ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ (ಪಿಎಮ್‌ಸಿ) ಬ್ಯಾಂಕ್ನ 4,355 ಕೋಟಿ ರೂ. ಹಗರಣದ ಆರೋಪಿ, ಎಚ್‌ಡಿಐಎಲ್ ಪ್ರವರ್ತಕ ರಾಕೇಶ್ ವಾಧವನ್ ಅವರ ಜಾಮೀನು ಅರ್ಜಿಯನ್ನು ಮುಂಬೈನ ಪಿಎಂಎಲ್‌ಎ ನ್ಯಾಯಾಲಯ ತಿರಸ್ಕರಿಸಿದೆ.
ತಾನು ಯಾವುದೇ ಬ್ಯಾಂಕಿಂಗ್ ನಿಯಮವನ್ನು ಉಲ್ಲಂಘಿಸಿಲ್ಲ ಎಂದು ಹೇಳಿ ವಾಧವನ್ ಜಾಮೀನು ಕೋರಿದ್ದು, ಜೈಲಿನೊಳಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದರಿಂದ ತನ್ನ ಮನವಿಯನ್ನು ಪರಿಗಣಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ವಿಶೇಷ ನ್ಯಾಯಮೂರ್ತಿ ಪ್ರಶಾಂತ್ ಪಿ ರಾಜವೈದ್ಯ ಅವರ ವಾಧವನ್ ಮನವಿಯನ್ನು ತಿರಸ್ಕರಿಸಿದರು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬೆಳಕಿಗೆ ಬಂದ 4,355 ಕೋಟಿ ರೂ. ಪಿಎಂಸಿ ಬ್ಯಾಂಕ್ ಹಗರಣದಲ್ಲಿ ಹೌಸಿಂಗ್ ಡೆವಲಪ್‌ಮೆಂಟ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಚ್‌ಡಿಐಎಲ್) ಪ್ರವರ್ತಕರಾದ ರಾಕೇಶ್ ವಾಧವನ್, ಅವರ ಪುತ್ರ ಸರಂಗ್ ಮತ್ತು ಇತರರು ಆರೋಪಿಯಾಗಿದ್ದಾರೆ.