ETV Bharat / business

ಕ್ಲೈಮ್ಯಾಕ್ಸ್​ ತಲುಪಿದ ದೇಶಭ್ರಷ್ಟ 'ನಿಮೋ' ಹಸ್ತಾಂತರ ಕೇಸ್​: ಅಂತಿಮ ವಿಚಾರಣೆಗೆ ಡೇಟ್​ ಫಿಕ್ಸ್​! - ನೀರವ್ ಮೋದಿ ಕಾರಾಗೃಹ

ಲಂಡನ್‌ ವೆಸ್ಟ್​ಮಿನ್​​ಸ್ಟರ್ ಮ್ಯಾಜಿಸ್ಟ್ರೇಟ್​ನ ನ್ಯಾಯಾಧೀಶರು ನೀರವ್ ಮೋದಿಯ ಬಂಧನ ಅವಧಿಯನ್ನು ವಿಸ್ತರಿಸಿದ್ದು, ಅಂತಿಮ ಹಸ್ತಾಂತರ ವಿಚಾರಣೆಯು 2021ರ ಜನವರಿ 7 ಮತ್ತು 8ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.

Nirav Modi
ನೀರವ್ ಮೋದಿ
author img

By

Published : Dec 2, 2020, 4:37 PM IST

ಲಂಡನ್: ಪಂಜಾಬ್ ನ್ಯಾಷನಲ್​ ಬ್ಯಾಂಕ್​​ಗೆ 13,500 ಕೋಟಿ ರೂ. ವಂಚನೆ ಎಸಗಿ ವಿದೇಶಗಳಲ್ಲಿ ತಲೆ ಮರೆಸಿಕೊಂಡು ಲಂಡನ್​ ಜೈಲಿನಲ್ಲಿ ಇರುವ ಆರ್ಥಿಕ ಅಪರಾಧಿ/ ವಜ್ರೋದ್ಯಮಿ ನೀರವ್ ಮೋದಿ ಹಸ್ತಾಂತರದ ಅಂತಿಮ ವಿಚಾರಣೆ 2021ರ ಜನವರಿಯಲ್ಲಿ ನಡೆಯಲಿದೆ.

ಭಾರತದಿಂದ ಪರಾರಿಯಾಗಿದ್ದ ವಜ್ರ ವ್ಯಾಪಾರಿ ನೀರವ್, ವಿದೇಶಗಳಲ್ಲಿ ತಲೆ ಮರೆಸಿಕೊಂಡಿದ್ದರು. ಇಂಟರ್​ಪೋಲ್​ ರೆಡ್​ ಕಾರ್ನರ್​ ನೋಟಿಸ್ ಹೊರಡಿಸಿದ ಬಳಿಕ ಬ್ರಿಟನ್ ಪೊಲೀಸರಿಂದ ಬಂಧಿತರಾಗಿ ಲಂಡನ್​ನ ವಾಂಡ್ಸ್​ವರ್ತ್​ ಕಾರಾಗೃಹ ಖೈದಿ ಆಗಿದ್ದಾರೆ.

ಲಂಡನ್‌ ವೆಸ್ಟ್​ಮಿನ್​​​ಸ್ಟರ್ ಮ್ಯಾಜಿಸ್ಟ್ರೇಟ್​ನ ನ್ಯಾಯಮೂರ್ತಿಗಳು ನೀರವ್ ಮೋದಿಯ ಬಂಧನ ಅವಧಿಯನ್ನು ವಿಸ್ತರಿಸಿದ್ದು, ಅಂತಿಮ ಹಸ್ತಾಂತರ ವಿಚಾರಣೆಯು 2021ರ ಜನವರಿ 7 ಮತ್ತು 8ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.

ಚಿನ್ನಾಭರಣ ಖರೀದಿದಾರರಿಗೆ ಕಹಿ ಸುದ್ದಿ: 1,280 ರೂ. ಜಿಗಿದ ಬೆಳ್ಳಿ, ಬಂಗಾರ ದರ ಕೇಳುವಂತಿಲ್ಲ!

49 ವರ್ಷದ ನೀರವ್ ದಕ್ಷಿಣ ಲಂಡನ್‌ನ ವಾಂಡ್ಸ್‌ವರ್ತ್ ಕಾರಾಗೃಹದಿಂದ ವಿಡಿಯೋಲಿಂಕ್ ಮೂಲಕ ವಿಚಾರಣೆಗೆ ಒಳಗಾದರು. 2019ರ ಮಾರ್ಚ್​ನಲ್ಲಿ ಬಂಧಿಸಿದಾಗಿನಿಂದ ಇದೇ ಕಾರಾಗೃಹದಲ್ಲಿ ಇದ್ದಾರೆ.

ಭದ್ರತೆಗಾಗಿ ಹೆಚ್ಚಿನ ಹಣವನ್ನು ಖಾತ್ರಿಯಾಗಿ ನೀಡಿ ಕಠಿಣವಾದ ಜಾಮೀನು ಷರತ್ತುಗಳನ್ನು ಒಪ್ಪಿಕೊಂಡಿದ್ದರೂ ನೀರವ್​ ಮನವಿ ಮಾಡಿದ ಹಲವಾರು ಜಾಮೀನು ಅರ್ಜಿಗಳನ್ನು ಪದೇ ಪದೆ ನಿರಾಕರಿಸಲಾಗಿದೆ. ಭಾರತಕ್ಕೆ ನೀರವ್ ಹಸ್ತಾಂತರ ಅಂತಿಮ ವಿಚಾರಣೆ ವರ್ಷದ ಆರಂಭದಲ್ಲಿ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.