ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ವೇಗವಾಗಿ ವಿಶ್ವದ ಆರನೇ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇತ್ತೀಚಿನ ವರದಿಯಲ್ಲಿ ಆ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಹೇಳಿದೆ.
ನಿನ್ನೆ (ಬುಧವಾರ) ನಡೆದ ಪ್ರಥಮ ಆನ್ಲೈನ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಂಪನಿಯ ಷೇರುಗಳ ಮೌಲ್ಯದಲ್ಲಿ ಶೇ 6ಕ್ಕಿಂತಲೂ ಅಧಿಕ ಕುಸಿದವು. ಇದರಿಂದ ಅಂಬಾನಿ 2.5 ಬಿಲಿಯನ್ ಡಾಲರ್ನಷ್ಟು ಸಂಪತ್ತನ್ನು ಕಳೆದುಕೊಂಡರು. ಇದರಿಂದ ನಾಲ್ಕು ಸ್ಥಾನಗಳನ್ನು ಕಳೆದುಕೊಂಡು, ಜಾಗತಿಕ ಬಿಲಿಯನೇರ್‌ಗಳ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಕುಸಿದರು ಎಂದು ತಿಳಿಸಿದೆ.
ಜಾಗತಿಕ ಶ್ರೀಮಂತ ಉದ್ಯಮಿಗಳು ಹೊಂದಿರುವ ಸಂಪತ್ತು:
ಬಿಲಿಯನೇರ್ಸ್ ಸಂಪತ್ತು (ಡಾಲರ್)
- ಜೆಫ್ ಬೆಜೋಸ್ 179 ಬಿಲಿಯನ್
- ಬಿಲ್ ಗೇಟ್ಸ್ 117 ಬಿಲಿಯನ್
- ಬರ್ನಾರ್ಡ್ ಅರ್ನಾಲ್ಟ್ 95.1 ಬಿಲಿಯನ್
- ಮಾರ್ಕ್ ಝುಕರ್‌ಬರ್ಗ್ 91.2 ಬಿಲಿಯನ್
- ಸ್ಟೀವ್ ಬಾಲ್ಮರ್ 74.9 ಬಿಲಿಯನ್
- ವಾರೆನ್ ಬಫೆಟ್ 72.2 ಬಿಲಿಯನ್
- ಲ್ಯಾರಿ ಪೇಜ್ 71.7 ಬಿಲಿಯನ್
- ಎಲೋನ್ ಮಸ್ಕ್ 70.6 ಬಿಲಿಯನ್
- ಸೆರ್ಗೆ ಬ್ರಿನ್ 69.5 ಬಿಲಿಯನ್
- ಮುಖೇಶ್ ಅಂಬಾನಿ 69 ಬಿಲಿಯನ್