ಮುಂಬೈ: ಇನ್ಫೋಸಿಸ್ ಸಂಸ್ಥೆಯ ವಿರುದ್ಧ ಕೇಳಿ ಬಂದಿರುವ ಆರೋಪಿತ ಪತ್ರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಂಸ್ಥೆ, ಸಿಇಒ ಮತ್ತು ಸಿಎಫ್ಒ ವಿರುದ್ಧ ಸ್ವತಂತ್ರ ತನಿಖೆಗೆ ಆದೇಶಿಸಲಾಗುವುದು ಎಂದು ಕಂಪನಿ ಆಶ್ವಾಸ ನೀಡಿದೆ.
ಅಮೆರಿಕದ ಷೇರುಪೇಟೆ ಸೆಕ್ಯುರಿಟಿಸ್ ಕೇಂದ್ರಕ್ಕೆ ಇನ್ಫೋಸಿಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ಹಣಕಾಸು ಅಧಿಕಾರಿ ವಿರುದ್ಧ ನೈತಿಕವಲ್ಲದ ವಹಿವಾಟು ಆರೋಪದ ಪತ್ರವನ್ನು ಅನಾಮಿಕ ವ್ಯಕ್ತಿ ಒಬ್ಬರು ಬರೆದಿದ್ದಾರೆ.
ಈ ಆರೋಪದ ಬಗ್ಗೆ ಮಾತನಾಡಿದ ಇನ್ಫೋಸಿಸ್ನ ನಂದನ್ ನಿಲಕೇಣಿ, ಸಂಸ್ಥೆಯ ಸಿಇಒ ಸಲಿಲ್ ಪರೇಖ್ ಅವರು ಅಂತಾರಾಷ್ಟ್ರೀಯ ಪ್ರವಾಸ, ಮುಂಬೈ, ಅಮೆರಿಕ ಪ್ರಯಾಣದ ಬಗ್ಗೆಯೂ ದೂರುಗಳು ಕೇಳಿಬಂದಿವೆ. ಶಾರ್ದುಲ್ ಅಮರಚಂದ್ ಮಂಗಳ್ ದಾಸ್ ಲೆಕ್ಕಶೋಧನ ಸಮಿತಿಯಿಂದ ಸ್ವತಂತ್ರವಾಗಿ ತನಿಖೆ ನಡೆಸಲಾಗುತ್ತಿದೆ. ತನಿಖೆಯ ವರದಿ ಬರುವ ತನಕ ಕಾಯಬೇಕಿದೆ ಎಂದು ಹೇಳಿದರು.
ಸಂಸ್ಥೆಯ ಲೆಕ್ಕಶೋಧನಾ ಸಮಿತಿ ಮುಂದೆ 2019ರ ಅಕ್ಟೋಬರ್ 10ರಂದು ಹಾಗೂ ಕಾರ್ಯನಿರ್ವಾಹಕೇತರ ಸದಸ್ಯರ ಸಮಿತಿ ಮುಂದೆ 2019ರ ಅಕ್ಟೋಬರ್ 11ರಂದು ಎರಡು ಅನಾಮದೇಯ ದೂರುಗಳು ಬಂದಿವೆ. ಈ ಬಗ್ಗೆ ಕುಲಂಕಷವಾಗಿ ಪರಿಶೀಲನೆ ನಡೆಸಿ, ಆಂತರಿಕ ತನಿಖೆ ಶುರುವಾಗಿದೆ ಎಂದು ಹೇಳಿದರು.