ಕೇಂಬ್ರಿಡ್ಜ್ : ಕೊರೊನಾ ಅಧ್ಯಯನದ ಫಲಿತಾಂಶಗಳು ಶಕ್ತಿಯುತವಾದ ರಕ್ಷಣೆ ನೀಡುತ್ತವೆ ಎಂದು ದೃಢಪಟ್ಟಿದ್ದರಿಂದ ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಅವಕಾಶ ನೀಡುವಂತೆ ಅಮೆರಿಕ ಮತ್ತು ಯುರೋಪಿಯನ್ ನಿಯಂತ್ರಕರನ್ನು ಕೇಳುವುದಾಗಿ ಮೊಡೆರ್ನಾ ಇಂಕ್ ಹೇಳಿದೆ.
ಲಸಿಕೆ ಫಲಿತಾಂಶದ ಡೇಟಾವು ದೃಢವಾಗಿದ್ದು, ಅಮೆರಿಕದಲ್ಲಿ ತುರ್ತು ಬಳಕೆಯ ದೃಢೀಕರಣವನ್ನು ಸಕ್ರಿಯಗೊಳಿಸಬೇಕು ಎಂಬುದು ನಮ್ಮ ಆಸೆ.
ಜಾಗತಿಕ ಮಾರ್ಕೆಟಿಂಗ್ ಸಹ ಇದಕ್ಕೆ ದೃಢೀಕರಣ ಹಾಗೂ ನ್ಯಾಯಯುತ ವಿಸ್ತರಣೆ ನೀಡುವ ಭಾವನೆ ವ್ಯಕ್ತಪಡಿಸುತ್ತೇವೆ ಎಂದು ಕೇಂಬ್ರಿಡ್ಜ್ ಮ್ಯಾಸಚೂಸೆಸ್ಟ್ ಕಂಪನಿಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಟಾಲ್ ಝಾಕ್ಸ್ ಹೇಳಿದರು.
25-30 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಲು ಯೋಜನೆ ರೂಪಿಸುತ್ತಿದೆ ಕೇಂದ್ರ ಸರ್ಕಾರ!
ಕೊರೊನಾ ಸಾಂಕ್ರಾಮಿಕ ರೋಗ ನಿವಾರಣೆಗೆ ಅನೇಕ ಲಸಿಕೆ ಮೆಂಬರ್ಗಳು ಯಶಸ್ವಿಯಾಗಬೇಕು. ಡಿಸೆಂಬರ್ ಅವಧಿಯಲ್ಲಿ ಲಸಿಕೆಗಳನ್ನು ಪ್ರಾರಂಭಿಸಲು ಮೊಡೆರ್ನಾ ಕಂಪನಿಯು ಫಿಜರ್ ಮತ್ತು ಜರ್ಮನ್ ಪಾಲುದಾರ ಬಯೋಎನ್‌ಟೆಕ್‌ನ ಹಿಂದಿದೆ.
ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಜತೆ ಸೇರಿ ತನ್ನ ಲಸಿಕೆ ಅಭಿವೃದ್ಧಿಪಡಿಸಿದ ಮೊಡೆರ್ನಾ, ವಾರಾಂತ್ಯದಲ್ಲಿ ಅಂತಿಮ,ಅಗತ್ಯವಾದ ಹೆಚ್ಚಿನ ಫಲಿತಾಂಶಗಳನ್ನ ಪಡೆಯಲಿದೆ.