ನವದೆಹಲಿ: ಚಲಿಸುವ ರೈಲುಗಳಲ್ಲಿ ಚಲನಚಿತ್ರಗಳು, ಮನರಂಜನಾ, ಶೈಕ್ಷಣಿಕ ಕಾರ್ಯಕ್ರಮಗಳು, ವಿಡಿಯೋಗಳಂತಹ ನಿರಂತರ ಮನರಂಜನಾ ಸೇವೆಗಳು ಲಭ್ಯವಾಗಲಿವೆ ಎಂದು ರೈಲ್ವೆಯ ಪಿಎಸ್ಯು ರೈಲ್ಟೇಸ್ ತಿಳಿಸಿದೆ.
ಆದ್ರೆ, ಪ್ರಯಾಣಿಕರು ಇಂತಹ ಮನರಂಜನಾತ್ಮಕ ಸೇವೆಗಳನ್ನು ಪಡೆಯಲು 2022ರವರೆಗೆ ಕಾಯಬೇಕಿದೆ. ಸರ್ಕಾರಿ ಟೆಲಿಕಾಂ ಕಂಪನಿಯು ಝೀ ಎಂಟರ್‌ಟೈನ್‌ಮೆಂಟ್‌ನ ಅಂಗಸಂಸ್ಥೆಯಾದ ಮಾರ್ಗೊ ನೆಟ್‌ವರ್ಕ್ ಹಾಗೂ ಡಿಜಿಟಲ್ ಎಂಟರ್ಟೈನ್ಮೆಂಟ್ ಸರ್ವೀಸ್ ಪ್ರೊವೈಡರ್ (ಡಿಇಎಸ್ಪಿ) ಅನ್ನು ರೈಲು ಮತ್ತು ನಿಲ್ದಾಣಗಳಲ್ಲಿ ಕಂಟೆಂಟ್ ಆನ್ ಡಿಮ್ಯಾಂಡ್ (ಕಾಡ್) ಸೇವೆಯನ್ನು ಒದಗಿಸಲು ಆಯ್ಕೆ ಮಾಡಿದೆ.
ಮುಂದಿನ ಎರಡು ವರ್ಷಗಳಲ್ಲಿ ಭಾರತೀಯ ರೈಲ್ವೆಯ ಎಲ್ಲ ಪ್ರೀಮಿಯಂ/ ಎಕ್ಸ್‌ಪ್ರೆಸ್/ ಮೇಲ್ ರೈಲು ಮತ್ತು ಉಪನಗರ ರೈಲುಗಳಲ್ಲಿ ಕೂಡ ಈ ಸೇವೆ ಲಭ್ಯವಾಗಲಿವೆ. ಚಲನಚಿತ್ರಗಳು, ಪ್ರದರ್ಶನಗಳು, ಶೈಕ್ಷಣಿಕ ಕಾರ್ಯಕ್ರಮಗಳು ಪ್ರಯಾಣಿಕರು ವೀಕ್ಷಿಸಬಹುದಾಗಿದೆ. ಒಪ್ಪಂದದ ಅವಧಿಯು 10 ವರ್ಷಗಳಿದ್ದು, ಅನುಷ್ಠಾನದ ಮೊದಲ ಎರಡು ವರ್ಷಗಳು ಒಳಗೊಂಡಿರಲಿದೆ ಎಂದು ರೈಲ್‌ಟೆಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.