ETV Bharat / business

ಜುಲೈ ಮಾಸಿಕದಲ್ಲಿ ಶೇ.36ರಷ್ಟು ಮಾರಾಟ ಕುಸಿತ ದಾಖಲಿಸಿದ ಎಂ&ಎಂ - ಮಹೀಂದ್ರಾ ವಾಹನ ಮಾರಾಟ

ಮಹೀಂದ್ರಾದಲ್ಲಿ ಒಟ್ಟಾರೆ ವಾಹನ ಮಾರಾಟದಲ್ಲಿ ಹೆಚ್ಚುತ್ತಿರುವ ಪ್ರವೃತ್ತಿ ನಮಗೆ ಸಂತಸ ತಂದಿದೆ. ಬೇಡಿಕೆಯು ಪುನಶ್ಚೇತನಗೊಂಡಿದೆ. ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ವ್ಯಾಪಕ ಬೇಡಿಕೆ ಕಂಡು ಬಂದಿದೆ..

M&M
ಎಂ&ಎಂ
author img

By

Published : Aug 1, 2020, 5:06 PM IST

ನವದೆಹಲಿ : ಆಟೋಮೊಬೈಲ್ ದೈತ್ಯ ಮಹೀಂದ್ರಾ ಅಂಡ್​ ಮಹೀಂದ್ರಾ(ಎಂ&ಎಂ), ಜುಲೈ ಮಾಸಿಕದಲ್ಲಿ ತನ್ನ ಒಟ್ಟು ಮಾರಾಟದಲ್ಲಿ ಶೇ.36ರಷ್ಟು ಕುಸಿತ ದಾಖಲಿಸಿದೆ ಎಂದು ವರದಿ ಮಾಡಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಮಾರಾಟವಾದ 40,142 ವಾಹನಗಳಿಗೆ ಹೋಲಿಸಿದ್ರೆ ರಫ್ತು ಸೇರಿ 25,678 ಯುನಿಟ್‌ಗಳು ಕಳೆದ ತಿಂಗಳು ಮಾರಾಟ ಆಗಿವೆ ಎಂದು ನಿಯಂತ್ರಕ ಫೈಲಿಂಗ್‌ನಲ್ಲಿ ಕಂಪನಿ ತಿಳಿಸಿದೆ.

ಕಂಪನಿಯು ಕಳೆದ ತಿಂಗಳು ದೇಶೀಯ ಮಾರಾಟದಲ್ಲಿ ಶೇ.35ರಷ್ಟು ಕುಸಿತವನ್ನು ವರದಿ ಮಾಡಿದೆ. ಇದು 2019ರ ಜುಲೈನಲ್ಲಿ 37,474 ಯುನಿಟ್​ಗಳ ಪರಿಶೀಲನೆ ಅವಧಿಯಲ್ಲಿ 24,211 ಯುನಿಟ್​ಗಳು ಮಾರಾಟ ಮಾಡಿದೆ. ಪರಿಶೀಲನಾ ತಿಂಗಳಲ್ಲಿ ಎಂ&ಎಂ 1,467 ಯುನಿಟ್‌ಗಳನ್ನು ರಫ್ತು ಮಾಡಿದ್ದು, 2019ರ ಜುಲೈನಲ್ಲಿ 2,668 ವಾಹನಗಳು ರವಾನೆ ಆಗಿದ್ದವು.

ಮಹೀಂದ್ರಾದಲ್ಲಿ ಒಟ್ಟಾರೆ ವಾಹನ ಮಾರಾಟದಲ್ಲಿ ಹೆಚ್ಚುತ್ತಿರುವ ಪ್ರವೃತ್ತಿ ನಮಗೆ ಸಂತಸ ತಂದಿದೆ. ಬೇಡಿಕೆಯು ಪುನಶ್ಚೇತನಗೊಂಡಿದೆ. ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ವ್ಯಾಪಕ ಬೇಡಿಕೆ ಕಂಡು ಬಂದಿದೆ.

ಯುಟಿಲಿಟಿ ವೆಹಿಕಲ್ಸ್ ಮತ್ತು ಸ್ಮಾಲ್ ಕಮರ್ಷಿಯಲ್ ವೆಹಿಕಲ್ಸ್​ ಮಾರಾಟವು ಜೂನ್‌ಗೆ ಹೋಲಿಸಿದ್ರೆ ಜುಲೈನಲ್ಲಿ ವಿಚಾರಣೆ ಮತ್ತು ಬುಕ್ಕಿಂಗ್ ಮಟ್ಟವು ಹೆಚ್ಚಾಗಿದೆ ಎಂದು ಎಂ&ಎಂ ಆಟೋಮೋಟಿವ್ ಮಾರಾಟ ಮತ್ತು ಮಾರುಕಟ್ಟೆ ಮುಖ್ಯಸ್ಥ ವಿಜಯ್ ರಾಮ್ ನಕ್ರಾ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.