ನವದೆಹಲಿ: ರಿಲಯನ್ಸ್ ಜಿಯೋ ಸೆಕೆಂಡಿಗೆ ಸರಾಸರಿ 20.8 ಮೆಗಾಬಿಟ್ (ಎಂಬಿಪಿಎಸ್) ಡೌನ್ಲೋಡ್ ವೇಗ ಹೊಂದಿರುವ ವೇಗದ ಮೊಬೈಲ್ ನೆಟ್‌ವರ್ಕ್ ಆಗಿ ಮುಂದುವರೆದಿದೆ.
ವೊಡಾಫೋನ್ ನವೆಂಬರ್‌ನಲ್ಲಿ 6.5 ಎಂಬಿಪಿಎಸ್ ವೇಗದ ಅಪ್ಲೋಡ್ ಮೂಲಕ ಇತರರಿಗಿಂತ ಮುಂದಿದೆ. ಜಿಯೋ ತನ್ನ ಹತ್ತಿರದ ಪ್ರತಿಸ್ಪರ್ಧಿ ವೊಡಾಫೋನ್ ಡೌನ್‌ಲೋಡ್ ವೇಗವನ್ನು ದ್ವಿಗುಣಗೊಳಿಸಿದೆ.
ವೊಡಾಫೋನ್ ಮತ್ತು ಐಡಿಯಾ ಸೆಲ್ಯುಲಾರ್ ತಮ್ಮ ಮೊಬೈಲ್ ವ್ಯವಹಾರವನ್ನು ವೊಡಾಫೋನ್ ಐಡಿಯಾ ಲಿಮಿಟೆಡ್ ಆಗಿ ವಿಲೀನಗೊಳಿಸಿದ್ದರೂ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್), ಪ್ರತ್ಯೇಕ ನೆಟ್‌ವರ್ಕ್ ವೇಗದ ಡೇಟಾ ಬಿಡುಗಡೆ ಮಾಡುತ್ತಿದೆ.
ಆಸ್ತಿ ತೆರಿಗೆ ಪಾವತಿದಾರರಿಂದ ವಂಚನೆ ಆರೋಪ: ಬೆಂಗಳೂರಿನ ಲಕ್ಷಾಂತರ ಜನರಿಗೆ ಬಿಬಿಎಂಪಿ ನೋಟಿಸ್
ಡಿಸೆಂಬರ್ 10ರಂದು ನವೀಕರಿಸಿದ ಟ್ರಾಯ್‌ನ ಮಾಹಿತಿಯ ಪ್ರಕಾರ, ವೊಡಾಫೋನ್ ಡೌನ್‌ಲೋಡ್ ವೇಗ ನವೆಂಬರ್‌ನಲ್ಲಿ 9.8 ಎಂಬಿಪಿಎಸ್ ದಾಖಲಾಗಿದೆ. ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ ಕ್ರಮವಾಗಿ 8.8 ಎಂಬಿಪಿಎಸ್ ಮತ್ತು 8 ಎಂಬಿಪಿಎಸ್ ಡೌನ್ಲೋಡ್ ವೇಗ ಹೊಂದಿವೆ. ಅಪ್ಲೋಡ್ ವಿಭಾಗದಲ್ಲಿ ವೊಡಾಫೋನ್ 6.5 ಎಂಬಿಪಿಎಸ್ ನೆಟ್‌ವರ್ಕ್ ವೇಗದೊಂದಿಗೆ ಅಗ್ರಸ್ಥಾನದಲ್ಲಿದೆ. ಐಡಿಯಾ 5.8 ಎಂಬಿಪಿಎಸ್, ಏರ್‌ಟೆಲ್ 4 ಎಂಬಿಪಿಎಸ್ ಮತ್ತು ಜಿಯೋ 3.7 ಎಂಬಿಪಿಎಸ್ ಅಪ್ಲೋಡ್ ವೇಗ ಹೊಂದಿದೆ.