪುರ್​ ಮಾರ್ಗದಲ್ಲಿ ಅತ್ಯಧಿಕ ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ಮೆಟ್ರೊ ಸಂಸ್ಥೆ ವಕ್ತಾರರು ಮಾಹಿತಿ ನೀಡಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.