ಮುಂಬೈ: ಜೆಟ್ ಏರ್‌ವೇಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನರೇಶ್ ಗೋಯಾಲ್ ಬಳಿಕ ನೂತನ ಆಡಳಿತ ಮಂಡಳಿಗೆ ಮೊದಲ ಸವಾಲು ಎದುರಾಗಿದೆ.
ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟವು ಸಂಸ್ಥೆಯನ್ನು ನಿಯಂತ್ರಣಕ್ಕೆ ಪಡೆದ ನಂತರದ ದಿನವೇ ಪೈಲಟ್‌ಗಳು ರಜನೀಶ್ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ವೇತನ ಬಾಕಿ ವಿಷಯವಾಗಿ ಜೆಟ್ ಏರ್‌ವೇಸ್‌ನ ದೇಶಿ ಪೈಲಟ್‌ಗಳ ಅಂಗಸಂಸ್ಥೆ ‘ನ್ಯಾಷನಲ್ ಏವಿಯೇಟರ್ಸ್ ಗೈಡ್’ (ಎನ್‌ಎಜಿ) ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಅವರಿಗೆ ಇ-ಮೇಲ್ ಬರೆದಿದೆ.
ಜೆಟ್ ಏರ್‌ವೇಸ್ ಪುನಶ್ಚೇತನಕ್ಕೆ ನಿರ್ಧರಿಸಿರುವ ಎಸ್‌ಬಿಐಗೆ ಧನ್ಯವಾದ. ಪುನಶ್ಚೇತನದ ಯೋಜನೆಯ ಕುರಿತು ಮಾಹಿತಿ ಪಡೆಯಲು ಭೇಟಿಗೆ ಅವಕಾಶ ನೀಡಿದರೆ, ಅದರಿಂದ ನಮ್ಮಲ್ಲಿರುವ ಅನಿಶ್ಚಿತತೆ ದೂರಾಗಿಲಿದೆ. ಸಂಸ್ಥೆಯ ಬಗ್ಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ’ ಎಂದಿದ್ದಾರೆ.
ಸಂಸ್ಥೆಯಲ್ಲಿ ಒಟ್ಟಾರೆ 1,600ಪೈಲಟ್‌ಗಳಿದ್ದು, ಅವರಲ್ಲಿ 1,100 ಪೈಲಟ್‌ಗಳು ‘ಎನ್‌ಎಜಿ’ಯಲ್ಲಿದ್ದಾರೆ. ಮಾರ್ಚ್ ಒಳಗಾಗಿ ವೇತನ ಪಾವತಿಸದೇ ಇದ್ದರೆ ಏಪ್ರಿಲ್ 1 ರಿಂದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.