ನವದೆಹಲಿ: ಕೆಲವು ದಿನಗಳ ಹಿಂದೆಯಷ್ಟೇ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆದಿದ್ದ ಚೀನಾದ ಲೋನ್ ವುಲ್ಫ್(ಒಂಟಿ ತೋಳ) ಝಾಂಗ್ ಶನ್ಶನ್ ಅವರನ್ನು ಹಿಂದಿಕ್ಕಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅಗ್ರ ಸ್ಥಾನಕ್ಕೆ ಏರಿದ್ದಾರೆ.
ಭಾರತದ ಮುಖೇಶ್ ಅಂಬಾನಿ ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿದ್ದು, ಮಾರುಕಟ್ಟೆಯಲ್ಲಿ ಅವರ ಸಂಪತ್ತು ವೃದ್ಧಿಯಾಗುತ್ತಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ತೈಲದಿಂದ ರಾಸಾಯನಿಕ ವ್ಯವಹಾರದ ತನಕ ವ್ಯಾಪಿಸಿಕೊಂಡಿದೆ. ಸುಮಾರು 80 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಅಂಬಾನಿ ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಝಾಂಗ್ ಶನ್ಶನ್ ಅವರ ವಾಟರ್ ಬಾಟಲ್ ಕಂಪನಿ ಷೇರು ಈ ವಾರ ಶೇ. 20ರಷ್ಟು ಇಳಿಕೆಯಾಗಿದೆ.
ಇದನ್ನೂ ಓದಿ: ಒಂದೇ ದಿನ 5.3 ಲಕ್ಷ ಕೋಟಿ ರೂ. ಸಂಪತ್ತು ಕಳೆದುಕೊಂಡ ಹೂಡಿಕೆದಾರರು
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಚೀನಾದ ಉದ್ಯಮಿ ಝಾಂಗ್ ಶನ್ಸನ್ ಅವರು 76.6 ಬಿಲಿಯನ್ ಡಾಲರ್ ಮೌಲ್ಯ ಹೊಂದಿದ್ದರೆ, ಇದು ಕಳೆದ ವಾರ ಗರಿಷ್ಠ ಮಟ್ಟದಿಂದ 22 ಶತಕೋಟಿ ಡಾಲರ್ಗಿಂತಲೂ ಕಡಿಮೆಯಾಗಿದೆ.
ಚೀನಾದ ಝಾಂಗ್ ಅವರ 22 ಬಿಲಿಯನ್ ನಷ್ಟ ಅನುಭವಿಸಿದ್ದರಿಂದ ಮುಖೇಶ್ ಅಂಬಾನಿ ಮತ್ತೆ ಏಷ್ಯಾದ ಶ್ರೀಮಂತ ಉದ್ಯಮಿಯಾಗಿದ್ದಾರೆ. ಅಂಬಾನಿ ಕಳೆದ ಎರಡು ವರ್ಷಗಳಲ್ಲಿ ಏಷ್ಯಾದ ಶ್ರೀಮಂತ ವ್ಯಕ್ತಿಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿದ್ದರು. ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್‌ನಿಂದ ಜ್ಯಾಕ್ ಮಾ ಅವರನ್ನು ಹಿಂದಿಕ್ಕಿದ್ದರು.