ಮುಂಬೈ: ಅದೃಷ್ಟ ಇದ್ದರೆ ಒಂದೇ ಒಂದು ಪತ್ರ ನಿಮ್ಮ ಜೀವನವನ್ನೇ ಬದಲಾಯಿಸಿ ನಿಮ್ಮ ಕನಸಿನ ಕೆಲಸದತ್ತ ಕೊಂಡೊಯ್ಯಬಹುದು. 'ಹ್ಯೂಮನ್ಸ್ ಆಫ್ ಬಾಂಬೆ' ತಮ್ಮ ಫೇಸ್‌ಬುಕ್ ಪುಟದಲ್ಲಿ ಇತ್ತೀಚೆಗೆ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ 27 ವರ್ಷದ ಶಾಂತನು ನಾಯ್ಡು ಎಂಬಾತನ ಕೈಬರಹದ ಪತ್ರಕ್ಕೆ ಮನಸೋತ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ನೀಡಿದ್ದಾರೆ ಎಂದು ಬರೆದುಕೊಳ್ಳಲಾಗಿದೆ.
2014ರಲ್ಲಿ ಪದವಿ ಮುಗಿಸಿದ ಬಳಿಕ ಶಾಂತು, ಟಾಟಾ ಸಮೂಹ ಸಂಸ್ಥೆಗೆ ಸೇರ್ಪಡೆಯಾಗಿದ್ದಾರೆ. ಒಮ್ಮೆ ತಮ್ಮ ಕೆಲಸದಿಂದ ಮನೆಗೆ ಹಿಂದಿರುಗುವಾಗ ರಸ್ತೆಗಳಲ್ಲಿ ಬೀದಿ ನಾಯಿಯ ಮೃತ ದೇಹ ಕಂಡು ಮರುಗಿದ್ದರು. ರಸ್ತೆಯಲ್ಲಿ ದಾಟುವಾಗ ವಾಹನಗಳಿಗೆ ಸಿಲುಕಿ ಸಾವನ್ನಪ್ಪುವ ಶ್ವಾನಗಳ ಬಗ್ಗೆ ಕನಿಕರ ಹುಟ್ಟಿ ಇದನ್ನು ತಪ್ಪಿಸಲು ಯೋಚಿಸಿದರು. ಬೀದಿ ನಾಯಿಗಳಿಗೆ ಪ್ರತಿಫಲಕಗಳಿಂದ ಹೊಳೆಯುವ ಕಾಲರ್ ಪಟ್ಟಿಯನ್ನು ತಯಾರಿಸಲು ಮುಂದಾಗಿ ಕೊನೆಗೆ ಯಶಸ್ವಿಯಾದರು.
ದಾರಿತಪ್ಪಿ ನಡುರಸ್ತೆಯಲ್ಲಿ ಓಡಾಡುವ ಶ್ವಾನದ ಕೊರಳಿಗೆ ಕಟ್ಟಲಾಗುವ ಪ್ರತಿಫಲಕಗಳು ರಾತ್ರಿಯ ವೇಳೆ ಸಂಚರಿಸುವ ಚಾಲಕರು ದೂರದಿಂದಲೇ ಅವುಗಳ ಇರುವಿಕೆಯನ್ನು ಗುರುತಿಸಿ ಸಂಭವನೀಯ ಅಪಘಾತ ತಪ್ಪಿಸಲು ನೆರವಾಯಿತು. ನಾಯಿಗಳ ರಕ್ಷಣೆಗೆ ಮಾಡಿದ ಕೆಲಸ ಟಾಟಾ ಗ್ರೂಪ್ ಆಫ್ ಕಂಪನಿಯ ಸುದ್ದಿಪತ್ರದಲ್ಲಿ ಪ್ರಕಟವಾಯಿತು.
- " class="align-text-top noRightClick twitterSection" data="">
'ಆ ಸಮಯದಲ್ಲಿ ನನ್ನ ತಂದೆ, ರತನ್ ಟಾಟಾ ಅವರಿಗೆ ಶ್ವಾನಗಳು ಕಂಡರೆ ಬಹಳ ಪ್ರೀತಿ. ಅವರಿಗೆ ಈ ಬಗ್ಗೆ ಒಂದು ಪತ್ರ ಬರೆಯುವಂತೆ ಸಲಹೆ ನೀಡಿದ್ದರು. ಆರಂಭದಲ್ಲಿ ಭಯಪಟ್ಟು ಯಾಕೇ ಬರೆಯಬಾರದು ಎಂದು ನನಗೆ ನಾನೇ ಪ್ರಶ್ನಿಸಿಕೊಂಡು ಕೈಬರಹದ ಪತ್ರ ಬರೆದೆ' ಎಂದರು ಶಾಂತನು.
ಎರಡು ತಿಂಗಳ ನಂತರ ತಮ್ಮನ್ನು ಭೇಟಿ ಮಾಡಲು ಬರುವಂತೆ ರತನ್ ಟಾಟಾ ಅವರೇ ಆಹ್ವಾನ ನೀಡಿದ್ದರು. ಕೆಲವು ದಿನಗಳ ಬಳಿಕ ರತನ್ ಅವರನ್ನು ಮುಂಬೈನ ಕಚೇರಿಯಲ್ಲಿ ಭೇಟಿಯಾದರು. 'ನೀವು ಮಾಡುವ ಕೆಲಸದಿಂದ ನನಗೆ ತುಂಬಾ ಹೃದಯ ಸ್ಪರ್ಶಿಯವಾಗಿದೆ ಎಂದು ಟಾಟಾ ಶ್ಲಾಘಿಸಿದರು.
ಮಾಸ್ಟರ್ ಡಿಗ್ರಿ ಮಾಡಲು ವಿದೇಶಕ್ಕೆ ತೆರಳಿ ಭಾರತಕ್ಕೆ ಹಿಂದುರುಗುತ್ತಿದ್ದಂತೆ, 'ರತನ್ ಟಾಟಾ ಅವರೇ ಖುದ್ದು ಕರೆಮಾಡಿ ತಮ್ಮ ಕಚೇರಿಯ ಸಹಾಯಕನಾಗಿ ಬರುವಂತೆ ಉದ್ಯೋಗದ ಆಫರ್ ಮುಂದಿಟ್ಟರು. ನನಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ತಿಳಿಯಲಿಲ್ಲ. ಒಂದು ಕ್ಷಣ ದೀರ್ಘ ಉಸಿರು ತೆಗೆದುಕೊಂಡು ಕೆಲ ಸೆಕೆಂಡ್ಗಳ ಬಳಿಕ 'ಯೆಸ್' ಎಂದು ಕೆಲಸಕ್ಕೆ ಒಪ್ಪಿಕೊಂಡೆ ಎನ್ನಾತ್ತಾರೆ ಶಾಂತನು.