ನವದೆಹಲಿ: ಇನ್ಪುಟ್ ವೆಚ್ಚಗಳ ಏರಿಕೆಯ ಸರಿದೂಗಿಸುವ ಭಾಗವಾಗಿ ಮುಂದಿನ ತಿಂಗಳಿನಿಂದ ತನ್ನ ಶ್ರೇಣಿಯ ಟ್ರ್ಯಾಕ್ಟರ್ ಬೆಲೆಯನ್ನು ಹೆಚ್ಚಿಸುವುದಾಗಿ ಮಹೀಂದ್ರಾ ಅಂಡ್ ಮಹೀಂದ್ರಾ (ಎಂ&ಎಂ) ತಿಳಿಸಿದೆ.
ಎಂ& ಎಂನ ಕೃಷಿ ಸಂಬಂಧಿತ ಸರಕುಗಳ ದರ ಹೆಚ್ಚಳವು 2021ರ ಜನವರಿ 1ರಿಂದ ಜಾರಿಗೆ ಬರುತ್ತದೆ. ಇದು ಎಲ್ಲ ಶ್ರೇಣಿಯ ಟ್ರ್ಯಾಕ್ಟರ್ಗಳ ಬೆಲೆಯನ್ನೂ ಏರಿಕೆ ಮಾಡಲಾಗುತ್ತಿದೆ ಎಂದು ಕಂಪನಿಯು ನಿಯಂತ್ರಕ ಫೈಲಿಂಗ್ನಲ್ಲಿ ತಿಳಿಸಿದೆ.
ಮಾರುಕಟ್ಟೆ ಶುಲ್ಕ ಹೆಚ್ಚಳಕ್ಕೆ ವಿರೋಧ : ಏಷ್ಯಾದ ಎರಡನೇ ಅತಿದೊಡ್ಡ ಎಪಿಎಂಸಿ ಸಂಪೂರ್ಣ ಸ್ಥಗಿತ
ಸರಕುಗಳ ಬೆಲೆ ಹೆಚ್ಚಳ ಮತ್ತು ಇತರ ಇನ್‌ಪುಟ್ ವೆಚ್ಚಗಳಿಂದಾಗಿ ಅನಿವಾರ್ಯವಾಗಿ ಏರಿಕೆ ಮಾಡಲಾಗುತ್ತಿದೆ. ವಿವಿಧ ಮಾದರಿಗಳ ಬೆಲೆ ಹೆಚ್ಚಳದ ವಿವರಗಳನ್ನು ಸರಿಯಾದ ಸಮಯದಲ್ಲಿ ತಿಳಿಸಲಾಗುವುದು ಎಂದಿದೆ.
ವಾರದ ಹಿಂದೆಯಷ್ಟೇ ಇನ್ಪುಟ್ ವೆಚ್ಚಗಳ ಏರಿಕೆಯ ಪರಿಣಾಮವನ್ನು ಭಾಗಶಃ ಸರಿದೂಗಿಸಲು ಮುಂದಿನ ತಿಂಗಳಿಂದ ಎಂ&ಎಂ ತನ್ನ ಸಂಪೂರ್ಣ ಶ್ರೇಣಿಯ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿತ್ತು.