ಕೊಯಮತ್ತೂರ್: ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯವಾಗಿರುವ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಕೊಯಮತ್ತೂರಿನ ಇಡ್ಲಿ ಅಮ್ಮಾ ಅವರ ಸ್ಫೂರ್ತಿದಾಯಕ ಕಥೆಯನ್ನು ತಮ್ಮ ಮೈಕ್ರೋ ಬ್ಲಾಗ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಇಳಿವಯಸ್ಸಿನಲ್ಲೂ ದುಡಿದು ಬದುಕಬೇಕೆಂಬ ವೃದ್ಧೆಯ ಮನೋಭಾವಕ್ಕೆ ಕರಗಿ ಕ್ಯಾಂಟೀನ್ ಕಮ್ ಹೌಸೊಂದನ್ನು ಕಟ್ಟಿಸಿಕೊಡಲು ಮುಂದಾಗಿದ್ದಾರೆ.
ಕೊಯಮತ್ತೂರಿನಲ್ಲಿ ಬರೀ ಒಂದು ರೂಪಾಯಿಗೆ ಇಡ್ಲಿ ಮಾರುವ ಕಮಲಥಾಲ್ ಎಂಬ 'ಇಡ್ಲಿ ಅಮ್ಮ' ಅವರಿಗೆ ಮಹೀಂದ್ರಾ ಗ್ರೂಪ್ನಿಂದ ಮನೆ/ ಕ್ಯಾಂಟೀನ್ ಒಂದನ್ನು ಕಟ್ಟಿಸಿಕೊಡಲಾಗುತ್ತಿದೆ. ಇಡ್ಲಿಗಳನ್ನು ಬೇಯಿಸಲು ಮತ್ತು ಮಾರಾಟ ಮಾಡಲು ಸ್ವಂತ ಮನೆ ಕಮ್ ಕ್ಯಾಂಟೀನ್ ಆಗಿ ಪರಿರ್ವತನೆಯಾಗಲಿದೆ.
-
Only rarely does one get to play a small part in someone’s inspiring story, and I would like to thank Kamalathal, better known as Idli Amma, for letting us play a small part in hers. She will soon have her own house cum workspace from where she will cook & sell idlis (1/3) https://t.co/vsaIKIGXTp
— anand mahindra (@anandmahindra) April 2, 2021 " class="align-text-top noRightClick twitterSection" data="
">Only rarely does one get to play a small part in someone’s inspiring story, and I would like to thank Kamalathal, better known as Idli Amma, for letting us play a small part in hers. She will soon have her own house cum workspace from where she will cook & sell idlis (1/3) https://t.co/vsaIKIGXTp
— anand mahindra (@anandmahindra) April 2, 2021Only rarely does one get to play a small part in someone’s inspiring story, and I would like to thank Kamalathal, better known as Idli Amma, for letting us play a small part in hers. She will soon have her own house cum workspace from where she will cook & sell idlis (1/3) https://t.co/vsaIKIGXTp
— anand mahindra (@anandmahindra) April 2, 2021
ಈ ಬಗ್ಗೆ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಆನಂದ್ ಮಹೀಂದ್ರಾ, ಯಾರೋ ಒಬ್ಬರ ಪ್ರೇರಣದಾಯಕ ಕಥೆಯಲ್ಲಿ ಅಪರೂಪಕ್ಕೆ ಒಬ್ಬರು ಚಿಕ್ಕ ಪಾತ್ರ ನಿರ್ವಹಿಸುತ್ತಾರೆ. ಇಂತಹ ಸಣ್ಣ ಪಾತ್ರ ನಿರ್ವಹಿಸಲು ನಮಗೆ ಅವಕಾಶ ಮಾಡಿಕೊಟ್ಟಿದಕ್ಕೆ ಇಡ್ಲಿ ಅಮ್ಮಾ ಎಂದೇ ಹೆಸರಾಗಿರುವ ಕಮಲಥಾಲ್ ಅವರಿಗೆ ಧನ್ಯವಾದಗಳು. ಇಡ್ಲಿ ಮಾಡಲು ಹಾಗೂ ಮಾರಲು ನೆರವಾಗುವಂತಹ ಮನೆಯನ್ನು ಶೀಘ್ರದಲ್ಲಿ ಅವರು ಹೊಂದಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: 'ಟೆಸ್ಲಾ' ಕಾರುಗಳ ದೊರೆ ಈಲಾನ್ಗೆ ಏನಾಯ್ತು? ಮಂಕಾದ ಐಕಾನಿಕ್ ಫೋಟೋ ವೈರಲ್!
ವಡಿವೇಲಂಪಲಯಂನಲ್ಲಿ 3.5 ಸೆಂಟ್ ಭೂಮಿಯನ್ನು ಕಂಪನಿ ಕೊಡುಗೆಯಾಗಿ ಇಡ್ಲಿ ಅಮ್ಮಾಗೆ ಕೊಟ್ಟಿದೆ. ಕಳೆದ ಸೋಮವಾರವಷ್ಟೇ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಕಮಲಥಾಲ್ ಅವರು ಇಡ್ಲಿ ತಯಾರಿಕೆ ಮತ್ತು ಮಾರಾಟಕ್ಕೆ ಅನುಕೂಲ ಆಗುವಂತೆ ಕ್ಯಾಂಟೀನ್ನೊಂದಿಗೆ ಒಂದು ಬಿಎಚ್ಕೆ ಮನೆಯೊಂದನ್ನು ಕಟ್ಟಿಕೊಡಲಿದೆ.
-
The Mahindra @life_spaces team will soon start the construction as per Kamalathal’s requirement. Once again thanks to BharatGas Coimbatore for providing her a continued supply of LPG. (3/3) pic.twitter.com/NO6YtWr9b5
— anand mahindra (@anandmahindra) April 2, 2021 " class="align-text-top noRightClick twitterSection" data="
">The Mahindra @life_spaces team will soon start the construction as per Kamalathal’s requirement. Once again thanks to BharatGas Coimbatore for providing her a continued supply of LPG. (3/3) pic.twitter.com/NO6YtWr9b5
— anand mahindra (@anandmahindra) April 2, 2021The Mahindra @life_spaces team will soon start the construction as per Kamalathal’s requirement. Once again thanks to BharatGas Coimbatore for providing her a continued supply of LPG. (3/3) pic.twitter.com/NO6YtWr9b5
— anand mahindra (@anandmahindra) April 2, 2021
ಭಾರತ್ ಗ್ಯಾಸ್ ಕೊಯಮತ್ತೂರು ಈ ಉದ್ದೇಶಕ್ಕಾಗಿ ಎಲ್‌ಪಿಜಿ ಪೂರೈಕೆ ಮುಂದುವರೆಸಿದೆ. ಕೊಯಮತ್ತೂರ್ ಹೊರವಲಯದಲ್ಲಿ ಇರುವ ವಡಿವೇಲಂಪಲಯಂನಲ್ಲಿ ಕೇವಲ ಒಂದು ರೂಪಾಯಿಗೆ ಇಡ್ಲಿ ಮಾರಾಟ ಮಾಡಿ ಕಮಲಥಾಲ್ ಎಲ್ಲರ ಗಮನ ಸೆಳೆದಿದ್ದರು.