ETV Bharat / business

ನಿಧಾನಗತಿ ಎಫೆಕ್ಟ್​: ಶೇ 32ರಷ್ಟು ಉತ್ಪಾದನೆ ತಗ್ಗಿಸಿದ ಮಾರುತಿ ಸುಜುಕಿ - ಮಂದಗತಿ

ಕಳೆದ ತಿಂಗಳು ಪ್ರಯಾಣಿಕರ ವಾಹನ ಉತ್ಪಾದನೆಯು 91,602 ಯುನಿಟ್ ಆಗಿದ್ದು, 2019ರ ಮಾರ್ಚ್​ನಲ್ಲಿ 1,35,236 ಯುನಿಟ್ ಇತ್ತು. ಇದು ಶೇ 32.26ರಷ್ಟು ಕಡಿಮೆಯಾಗಿದೆ.

Maruti Suzuki
ಮಾರುತಿ ಸುಜುಕಿ
author img

By

Published : Apr 8, 2020, 4:50 PM IST

ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ, ಮಾರ್ಚ್‌ನಲ್ಲಿ ಉತ್ಪಾದನೆಯನ್ನು ಶೇ 32.05ರಷ್ಟು ತಗ್ಗಿಸಿದೆ ಎಂದು ಕಂಪನಿಯ ನಿಯಂತ್ರಕ ಫೈಲಿಂಗ್​ನಲ್ಲಿ ತಿಳಿಸಿದೆ.

ಕಂಪನಿಯು ಮಾರ್ಚ್‌ನಲ್ಲಿ ಒಟ್ಟು 92,540 ಯುನಿಟ್‌ಗಳನ್ನು ಉತ್ಪಾದಿಸಿದ್ದು, ಹಿಂದಿನ ವರ್ಷ ಅವಧಿಯಲ್ಲಿ 1,36,201 ಯುನಿಟ್‌ಗಳನ್ನು ಮಾರಾಟ ಮಾಡಿದೆ ಎಂದಿದೆ.

ಕಳೆದ ತಿಂಗಳು ಪ್ರಯಾಣಿಕರ ವಾಹನ ಉತ್ಪಾದನೆಯು 91,602 ಯುನಿಟ್ ಆಗಿದ್ದು, 2019ರ ಮಾರ್ಚ್​ನಲ್ಲಿ 1,35,236 ಯುನಿಟ್ ಇತ್ತು. ಇದು ಶೇ 32.26ರಷ್ಟು ಕಡಿಮೆಯಾಗಿದೆ ಎಂದು ಹೇಳಿದೆ.

ಆಲ್ಟೊ, ಎಸ್-ಪ್ರೆಸ್ಸೊ ವ್ಯಾಗನಾರ್, ಸಿಲೆರಿಯೊ, ಇಗ್ನಿಸ್, ಸ್ವಿಫ್ಟ್, ಬಾಲೆನೊ ಮತ್ತು ಡಿಜೈರ್ ಸೇರಿದಂತೆ ಮಿನಿ ಮತ್ತು ಕಾಂಪ್ಯಾಕ್ಟ್ ಸೆಗ್ಮೆಂಟ್ ಕಾರುಗಳ ಉತ್ಪಾದನೆಯು 67,708 ಯುನಿಟ್​ಗಳಾಗಿದ್ದು, ಕಳೆದ ಮಾರ್ಚ್​ನಲ್ಲಿ 98,602 ಯುನಿಟ್​ಗಳಷ್ಟು ಇದದ್ದು ಶೇ 31.33ರಷ್ಟು ಕಡಿಮೆಯಾಗಿದೆ.

ಯುಟಿಲಿಟಿ ವಾಹನಗಳಾದ ವಿಟಾರಾ ಬ್ರೆಝಾ, ಎರ್ಟಿಗಾ ಮತ್ತು ಎಸ್-ಕ್ರಾಸ್‌ಗಳ ಉತ್ಪಾದನೆಯು ಶೇ 14.19ರಷ್ಟು ಕುಸಿದು 15,203 ಯುನಿಟ್‌ಗಳಿಗೆ ತಲುಪಿದೆ. ಮಧ್ಯಮ ಗಾತ್ರದ ಸೆಡಾನ್ ಸಿಯಾಜ್ ಕಳೆದ ವರ್ಷ ಇದೇ ತಿಂಗಳಲ್ಲಿ 3,205 ಯುನಿಟ್‌ಗಳಿದ್ದು, ಈ ಮಾರ್ಚ್‌ನಲ್ಲಿ ಇದರ ಉತ್ಪಾದನೆ 2,146ಕ್ಕೆ ಇಳಿದಿದೆ.

ಲಘು ವಾಣಿಜ್ಯ ವಾಹನ ಉತ್ಪಾದನೆಯು 2019ರ ಮಾರ್ಚ್‌ನಲ್ಲಿ 965 ಯುನಿಟ್‌ಗಳಿಂದ ಕಳೆದ ತಿಂಗಳು 938 ಯುನಿಟ್‌ಗಳಿಗೆ ಇಳಿದಿದೆ ಎಂದು ಫೈಲಿಂಗ್​ನಲ್ಲಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.