ETV Bharat / business

ಎಲ್​ಜಿ 'W' ಶ್ರೇಣಿಯ 2 ಸ್ಮಾರ್ಟ್​ ಫೋನ್ ಜಸ್ಟ್​ ₹ 10 ಸಾವಿರ ಬೆಲೆಗೆ -

ಇಂದು ನಮಗೆ ಅತ್ಯಂತ ಮಹತ್ವದ ದಿನ. ಎಲ್​ಜಿ ತನ್ನ ಮೂರು ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇಲ್ಲಿನ ಗ್ರಾಹಕರ ಆದ್ಯತೆಗಳನ್ನು ಗಮನದಲ್ಲಿ ಇರಿಸಿಕೊಂಡು ಈ ಉತ್ಪನ್ನಗಳನ್ನು ತಯಾರಿಸಲಾಗಿದೆ ಎಂದು ಹೇಳಿದ್ದಾರೆ.

ಚಿತ್ರ ಕೃಪೆ ಟ್ವಿಟ್ಟರ್
author img

By

Published : Jun 26, 2019, 11:09 PM IST

ನವದೆಹಲಿ: ದಕ್ಷಿಣ ಕೊರಿಯಾ ಮೂಲದ ಎಲ್​ಜಿ ಕಂಪನಿಯು ಭಾರತೀಯ ಮಾರುಕಟ್ಟೆಗೆ 'W' ಶ್ರೇಣಿಯ ಮೂರು ಸ್ಮಾರ್ಟ್​ ಫೋನ್​ಗಳನ್ನು ಶೀಘ್ರವೇ ಪರಿಚಯಿಸಲಿದೆ.

'W' ಶ್ರೇಣಿಯಲ್ಲಿ ಮುಂಚೂಣಿಯಲ್ಲಿರುವ 'ಎಲ್​ಜಿ ಡಬ್ಲ್ಯು30', 'ಎಲ್​ಜಿ ಡಬ್ಲ್ಯು30 ಪ್ರೋ' ಹಾಗೂ 'ಎಲ್​ಜಿ ಡಬ್ಲ್ಯು10' ಮೊಬೈಲ್​ಗಳು ಬಿಡುಗಡೆ ಆಗಲಿವೆ. 'ಎಲ್​ಜಿ ಡಬ್ಲ್ಯು10' ಬೆಲೆ ₹ 8,999 ಇದ್ದರೆ, 'ಎಲ್​ಜಿ ಡಬ್ಲ್ಯು30' ₹ 9,999 ಇರಲಿದೆ. ಡಬ್ಲ್ಯು30 ಪ್ರೋ ಬೆಲೆಯನ್ನು ಶೀಘ್ರದಲ್ಲೇ ನಿರ್ಧರಿಸಿ ತಿಳಿಸಲಾಗುವುದು ಎಂದು ಭಾರತ ವ್ಯಾಪ್ತಿಯ ಎಲೆಕ್ಟ್ರಾನಿಕ್​ ವಿಭಾಗದ ವ್ಯವಸ್ಥಾಪಕ ಕಿ ವಾನ್ ಕಿಮ್ ಹೇಳಿದ್ದಾರೆ.

ಇಂದು ನಮಗೆ ಅತ್ಯಂತ ಮಹತ್ವದ ದಿನ. ಎಲ್​ಜಿ ತನ್ನ ಮೂರು ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇಲ್ಲಿನ ಗ್ರಾಹಕರ ಆದ್ಯತೆಗಳನ್ನು ಗಮನದಲ್ಲಿ ಇರಿಸಿಕೊಂಡು ಈ ಉತ್ಪನ್ನಗಳನ್ನು ತಯಾರಿಸಲಾಗಿದೆ ಎಂದು ಹೇಳಿದ್ದಾರೆ.

'ಎಲ್​ಜಿ ಡಬ್ಲ್ಯು30' ಮತ್ತು ಡಬ್ಲ್ಯು10 ಕ್ರಮವಾಗಿ 6.26 ಹಾಗೂ 6.19 ಇಂಚು ಹೆಚ್​ಡಿ+ ಪ್ರದರ್ಶಕ ಹೊಂದಿರಲಿದೆ. ಪಿ 22 ಪ್ರೊಸೆಸರ್​​ ಜೊತೆಗೆ 3 ಜಿಬಿ ರ್ಯಾಮ್​ ಮತ್ತು 32 ಜಿಬಿ ಆಂತರಿಕ ಮೆಮೋರಿ ಸಾಮರ್ಥ್ಯ ಹೊಂದಿದೆ ಎಂದು ವಿವರಿಸಿದರು.

ಡಬ್ಲ್ಯು30 ಮೊಬೈಲ್​ ಮೂರು ಕ್ಯಾಮರಾಗಳನ್ನು ಹೊಂದಿದೆ. 12ಎಂಪಿ ಪ್ರೈಮರಿ ಲೋ ಲೈಟ್​ ಸೆನ್ಸರ್, 13ಎಂಪಿ ವೈಡ್ ಆಂಗಲ್​ ಲೆನ್ಸ್​ ಹಾಗೂ 2 ಎಂಪಿ ಡೆಪ್ತ್​ ಸೆನ್ಸರ್ ಹಾಗೂ 16 ಎಂಪಿ ಸೆಲ್ಫ್​ ಶೂಟರ್ ಫೀಚರ್​ಗಳಿವೆ.

'ಎಲ್​ಜಿ ಡಬ್ಲ್ಯು10' 13ಎಂಪಿ ಪ್ರೈಮರಿ ಲೆನ್ಸ್​ ಮತ್ತು 5 ಎಂಪಿ ಸೆಕೆಂಡರಿ ಶೂಟರ್ ಜೊತೆಗೆ 8 ಎಂಪಿ ಸೆಲ್ಫ್ ಶೂಟರ್ ಲಕ್ಷಣಗಳನ್ನು ಹೊಂದಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.