ಚೆನ್ನೈ : ತೆರಿಗೆ ವಂಚನೆ ತನಿಖೆಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಚೆನ್ನೈ ಮೂಲದ ಚೆಟ್ಟಿನಾಡ್ ಗ್ರೂಪ್ಗೆ ಸಂಬಂಧಿಸಿದ ಹಲವು ಕಡೆ ದಾಳಿ ನಡೆಸಿದೆ. ಚೆನ್ನೈ, ತಿರುಚ್ಚಿ, ಕೊಯಮತ್ತೂರು, ಆಂಧ್ರ, ಕರ್ನಾಟಕ ಮತ್ತು ಮುಂಬೈನ ವಿವಿಧ ಸ್ಥಳಗಳಲ್ಲಿರುವ 60 ಕಡೆ ಶೋಧ ಕಾರ್ಯ ನಡೆದಿದೆ.
ಶೋಧನೆ ವೇಳೆ ₹700 ಕೋಟಿ ತೆರಿಗೆ ವಂಚನೆಯ ಹಣ ವಶಪಡಿಸಿಕೊಳ್ಳಲಾಗಿದೆ. ಈ ಹುಡುಕಾಟ ತಾತ್ಕಾಲಿಕವಾಗಿ ಮುಕ್ತಾಯಗೊಂಡಿದೆ. ಕಡತಗಳ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಚೆಟ್ಟಿನಾಡ್ ಗ್ರೂಪ್ ಮೇಲೆ 2015ರಲ್ಲಿಯೂ ದಾಳಿ ನಡೆಸಲಾಗಿತ್ತು.
ಕೃಷಿಕರ ಪ್ರತಿಭಟನೆಗೆ ನಡುಗಿದ ವ್ಯಾಪಾರ-ವಹಿವಾಟು : ನಿತ್ಯ ₹3,500 ಕೋಟಿ ನಷ್ಟ
1912ರಲ್ಲಿ ಅಣ್ಣಾಮಲೈ ಚೆಟ್ಟಿಯಾರ್ ಸ್ಥಾಪಿಸಿದ ಎಂಎಎಂಆರ್ ಮುಥಯ್ಯ ಚೆಟ್ಟಿನಾಡ್ ಗ್ರೂಪ್‌ನ ಪ್ರಸ್ತುತ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಚೆನ್ನೈನಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ಸುಮಾರು 100 ವರ್ಷಗಳಷ್ಟು ಹಳೆಯದಾದ ಚೆಟ್ಟಿನಾಡ್ ಸಮೂಹವು ಆರೋಗ್ಯ, ನಿರ್ಮಾಣ, ಸಿಮೆಂಟ್, ವಿದ್ಯುತ್, ಜವಳಿ ಮತ್ತು ಇತರ ಹಲವು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದೆ.
ವಾರ್ಷಿಕ 4,000 ಕೋಟಿ ರೂ.ನಷ್ಟು ವಹಿವಾಟು ನಡೆಸುತ್ತಿದೆ. ವೈದ್ಯಕೀಯ ವಿಶ್ವವಿದ್ಯಾಲಯ, ಚೆಟ್ಟಿನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಹಾಗೂ ಶಾಲೆಗಳನ್ನು ಸಹ ನಡೆಸುತ್ತಿದೆ.