ETV Bharat / business

ಬಳ್ಳಾರಿ ಜಿಂದಾಲ್ ಪ್ಲಾಂಟ್​​ನಲ್ಲಿ ವೈದ್ಯಕೀಯ ಆಮ್ಲಜನಕ ಉತ್ಪಾದನೆ ಮೂರು ಪಟ್ಟು ಹೆಚ್ಚಳ - ಜೆಎಸ್​​ಡಬ್ಲ್ಯೂ ವೈದ್ಯಕೀಯ ಆಕ್ಸಿಜನ್​

ಜಿಲ್ಲೆಯ ಸಂಡೂರು ತಾಲೂಕಿನ ವಿದ್ಯಾನಗರದಲ್ಲಿನ ಜಿಂದಾಲ್ ಗ್ರೂಪ್​ನ ಪ್ಲಾಂಟ್​ನಲ್ಲಿ ವೈದ್ಯಕೀಯ ಆಮ್ಲಜನಕದ ಉತ್ಪಾದನೆ ಮೂರು ಪಟ್ಟು ಹೆಚ್ಚಾಗಲಿದೆ. ಏಪ್ರಿಲ್ ತಿಂಗಳ ಆರಂಭದಲ್ಲಿ ಸರಾಸರಿ 200 ಟನ್​ನಷ್ಟು ಉತ್ಪಾದಿಸಲಾಗಿದ್ದು, ವೈದ್ಯಕೀಯ ಆಮ್ಲಜನಕದ ಉತ್ಪಾದನೆ ಈಗಾಗಲೇ ಸರಾಸರಿ 680 ಟನ್​ಗೆ ಏರಿಸಿದೆ.

JSW Steel
JSW Steel
author img

By

Published : Apr 28, 2021, 5:29 PM IST

ಬಳ್ಳಾರಿ: ಕೊರೊನಾ ಎರಡನೇ ಅಲೆಯ ವ್ಯಾಪಕತೆಯಿಂದ ವೈದ್ಯಕೀಯ ಆಮ್ಲಜನಕದ ಬೇಡಿಕೆ ಹೆಚ್ಚಾಗಿದೆ. ಇದನ್ನು ಅರಿತ ಜಿಂದಾಲ್​ ಗ್ರೂಪ್​, ಆಕ್ಸಿಜನ್​​ ಉತ್ಪಾದನೆ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸುವುದಾಗಿ ತಿಳಿಸಿದೆ.

ಜಿಲ್ಲೆಯ ಸಂಡೂರು ತಾಲೂಕಿನ ವಿದ್ಯಾನಗರದಲ್ಲಿನ ಜಿಂದಾಲ್ ಗ್ರೂಪ್​ನ ಪ್ಲಾಂಟ್​ನಲ್ಲಿ ವೈದ್ಯಕೀಯ ಆಮ್ಲಜನಕದ ಉತ್ಪಾದನೆ ಮೂರು ಪಟ್ಟು ಹೆಚ್ಚಾಗಲಿದೆ. ಏಪ್ರಿಲ್ ತಿಂಗಳ ಆರಂಭದಲ್ಲಿ ಸರಾಸರಿ 200 ಟನ್​ನಷ್ಟು ಉತ್ಪಾದಿಸಲಾಗಿದ್ದು, ವೈದ್ಯಕೀಯ ಆಮ್ಲಜನಕದ ಉತ್ಪಾದನೆ ಈಗಾಗಲೇ ಸರಾಸರಿ 680 ಟನ್​ಗೆ ಏರಿಸಿದೆ.

ಇದೇ ತಿಂಗಳಲ್ಲಿ ಜೆಎಸ್ ಡಬ್ಲ್ಯೂ ಸ್ಟೀಲ್ ವಿಜಯನಗರ ವರ್ಕ್ಸ್ 11,500 ಟನ್​ಗಿಂತಲೂ ಅಧಿಕ ವೈದ್ಯಕೀಯ ಆಮ್ಲಜನಕ ಪೂರೈಸಿದೆ. ಇದರ ಬಹುಪಾಲು ಭಾಗ ನಮ್ಮ ರಾಜ್ಯದಲ್ಲೇ ಪೂರೈಕೆಯಾಗುತ್ತಿದೆ. ಕೋವಿಡ್ ಕೇರ್ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ ಲಭ್ಯತೆಯನ್ನ ಹೆಚ್ಚಿಸಲು ಅನೇಕ ಕ್ರಮಗಳನ್ನ ಕೈಗೊಳ್ಳಲಾಗಿದೆ.

ಉಕ್ಕಿನ ಉತ್ಪಾದನೆಯ ಆಪ್ಟಿಮೈಸೇಷನ್ ಮತ್ತು ವೈದ್ಯಕೀಯ ಆಮ್ಲಜನಕದ ಲಭ್ಯತೆ ಹೆಚ್ಚಿಸುತ್ತದೆ. ಸಾಂಕ್ರಾಮಿಕ ರೋಗಗಳ ಪರಿಣಾಮವನ್ನ ಕಡಿಮೆ ಮಾಡಲು ಸರ್ಕಾರ ಮತ್ತು ಆರೋಗ್ಯ ಕ್ಷೇತ್ರಕ್ಕೆ ಎಲ್ಲ ಬೆಂಬಲವನ್ನು ನೀಡಲು ನಾವು ಸದಾ ಬದ್ಧರಾಗಿದ್ದೇವೆ. ಸಮಾಜಕ್ಕೆ ಎದುರಾಗಿರುವ ಕಷ್ಟಗಳನ್ನ ಕಡಿಮೆ ಮಾಡುವಲ್ಲಿ ನಮ್ಮ ಪ್ರಾಮಾಣಿಕ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ಜೆಎಸ್ ಡಬ್ಲ್ಯೂ ಸ್ಟೀಲ್ ವಿಜಯನಗರ ವರ್ಕ್ಸ್​ ಅಧ್ಯಕ್ಷ ರಾಜಶೇಖರ ಪಟ್ಟಣಶೆಟ್ಟಿ ತಿಳಿಸಿದ್ದಾರೆ.

ಜೀವಗಳನ್ನ ಉಳಿಸಲು ಈ ನಿರ್ಣಾಯಕ ಕಾಲದಲ್ಲಿ ವೈದ್ಯಕೀಯ ಆಮ್ಲಜನಕದ ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸಲು ಜೆಎಸ್​ಡಬ್ಲ್ಯೂ ಸ್ಟೀಲ್ ಬದ್ಧವಾಗಿದೆ. ನಮ್ಮ ರಾಷ್ಟ್ರದ ಹಿತದೃಷ್ಟಿಯಿಂದ ಆಮ್ಲ ಜನಕದ ಪೂರೈಕೆ ಮಾಡಲು ಸಂಸ್ಥೆಯು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.