ETV Bharat / business

ದೇಶಿಯ ಷೇರುಗಳಲ್ಲಿ ಆಶಾದಾಯಕ ಬೆಳವಣಿಗೆ: ಸೆನ್ಸೆಕ್ಸ್​ 446 ಪಾಯಿಂಟ್​ ಜಿಗಿತ

author img

By

Published : Aug 4, 2021, 12:38 PM IST

ಕಳೆದ ಎರಡ್ಮೂರು ದಿನಗಳಿಂದ ಮುಂಬೈ ಷೇರುಪೇಟೆಯಲ್ಲಿ ಗೂಳಿ ಓಟ ಮುಂದುವರಿದಿದೆ. ದೇಶಿಯ ಷೇರುಗಳಲ್ಲಿ ಆಶಾದಾಯಕ ಬೆಳವಣಿಗೆ ಇದೆ ಎಂದು ರಿಲಯನ್ಸ್ ಸೆಕ್ಯೂರಿಟೀಸ್​​​ನ ಕಾರ್ಯ ತಂತ್ರ ವಿಭಾಗದ ಮುಖ್ಯಸ್ಥರಾದ ಬಿನೋದ್ ಮೋದಿ ತಿಳಿಸಿದ್ದಾರೆ.

Sensex rises 382.19 points, currently at 54,205.55
ದೇಶಿಯ ಷೇರುಗಳಲ್ಲಿ ಆಶಾದಾಯಕ ಬೆಳವಣಿಗೆ: ಸೆನ್ಸೆಕ್ಸ್​ 446 ಪಾಯಿಂಟ್​ಗಳ ಏರಿಕೆ

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಾಣುತ್ತಿದ್ದು, ಇನ್ಫೋಸಿಸ್, ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್​ಗಳು ಭಾರಿ ಮುನ್ನಡೆ ಸಾಧಿಸಿವೆ. ಬುಧವಾರದ 382.19 ಪಾಯಿಂಟ್‌ಗಳಷ್ಟು ಏರಿಕೆ ಕಂಡ ಸೆನ್ಸೆಕ್ಸ್ ಈಗ ಪ್ರಸ್ತುತ 54,205.55ರಷ್ಟಿದೆ.

ಅವರು ಬಿಎಸ್ಇ ಎಸ್&ಪಿ ಸೆನ್ಸೆಕ್ಸ್ 446 ಪಾಯಿಂಟ್ ಅಥವಾ 0.83 ಶೇಕಡ 54,270 ಕ್ಕೆ ಏರಿಕೆಯಾಗಿದ್ದು, ನಿಫ್ಟಿ 50,120 ಪಾಯಿಂಟ್ ಅಥವಾ 0.74 ಶೇಕಡಾ 16,251 ಕ್ಕೆ ತಲುಪಿದೆ. ನಿಫ್ಟಿ ಎಫ್‌ಎಂಸಿಜಿ, ಐಟಿ ಮತ್ತು ರಿಯಲ್ಟಿ ಹೊರತುಪಡಿಸಿ ಉಳಿದೆಲ್ಲ ವಲಯಗಳ ಸೂಚ್ಯಂಕಗಳು ಸಕಾರಾತ್ಮಕವಾಗಿವೆ. ನಿಫ್ಟಿ ಹಣಕಾಸು ಸೇವೆಯು ಶೇಕಡಾ 1.4ರಷ್ಟು, ಖಾಸಗಿ ಬ್ಯಾಂಕ್ ಶೇಕಡಾ 1ರಷ್ಟು ಏರಿಕೆ ಕಂಡಿದೆ.

ದೇಶಿಯ ಷೇರುಗಳಲ್ಲಿ ಆಶಾದಾಯಕ ಬೆಳವಣಿಗೆ
ದೇಶಿಯ ಷೇರುಗಳಲ್ಲಿ ಆಶಾದಾಯಕ ಬೆಳವಣಿಗೆ

ಟಾಟಾ ಸ್ಟೀಲ್ ಶೇಕಡಾ1.9ರಷ್ಟು, ಜೆಎಸ್ ಡಬ್ಲ್ಯೂ ಸ್ಟೀಲ್ ಶೇಕಡಾ 0.9ರಷ್ಟು, ಹಿಂಡಾಲ್ಕೊ ಶೇಕಡಾ 0.6ರಷ್ಟು , ರಿಲಯನ್ಸ್ ಇಂಡಸ್ಟ್ರೀಸ್ ಶೇಕಡಾ 1ರಷ್ಟು ಲಾಭ ಗಳಿಸಿವೆ. ಷೇರುಗಳ ಪೈಕಿ, ಗೃಹ ಸಾಲ ನೀಡುವ ಎಚ್‌ಡಿಎಫ್‌ಸಿ ಪ್ರತಿ ಷೇರಿಗೆ ಶೇಕಡಾ 3.7ರಷ್ಟು ಏರಿಕೆಯಾಗಿ 2,649.40 ರೂಪಾಯಿ ತಲುಪಿದೆ. ಐಸಿಐಸಿಐ ಬ್ಯಾಂಕ್ ಶೇಕಡಾ 2ರಷ್ಟು, ಕೋಟಕ್ ಮಹೀಂದ್ರಾ ಬ್ಯಾಂಕ್ ಶೇಕಡಾ 1.6ರಷ್ಟು, ಎಚ್​​ಡಿಎಫ್​ಸಿ ಬ್ಯಾಂಕ್ ಶೇ 1.1ರಷ್ಟು ಮತ್ತು ಆಕ್ಸಿಸ್ ಬ್ಯಾಂಕ್ ಶೇಕಡಾ 0.8ರಷ್ಟು ಏರಿಕೆ ಕಂಡಿದೆ.

ದೇಶಿಯ ಷೇರುಗಳಲ್ಲಿ ಆಶಾದಾಯಕ ಬೆಳವಣಿಗೆ ಇದೆ ಎಂದು ರಿಲಯನ್ಸ್ ಸೆಕ್ಯೂರಿಟೀಸ್​​​ನ ಕಾರ್ಯ ತಂತ್ರ ವಿಭಾಗದ ಮುಖ್ಯಸ್ಥರಾದ ಬಿನೋದ್ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಜಿಎಸ್​ಟಿ ಸಂಗ್ರಹ, ವಾಹನಗಳ ಮಾರಾಟ, ಇ-ವೇ ಬಿಲ್​​ ಮುಂತಾದ ಅಂಶಗಳು ಮುಂದಿನ ತ್ರೈಮಾಸಿಕಗಳಲ್ಲಿ ಸುಸ್ಥಿರ ಆರೋಗ್ಯಕರ ಕಾರ್ಪೊರೇಟ್ ಗಳಿಕೆಗೆ ಸಹಕಾರ ನೀಡುತ್ತವೆ ಎಂದು ಬಿನೋದ್ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚಿನ ವಾರಗಳಲ್ಲಿ ಎಫ್‌ಐಐ ಹೂಡಿಕೆಯಲ್ಲಿ ಚೀನಾ ನಿಯಂತ್ರಣದಲ್ಲಿದ್ದು, ಭಾರತಕ್ಕೆ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ವೊಡಾಫೋನ್ ಐಡಿಯಾದ ಪಾಲನ್ನು ಸರ್ಕಾರಕ್ಕೆ ನೀಡಲು ಮುಂದಾದ ಕೆ ಎಂ ಬಿರ್ಲಾ ; ಮುಂದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.