ETV Bharat / business

GST ಪಾವತಿಯಲ್ಲಿ 300 ಕೋಟಿ ರೂ ವಂಚನೆ: ಸೀಮಾಸುಂಕ ಅಧಿಕಾರಿಗಳಿಗೆ ಆಗಲಿಲ್ಲ'ಮನ್ ಪಸಂದ್‌'!

author img

By

Published : May 25, 2019, 9:50 PM IST

Updated : May 25, 2019, 10:18 PM IST

ಕಂಪೆನಿಯ ಬಿಎಸ್ಇ ಫೈಲಿಂಗ್ ಪ್ರಕಾರ, ಕೇಂದ್ರ ಜಿಎಸ್​ಟಿ ಹಾಗೂ ಕಸ್ಟಮ್ಸ್ ಕಮಿಷನರ್ ತಂಡ ಮೇ 23 ರಂದು ಕಂಪನಿಯ ತೆರಿಗೆ ಪಾವತಿಗೆ ಸಂಬಂಧಿಸಿದ ಲೆಕ್ಕಪತ್ರಗಳನ್ನು ಶೋಧಿಸಿ ಕೆಲವನ್ನು ತಮ್ಮ ವಶಕ್ಕೆ ಪಡೆದುಕೊಂಡಿದೆ.

ಸಾಂದರ್ಭಿಕ ಚಿತ್ರ

ವಡೋದರಾ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​​ಟಿ) ಪಾವತಿಯಲ್ಲಿ ವಂಚನೆ ಎಸಗಿದ ಆಪಾದನೆಯಡಿ ಗುಜರಾತ್​ ಮೂಲದ ಮನ್​ಪಸಂದ್ ಬಿವರೇಜಸ್ ಲಿಮಿಟೆಡ್​ ಕಂಪೆನಿಯ ಮುಖ್ಯಸ್ಥರನ್ನು ಬಂಧಿಸಲಾಗಿದೆ.

ಕಂಪೆನಿಯ ಬಿಎಸ್ಇ ಫೈಲಿಂಗ್ ಪ್ರಕಾರ, ಕೇಂದ್ರ ಜಿಎಸ್​ಟಿ ಹಾಗೂ ಕಸ್ಟಮ್ಸ್ ಕಮಿಷನರ್ ತಂಡ ಮೇ 23 ರಂದು ಕಂಪನಿಯ ತೆರಿಗೆ ಪಾವತಿಗೆ ಸಂಬಂಧಿಸಿದ ಲೆಕ್ಕಪತ್ರಗಳನ್ನು ಶೋಧನೆ ನಡೆಸಿ ಕೆಲವನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಮೇ 24ರಂದು ಜಿಎಸ್​ಟಿ ಭವನ ಕಚೇರಿಯಲ್ಲಿ ಮತ್ತಷ್ಟು ತನಿಖೆ ನಡೆಸಿದಾಗ ವಂಚನೆ ನಡೆದಿರುವುದು ಮೇಲ್ನೋಟಕ್ಕೆ ಕಾಣಿಸಿದ್ದು, ಆಪಾದಿತರನ್ನು ವಶಕ್ಕೆ ಪಡೆದಿದ್ದಾರೆ.

ಟೀಮ್​ ನಿರ್ದೇಶಕ ಅಭಿಷೇಕ್ ಸಿಂಗ್​, ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಪರೇಶ್ ಠಾಕರ್​ (ಸಿಂಗ್ ಸಹೋದರ) ಹಾಗೂ ಹರ್ಷವರ್ಧನ್​ ಸಿಂಗ್​ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮೇ 23ರಂದು ವಶಕ್ಕೆ ಪಡೆದ ದಾಖಲೆಗಳ ಪರಿಶೋಧನೆಯ ಹಾಗೂ ಶುಕ್ರವಾರ ಬಿಡುಗಡೆಯಾದ ರಾಜ್ಯ ಜಿಎಸ್​ಟಿ ಹೇಳಿಕೆಯ ಅನ್ವಯ, ನಕಲಿ ಘಟಕಗಳನ್ನು ಸ್ಥಾಪಿಸಿ ಸಾಲ ಮತ್ತು ತೆರಿಗೆ ವಂಚನೆ ಮಾಡಲಾಗಿದೆ. ಸುಮಾರು ₹ 40 ಕೋಟಿ ರೂ ತೆರಿಗೆ ವಂಚನೆ ಮೋಸದ ಮೊತ್ತ ₹ 300 ಕೋಟಿ ತಲುಪಬಹುದು ಎಂದು ಹೇಳಲಾಗುತ್ತಿದೆ.

Intro:Body:Conclusion:
Last Updated : May 25, 2019, 10:18 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.