ನವದೆಹಲಿ: ದೇಶದ ಎರಡನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿಯಾದ ಇನ್ಫೋಸಿಸ್ ನಿವ್ವಳ ಲಾಭವು ಏಪ್ರಿಲ್-ಜೂನ್ ಅವಧಿಯಲ್ಲಿ ಶೇ.2ರಷ್ಟು ಕುಸಿದಿದೆ ಎಂದು ಷೇರು ವಿನಿಮಯ ಕೇಂದ್ರಕ್ಕೆ ತಿಳಿಸಿದೆ.
ಸೇವಾ ಕಾರ್ಯಾಚರಣೆಗಳಿಂದ ಇನ್ಫೋಸಿಸ್ ಆದಾಯವು ಶೇ.1.7ರಷ್ಟು ಏರಿಕೆಯಾಗಿ 23,665 ಕೋಟಿ ರೂ.ಗೆ ತಲುಪಿದೆ. ಹಿಂದಿನ ತ್ರೈಮಾಸಿಕದಲ್ಲಿ 23,267 ಕೋಟಿ ರೂ. ವಾರ್ಷಿಕ ಆಧಾರದ ಮೇಲೆ ಇನ್ಫಿ ನಿವ್ವಳ ಲಾಭ, ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 3,798 ಕೋಟಿ ರೂ.ಗಳಿಂದ 11.4ರಷ್ಟು ಏರಿಕೆಯಾಗಿದೆ.
ಡಾಲರ್ ದೃಷ್ಟಿಯಿಂದ ಇನ್ಫೋಸಿಸ್ ಆದಾಯವು ಶೇ.2.4ರಷ್ಟು ಇಳಿದು 3,121 ಮಿಲಿಯನ್ ಡಾಲರ್ಗೆ ತಲುಪಿದೆ ಎಂದು ಇನ್ಫೋಸಿಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಸ್ಥಿರ ಕರೆನ್ಸಿ ಪರಿಭಾಷೆಯಲ್ಲಿ ಹೇಳುವುದಾದರೇ 0-2 ಪ್ರತಿಶತ ಆದಾಯದ ಬೆಳವಣಿಗೆಗೆ ಕಂಡಿದ್ದು, ಮಾರ್ಜಿನಲ್ ಕಾರ್ಯಾಚರಣೆಯು ಶೇ.21-23ರ ವ್ಯಾಪ್ತಿಯಲ್ಲಿ ಉಳಿಯುವ ನಿರೀಕ್ಷೆಯಿದೆ ಎಂದು ಇನ್ಫೋಸಿಸ್ ತಿಳಿಸಿದೆ.