ETV Bharat / business

ಅಬ್ಬಬ್ಬಾ ಜಾಕ್​ ಮಾ..! ಚೀನಾದ ಈ ಉದ್ಯಮಿಯ IPO ಸಂಪತ್ತು ಭಾರತದ ಜಿಡಿಪಿಗಿಂತ ಅತ್ಯಧಿಕ! - ಆಂಟಿ ಗ್ರೂಪ್​ ಐಪಿಒ ಭಾರತ ಜಿಡಿಪಿಗಿಂತ ಅಧಿಕ

ಅಲಿಬಾಬಾ ಒಡೆತನದ ಫಿನ್‌ಟೆಕ್ ಕಂಪನಿಯ ಆಂಟ್ ಗ್ರೂಪ್‌ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಹಾಂಕಾಂಗ್​​ ಮತ್ತು ಶಾಂಘೈನಲ್ಲಿನ ಎರಡೂ ಸೂಚ್ಯಂಕದಲ್ಲಿ ವೈಯಕ್ತಿಕ ಹೂಡಿಕೆದಾರರಿಂದ 3 ಟ್ರಿಲಿಯನ್ ಡಾಲರ್​ ಮೌಲ್ಯದ ಬಿಡ್‌ ಪಡೆದುಕೊಂಡಿದೆ. ಇದು ಭಾರತದ ಜಿಡಿಪಿಗಿಂತ ಅತ್ಯಧಿಕವಾಗಿದೆ.

Jack Ma
ಜಾಕ್​ ಮಾ
author img

By

Published : Oct 31, 2020, 3:20 PM IST

ಬೀಜಿಂಗ್​: ಚೀನಾದ ಅತಿದೊಡ್ಡ ಇ- ಕಾಮರ್ಸ್‌ ವಾಣಿಜ್ಯ ಸಂಸ್ಥೆಯಾದ ಅಲಿಬಾಬಾ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದ ಬಳಿಕ ಜಾಕ್‌ ಮಾ, ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರೂ ತಮ್ಮ ಉದಿಮೆ ವ್ಯವಹಾರ ಬಿಟ್ಟಿಲ್ಲ. ಐಪಿಒ ಮೂಲಕ ಜಾಕ್​ ಮತ್ತೆ ಉದ್ಯಮಿ ಲೋಕದಲ್ಲಿ ಸುದ್ದಿ ಮಾಡುತ್ತಿದ್ದಾರೆ.

ಅಲಿಬಾಬಾ ಒಡೆತನದ ಫಿನ್‌ಟೆಕ್ ಕಂಪನಿಯ ಆಂಟ್ ಗ್ರೂಪ್‌ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಹಾಂಗ್ ಕಾಂಗ್ ಮತ್ತು ಶಾಂಘೈನಲ್ಲಿನ ಎರಡೂ ಸೂಚ್ಯಂಕದಲ್ಲಿ ವೈಯಕ್ತಿಕ ಹೂಡಿಕೆದಾರರಿಂದ 3 ಟ್ರಿಲಿಯನ್ ಡಾಲರ್​ ಮೌಲ್ಯದ ಬಿಡ್‌ ಪಡೆದುಕೊಂಡಿದೆ. ಇದು ಭಾರತದ ಜಿಡಿಪಿಗಿಂತ (ಸುಮಾರು 2.72 ಲಕ್ಷ ಕೋಟಿ ಡಾಲರ್​) ಅತ್ಯಧಿಕವಾಗಿದೆ.

ಜ್ಯಾಕ್ ಮಾ ಅವರ ಆಂಟ್ ಗ್ರೂಪ್ ಕೋ ಲಿಮಿಟೆಡ್‌ನ ಷೇರುಗಳು ಅಮೆರಿಕ ಅಧ್ಯಕ್ಷರ ಚುನಾವಣೆಯ ಎರಡು ದಿನಗಳ ನಂತರ 2020ರ ನವೆಂಬರ್ 5ರಂದು ಹಾಂಕಾಂಗ್​​ ಮತ್ತು ಶಾಂಘೈನಲ್ಲಿ ವಹಿವಾಟು ನಡೆಸುವ ಸಾಧ್ಯತೆಯಿದೆ. ಆಂಟ್ ಫೈನಾನ್ಷಿಯಲ್ 34.4 ಬಿಲಿಯನ್ (ಸುಮಾರು 2.54 ಲಕ್ಷ ಕೋಟಿ ರೂ.) ತನಕ ಬಂಡವಾಳ ಸಂಗ್ರಹಿಸುವ ಮಹತ್ವಾಕಾಂಕ್ಷೆ ಗುರಿ ಇರಿಸಿಕೊಂಡಿದೆ.

ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಹಾಂಕಾಂಗ್​​‌ನಲ್ಲಿ ಆಂಟ್ ಗ್ರೂಪ್ ಐಪಿಒಗೆ ಬಿಡ್ಡಿಂಗ್ ವ್ಯಾಪಕ ಬೇಡಿಕೆ ಇದೆ. ಹೂಡಿಕೆದಾರರ ಆರ್ಡರ್​ಗಳಿಗೆ ಬ್ರೋಕರೇಜ್‌ನ ಪ್ಲಾಟ್‌ಫಾರ್ಮ್ ಅಲುಗಾಡುತ್ತಿದೆ. ಶಾಂಘೈ ಪೇಟೆಯಲ್ಲಿ ಚಿಲ್ಲರೆ ವಿಭಾಗದ ಬೇಡಿಕೆಯು ಆರಂಭಿಕ ಪೂರೈಕೆ 870 ಪಟ್ಟು ಮೀರಿದೆ.

ಸುಮಾರು 315 ಬಿಲಿಯನ್ ಡಾಲರ್​ ಮಾರುಕಟ್ಟೆ ಮೌಲ್ಯಮಾಪನದ ಸಮೂಹವು ಈಜಿಪ್ಟ್‌ನ ಜಿಡಿಪಿ 303 ಬಿಲಿಯನ್ ಡಾಲರ್​ ಮತ್ತು ಫಿನ್‌ಲ್ಯಾಂಡ್​ನ 269 ಬಿಲಿಯನ್ ಡಾಲರ್​​ಗಿಂತ ಹೆಚ್ಚಿನ ಮೌಲ್ಯದ್ದಾಗಿದೆ. ಜ್ಯಾಕ್ ಮಾ ಅವರ ಆಂಟ್ ಗ್ರೂಪ್ ಐಪಿಒ 2019ರಲ್ಲಿ ತೈಲ ದೈತ್ಯ ಸೌದಿ ಅರಾಮ್ಕೊ ಅವರ 29.4 ಬಿಲಿಯನ್ ಐಪಿಒ ಅನ್ನು ದಾಖಲೆಯ ಮೊತ್ತಕ್ಕೆ ಸ್ವಾಧೀನಪಡಿಸಿಕೊಂಡಿತ್ತು. ಇದಕ್ಕೂ ಮೊದಲು 2014ರಲ್ಲಿ 25 ಬಿಲಿಯನ್ ಡಾಲರ್​ ಸಂಗ್ರಹಿಸಿದ್ದು, ಅಲಿಬಾಬಾ ಗ್ರೂಪ್​ನ ಅದುವರೆಗಿನ ಅತಿದೊಡ್ಡ ಐಪಿಒ ಆಗಿತ್ತು.

ಬ್ಲೂಮ್‌ಬರ್ಗ್ ಪ್ರಕಾರ, ಆಂಟಿ ಸಮೂಹದ ಮಾರುಕಟ್ಟೆ ಮೌಲ್ಯಮಾಪನವು ಜೆಪಿ ಮೋರ್ಗಾನ್​ & ಕಂಪನಿಗಿಂತ ದೊಡ್ಡದಾಗಿದೆ . ಪೇಪಾಲ್ ಹೋಲ್ಡಿಂಗ್ಸ್ ಇಂಕ್(238 ಬಿಲಿಯನ್ ಡಾಲರ್) ಮತ್ತು ವಾಲ್ಟ್ ಡಿಸ್ನಿ ಕಂಪನಿ (232 ಬಿಲಿಯನ್ ಡಾಲರ್​) ಇದರ ಹಿಂದಿವೆ. ಐಬಿಎಂ ಕಾರ್ಪೊರೇಷನ್​ಗಿಂತ ಮೂರು ಪಟ್ಟು ಮತ್ತು ಗೋಲ್ಡ್​ಮನ್ ಸ್ಯಾಚ್ಸ್ ಗ್ರೂಪ್​ಗಿಂತ ನಾಲ್ಕು ಪಟ್ಟು ದೊಡ್ಡದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.