ನವದೆಹಲಿ: ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ (ಐಎಸಿಸಿ) ತನ್ನ ಇತ್ತೀಚಿನ ಜಾಗತಿಕ ನಾಯಕತ್ವ ಪ್ರಶಸ್ತಿಗಳ ಭಾಗವಾಗಿ ಐಕಾನಿಕ್ ಉದ್ಯಮಿ ರತನ್ ಟಾಟಾ ಅವರಿಗೆ ಜೀವಮಾನದ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಿದೆ.
ಐಒಸಿಸಿ, ಶುಕ್ರವಾರ ಟಾಟಾ ಅವರಿಗೆ ಐಎಸಿಸಿ ಜೀವಮಾನ ಮತ್ತು ಗ್ಲೋಬಲ್ ಎಕ್ಸಲೆನ್ಸ್ ಪ್ರಶಸ್ತಿಗಳನ್ನು ನೀಡಿತು. 'ಪ್ರಸ್ತುತ ನಡೆಯುತ್ತಿರುವ ಕೋವಿಡ್ -19 ಬಿಕ್ಕಟ್ಟಿನಿಂದಾಗಿ ಕ್ಲೋಸ್ ಡೋರ್ ಮೂಲಕ ಪ್ರಶಸ್ತಿ ಪ್ರಧಾನ ಮಾಡಲಾಯಿತು' ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ರತನ್ ಟಾಟಾ ಅವರು, ಭಾರತದ ಅತಿದೊಡ್ಡ ಉದ್ಯಮಿ ಸಂಘಟನೆಯಾದ ‘ದಿ ಟಾಟಾ ಗ್ರೂಪ್’ ಆದಾಯವನ್ನು 2011-12ರ ವೇಳೆಗೆ ಸುಮಾರು 100 ಬಿಲಿಯನ್ ಡಾಲರ್‌ಗೆ ಹೆಚ್ಚಿಸಿದ್ದರು. ಇಂದಿಗೂ ಪ್ರಭಾವಿ ಕೈಗಾರಿಕೋದ್ಯಮಿ, ಲೋಕೋಪಕಾರಿ ಮತ್ತು ಮಾನವೀಯತೆಯ ಸಾಕಾರ ಮೂರ್ತಿಯಾಗಿ ಉಳಿದಿದ್ದಾರೆ ಎಂದು ಐಎಸಿಸಿ ಹೇಳಿದೆ.
ಕಳೆದ ಕೆಲವು ವರ್ಷಗಳಿಂದ ಪ್ರಶಸ್ತಿಗಳನ್ನು ಸ್ವೀಕರಿಸಿದ ಟಾಟಾ, ಈ ಪ್ರಶಸ್ತಿಗಳು ಭವಿಷ್ಯದ ಜಾಗತಿಕ ನಾಯಕರನ್ನು ಪ್ರೇರೇಪಿಸುತ್ತದೆ. ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಆರ್ಥಿಕ ಸಂಬಂಧಗಳನ್ನು ಬಲಪಡಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ಮಾರುಕಟ್ಟೆಯ ಸಾಮರ್ಥ್ಯ ಗುರುತಿಸಿ ಅದನ್ನು ಸ್ಪರ್ಶಿಸಿದ ಮೊದಲ ಭಾರತೀಯ ಟಾಟಾ ಎಂದು ನಾವು ನಂಬುತ್ತೇವೆ. ಅವರ ನಾಯಕತ್ವದಲ್ಲಿ ಟಾಟಾ ಸಮೂಹವು ಮೂರು ದಶಕಗಳ ಅವಧಿಯಲ್ಲಿ ಅಮೆರಿಕದಲ್ಲಿ ಅತಿದೊಡ್ಡ ಭಾರತೀಯ ಉದ್ಯೋಗದಾತರಾಗಿ ರೂಪುಗೊಂಡಿದೆ ಎಂದು ಐಎಸಿಸಿ ವೆಸ್ಟ್ ಇಂಡಿಯಾ ಕೌನ್ಸಿಲ್, ಪ್ರಾದೇಶಿಕ ಅಧ್ಯಕ್ಷ ನೌಶಾದ್ ಪಂಜವಾನಿ ಹೇಳಿದ್ದಾರೆ.
ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನಂತಹ ಅನೇಕ ಉದ್ಯಮಗಳು ಟಾಟಾ ಗ್ರೂಪ್ ವ್ಯಾಪ್ತಿಗೆ ಬರುತ್ತವೆ. ಗ್ರೂಪ್ನ ಚುಕ್ಕಾಣಿಯಿಂದ ನಿವೃತ್ತರಾದ ನಂತರ, ಅನೇಕ ಭಾರತೀಯ ಸ್ಟಾರ್ಟ್ಆ್ಯಪ್ಗಳಲ್ಲಿ ಹೂಡಿಕೆ ಮಾಡುತ್ತಾ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿ ಯುವಕರಿಗೆ ಪ್ರೇರಣೆ ಆಗುತ್ತಿದ್ದಾರೆ.