ETV Bharat / business

ಇತಿಹಾಸದ ಪುಟ ಸೇರಲಿರುವ 94 ವರ್ಷಗಳ ಲಕ್ಷ್ಮಿ ವಿಲಾಸ್​ ಬ್ಯಾಂಕ್​: ಸಿಂಗಾಪುರ ಮೂಲದ DBIL ಜತೆ ವಿಲೀನ! - ಬ್ಯಾಂಕ್ ವಿಲೀನದ ಆರ್​​ಬಿಐ ಕರಡು ಯೋಜನೆ

ಚೆನ್ನೈ ಮೂಲದ ಲಕ್ಷ್ಮಿ ವಿಲಾಸ್ ಬ್ಯಾಂಕ್ (ಎಲ್​ವಿಬಿ) 94 ವರ್ಷಗಳ ಇತಿಹಾಸ ಹೊಂದಿದ್ದು, ಚಿಲ್ಲರೆ ಮತ್ತು ಎಸ್‌ಎಂಇ ಗ್ರಾಹಕರ ನೆಲೆಯನ್ನು ಹೊಂದಿದೆ. ದಕ್ಷಿಣ ಭಾರತದಲ್ಲಿ ಬಲವಾದ ಬ್ಯಾಂಕಿಂಗ್ ಅಸ್ತಿತ್ವ ಕಾಯ್ದುಕೊಂಡಿದೆ.

Bank merger
ಬ್ಯಾಂಕ್ ವಿಲೀನ
author img

By

Published : Nov 18, 2020, 4:41 PM IST

ಹೈದರಾಬಾದ್: ತೀವ್ರ ನಗದು ಬಿಕ್ಕಟ್ಟಿನಿಂದ ಹೆಣಗಾಡುತ್ತಿರುವ ಲಕ್ಷ್ಮಿ ವಿಲಾಸ್ ಬ್ಯಾಂಕ್ (ಎಲ್‌ವಿಬಿ) ಅನ್ನು ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್ (ಡಿಬಿಐಎಲ್) ಜತೆಗೆ ವಿಲೀನಗೊಳಿಸುವ ಕರಡು ಯೋಜನೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸಿದೆ.

ಇದೇ ವೇಳೆ, ಹಣಕಾಸು ಸಚಿವಾಲಯವು ಒಂದು ತಿಂಗಳ ಅವಧಿಗೆ ಪ್ರತಿ ಠೇವಣಿದಾರರಿಗೆ ವಾಪಸಾತಿ ಮಿತಿಯನ್ನು 25 ಸಾವಿರ ರೂ. ಸೀಮಿತಗೊಳಿಸಿದೆ.

ಕೇಂದ್ರ ಬ್ಯಾಂಕ್ ಮತ್ತು ಸರ್ಕಾರದಿಂದ ಒಂದರ ಹಿಂದೊಂದರಂತೆ ಪ್ರಕಟಣೆಗಳು, ಯೆಸ್ ಬ್ಯಾಂಕ್ ಮತ್ತು ಪಿಎಂಸಿ ಬ್ಯಾಂಕ್​ನಲ್ಲಿ ಸಂಭವಿಸಿದ ಇತ್ತೀಚಿನ ವಿಷಾದಕರ ಸ್ಥಿತಿಗಳನ್ನು ಠೇವಣಿದಾರರಿಗೆ ನೆನಪಿಸುತ್ತಿವೆ.

ಚೆನ್ನೈ ಮೂಲದ ಲಕ್ಷ್ಮಿ ವಿಲಾಸ್ ಬ್ಯಾಂಕ್ (ಎಲ್​ವಿಬಿ) 94 ವರ್ಷಗಳ ಇತಿಹಾಸ ಹೊಂದಿದ್ದು, ಚಿಲ್ಲರೆ ಮತ್ತು ಎಸ್‌ಎಂಇ ಗ್ರಾಹಕರ ನೆಲೆಯನ್ನು ಹೊಂದಿದೆ. ದಕ್ಷಿಣ ಭಾರತದಲ್ಲಿ ಬಲವಾದ ಬ್ಯಾಂಕಿಂಗ್ ಅಸ್ತಿತ್ವ ಕಾಯ್ದುಕೊಂಡಿದೆ.

ಸೆಪ್ಟೆಂಬರ್ ಕೊನೆಯ ವಾರದಲ್ಲಿ ಬ್ಯಾಂಕ್​ನ ನಿತ್ಯದ ವ್ಯವಹಾರಗಳನ್ನು ನಿರ್ವಹಿಸಲು ಆರ್‌ಬಿಐ ಮೂರು ಸದಸ್ಯರ ನಿರ್ದೇಶಕರ ಸಮಿತಿ ಅನುಮೋದಿಸಿತು. ಮೀಟಾ ಮಖಾನ್ ಸಮಿತಿಯ ಮುಖ್ಯಸ್ಥರಾಗಿದ್ದು, ಶಕ್ತಿ ಸಿನ್ಹಾ ಮತ್ತು ಸತೀಶ್ ಕುಮಾರ್ ಕಲ್ರಾ ಇದರ ಸದಸ್ಯರಾಗಿದ್ದರು.

ನವೆಂಬರ್ 17ರಂದು ಆರ್‌ಬಿಐ ಎಲ್‌ವಿಬಿ ವಿಲೀನ ಕರಡು ಯೋಜನೆ ಘೋಷಿಸಿತು. ವಿಲೀನ ಪ್ರಕ್ರಿಯೆಗೆ ಸಿಂಗಾಪುರದ ಡಿಬಿಎಸ್ ಬೆಂಬಲಿಸಿ ಅನುಮೋದನೆ ನೀಡಿದರೆ 2,500 ಕೋಟಿ ರೂ. (ಎಸ್‌ಜಿಡಿ 463 ಮಿಲಿಯನ್ ಡಾಲರ್) ಡಿಬಿಐಎಲ್‌ಗೆ ಸೇರುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.