ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚಲಿಸುವ ರೈಲಿನಲ್ಲಿ ಪ್ರಯಾಣಿಕರಿಗೆ ಮಸಾಜ್ ಸೇವೆಯನ್ನು ಒದಗಿಸುತ್ತಿದೆ.
ರೈಲಿನಲ್ಲಿ ಪ್ರಯಾಣಿಸುವಾಗಲೇ ಅಗತ್ಯವಿರುವ ಪ್ರಯಾಣಿಕರು ಮಸಾಜ್ ಸೌಲಭ್ಯ ಪಡೆದುಕೊಳ್ಳಬಹುದು. ಆರಂಭಿಕ ಹಂತದಲ್ಲಿ ಈ ಸೌಲಭ್ಯವನ್ನು ಇಂದೋರ್ನಿಂದ ಹೊರಡುವ 39 ರೈಲುಗಳಲ್ಲಿ ಕಲ್ಪಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಮಸಾಜ್ ಸೇವೆಯಿಂದ ರೈಲ್ವೆಗೆ ವಾರ್ಷಿಕ ₹ 20 ಲಕ್ಷ ಹೆಚ್ಚುವರಿ ಆದಾಯ ಹರಿದು ಬರಲಿದೆ. ಜೊತೆಗೆ 20,00 ಮಸಾಜ್ ಸೇವಾ ಕಾರ್ಯಕರ್ತರು ರೈಲ್ವೆ ಟಿಕೆಟ್ ಖರೀದಿಸುವುದರಿಂದ ವಾರ್ಷಿಕ ₹ 90 ಲಕ್ಷ ಹೆಚ್ಚುವರಿ ಟಿಕೆಟ್ ಮಾರಾಟವಾಗುವ ನಿರೀಕ್ಷೆ ಇದೆ. ಈ ರೀತಿಯ ಒಡಂಬಡಿಕೆಗೆ ಪ್ರಥಮ ಬಾರಿಗೆ ರೈಲ್ವೆ ಇಲಾಖೆ ಸಹಿ ಹಾಕಿದೆ ಎಂದು ರೈಲ್ವೆ ಅಧಿಕಾರಿ ರಾಜೇಶ್ ಬಾಜ್ ತಿಳಿಸಿದ್ದಾರೆ.
ಸಂಚಾರದ ವೇಳೆಯ ಪ್ರಯಾಣಿಕರ ತಲೆ ಹಾಗೂ ಪಾದ ಮಸಾಜ್ ಸೇವೆಗೆ ₹ 100 ಶುಲ್ಕ ವಿಧಿಸಲಾಗುತ್ತದೆ.