ಬೆಂಗಳೂರು: ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ಸಿಲಿಕಾನ್ ಸಿಟಿಯ ಇನ್ಫೋಸಿಸ್ ಸಂಸ್ಥೆಯ ಸಿಇಒ ವಿರುದ್ಧ ಕೇಳಿ ಬಂದ ಅನಾಮಧೇಯ ಪತ್ರದ ದೂರಿನ ಪರಿಣಾಮ ಷೇರು ಮೌಲ್ಯದಲ್ಲಿ ಭಾರೀ ಇಳಿಕೆ ಕಂಡುಬಂದಿದೆ.
ಮಂಗಳವಾರದ ವಹಿವಾಟಿನಲ್ಲಿ ಇನ್ಫಿ ಸಂಸ್ಥೆಯ ಷೇರು ಮೌಲ್ಯ ಶೇ 16ರಷ್ಟು ಕುಸಿತ ಕಂಡಿದೆ. ಕಳೆದ ಆರು ವರ್ಷಗಳಲ್ಲಿ ಈ ರೀತಿಯ ಕುಸಿತವನ್ನು ಕಂಡಿರಲಿಲ್ಲ. 2013ರ ಏಪ್ರಿಲ್ 12ರಂದು ಶೇ 22ರಷ್ಟು ಕುಸಿದಿತ್ತು. ಈ ಬಳಿಕ ಇದೇ ಪ್ರಥಮ ಬಾರಿಗೆ ಅಂತಹ ಇಳಿಕೆ ದಾಖಲಿಸಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.
ಇಂದಿನ ಮುಂಬೈ ಷೇರು ಸೂಚ್ಯಂಕದಲ್ಲಿ ಶೇ 16.21ರಷ್ಟು ಕುಸಿತ ಕಂಡು ₹ 643.50ರಲ್ಲಿ ವಹಿವಾಟು ನಡೆಸಿದೆ. ಎನ್ಎಸ್ಇಯಲ್ಲಿ ₹ 110.50 ಕಳೆದುಕೊಂಡು ಶೇ 14.33ರಷ್ಟು ಕುಸಿದು ₹ 657.85ಯಂತೆ ವ್ಯವಹಾರ ನಡೆಸಿತು.
ಸಂಸ್ಥೆಯ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅನಾಮಧೇಯ ವ್ಯಕ್ತಿಯೊಬ್ಬರು ಅಮೆರಿಕದಲ್ಲಿ ದೂರು ಸಲ್ಲಿಕೆ ಮಾಡಿದ್ದಾರೆ. ಅದು ಸಂಸ್ಥೆಯ ಸಿಇಒ ಸಲೀಲ್ ಪರೇಖ್ ವಿರುದ್ಧ ದೂರ ಬಂದಿದೆ. ಪರೇಖ್ ನೈತಿಕವಲ್ಲದ ಮಾರ್ಗದಿಂದ ವಹಿವಾಟು ನಡೆಸುತ್ತಿದ್ದಾರೆ. ಲಾಭದ ಸಂಖ್ಯೆ ಹಾಗೂ ಆದಾಯ ಪ್ರಮಾಣ ಹೆಚ್ಚಳವಾಗಿದೆ ಎಂಬುದನ್ನು ವಾಮಮಾರ್ಗದಿಂದ ತೋರಿಸಲಾಗಿದೆ ಎಂದು ಅಮೆರಿಕ ಷೇರುಪೇಟೆಯ ಸೆಕ್ಯುರಿಟೀಸ್ಗೆ ನೀಡಿದ ದೂರಿನಲ್ಲಿ ದಾಖಲಾಗಿದೆ. ಇದರಿಂದ ಏಷ್ಯಾದ ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್ಗೆ ಭಾರಿ ನಷ್ಟ ಉಂಟಾಗಿದೆ.