ನವದೆಹಲಿ: ಜಾವಾ ಮೋಟಾರ್ ಸೈಕಲ್ ಕಂಪನಿಯು ತನ್ನ 90ನೇ ವಾರ್ಷಿಕೋತ್ಸವ ಪ್ರಯುಕ್ತ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಲು ಮುಂದಾಗಿದೆ.
ಜಾವಾ ಮೋಟಾರ್ಸೈಕಲ್, ಇತ್ತೀಚೆಗೆ ಹಳೆ ಮಾದರಿಯ ಬೈಕ್ಗಳನ್ನು ನವ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಪರಿಚಯಿಸಿತು. ಇದು ಬೈಕ್ ಪ್ರಿಯರು ಮುಗಿಬಿದ್ದು ಬೈಕ್ ಖರೀದಿಗೆ ಹೆಚ್ಚಿನ ಆಸಕ್ತಿ ತಳಿದರು. ಕಂಪನಿ ನಿರೀಕ್ಷೆಗೂ ಮೀರಿ ಗ್ರಾಹಕರು ಸ್ಪಂದಿಸಿದರು. ಹೀಗಾಗಿ, ತನ್ನ 90ನೇ ವಾರ್ಷಿಕೋತ್ಸವಕ್ಕೆ ಲಾಟರಿ ಮೂಲಕ ತ್ವರಿತ ಬೈಕ್ ವಿತರಣೆಗೆ ನಿರ್ಧರಿಸಿದೆ.
ಜಾವಾ 500 ಒಎಚ್ವಿ ಶ್ರೇಣಿಯ 90 ಬೈಕ್ಗಳು ಲಾಟರಿ ಮೂಲಕ ಆಯ್ಕೆಯಾಗುವ 90 ಅದೃಷ್ಟಶಾಲಿಗಳಿಗೆ ತ್ವರಿತವಾಗಿ ವಿತರಣೆಯಾಗಲಿವೆ. ಬೆಲೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಹಿಂದೆ ನಿಗದಿಪಡಿಸಿದ ₹ 1.73 ಲಕ್ಷ ಎಕ್ಸ್ ಶೋರೂಮ್ ದರದಲ್ಲಿ ಲಭ್ಯವಾಗಲಿವೆ.