ಬೆಂಗಳೂರು: ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಿಲಿಕಾನ್ ಸಿಟಿ ಮೂಲದ ದೈತ್ಯ ಇನ್ಫೋಸಿಸ್ ಕಂಪನಿ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಿದೆ ಎಂಬ ಮಾಧ್ಯಮಗಳಲ್ಲಿ ಬಂದ ವರದಿ ಬಗ್ಗೆ ಇನ್ಫೋಸಿಸ್ ಈಗ ಪ್ರತಿಕ್ರಿಯೆ ನೀಡಿದೆ.
ಉನ್ನತ ಕಾರ್ಯಕ್ಷಮತೆಯ ಸಂಸ್ಥೆಯಲ್ಲಿ ಅನೌಪಚಾರಿಕವಾಗಿ ಕ್ಷೀಣಿಸುವಿಕೆ ಸಾಮಾನ್ಯ ವ್ಯವಹಾರದ ಅವಿಭಾಜ್ಯ ಅಂಗವಾಗಿರುತ್ತಿದೆ. ಇದನ್ನು ಯಾವುದೇ ಮಟ್ಟದಲ್ಲಿ ನಿರ್ದಿಷ್ಟವಾಗಿ ವಜಾ ಮಾಡುವುದು ಎಂದು ವ್ಯಾಖ್ಯಾನಿಸಬಾರದು ಎಂದು ಸುದ್ದಿ ಸಂಸ್ಥೆಗೆ ಕಂಪನಿಯ ಅಧಿಕಾರಿಯೊಬ್ಬರು ಇ-ಮೇಲ್ ಮೂಲಕ ತಿಳಿಸಿದ್ದಾರೆ.
ಆದರೂ ಇತ್ತೀಚಿನ ದಿನಗಳಲ್ಲಿ ಇಂತಹ ಎಷ್ಟು ಉದ್ಯೋಗಿಗಳನ್ನು ವಜಾ ಮಾಡಲಾಗಿದೆ ಎಂದು ಕಂಪನಿ ಬಹಿರಂಗಪಡಿಸಿಲ್ಲ. ಕಂಪನಿಯು ತನ್ನ ವಿವಿಧ ಹಂತಗಳಲ್ಲಿನ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.
ಮಾಧ್ಯಮ ವರದಿಯು ಕೇವಲ ದತ್ತಾಂಶ ಆಧಾರಿತ ಊಹಾಪೋಹ ಮತ್ತು ತಪ್ಪು ದತ್ತಾಂಶಗಳಿಂದ ಕೂಡಿದೆ. ಕಂಪನಿಗಳಲ್ಲಿ ತನ್ನ ನಿರೀಕ್ಷೆಗಳ ಅಥವಾ ಕಾರ್ಯಕ್ಷಮತೆಯ ಉನ್ನತ ಗುಣಮಟ್ಟವನ್ನು ಅಳೆಯುವುದಕ್ಕಾಗೆ ತನ್ನದೇ ಆದ ಕೆಲವು ಮಾನದಂಡಗಳನ್ನು ಹಾಕಿಕೊಂಡಿರುತ್ತದೆ. ಇದು ಕೆಲವು ತ್ರೈಮಾಸಿಕದಲ್ಲಿ ನಡೆಯುತ್ತಿರುತ್ತದೆ. ಉದ್ಯೋಗಿ ಎರಡು ವರ್ಷ ಅಥವಾ ಎರಡು ತ್ರೈಮಾಸಿಕಗಳವರೆಗೆ ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೇ ಅದು ಅವರ ಕಾರ್ಯಕ್ಷಮತೆಗೆ ಸಂಬಂಧಿಸಿದ ವಿಷಯವಾಗಿರುತ್ತದೆ. ಅಂತಹ ನೌಕರರನ್ನು ಕಾರ್ಯನಿರ್ವಹಿಸದ ನೌಕರರ ಎಂದು ಕಂಪನಿಯ ಪರಿಭಾಷೆಯಲ್ಲಿ ಕರೆಯಲಾಗುತ್ತದೆ ಎಂದು ಹೇಳಿದ್ದಾರೆ.
ನಾವು ನಮ್ಮ ಉದ್ಯೋಗಿಗಳಿಗೆ ಪಿಂಕ್ ಕಲರ್ ಸ್ಲಿಪ್ ಹಸ್ತಾಂತರಿಸುವುದಿಲ್ಲ. ಇದು ಆಂತರಿಕ ಪ್ರಕ್ರಿಯೆ ಆಗಿರುವುದರಿಂದ ಈ ಬಗ್ಗೆ ನಾವು ದತ್ತಾಂಶ ಹಂಚಿಕೊಳ್ಳಲು ಸಾಧ್ಯವಿಲ್ಲ. ಅನಗತ್ಯ ವರದಿ ಮಾಡುವುದನ್ನು ನಿಲ್ಲಿಸುವಂತೆ ಇನ್ಫಿ ಸ್ಪಷ್ಟನೆ ನೀಡಿದೆ.