ETV Bharat / business

ದುಬಾರಿಯಾದ ವಿಮಾನ ಪ್ರಯಾಣ ದರ... ದೂರ ಉಳಿದ ಪ್ರಯಾಣಿಕರು - undefined

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರಯಾಣಿಕರ ಸಂಖ್ಯೆಯಲ್ಲಿ ಬೆಳವಣಿಗೆ ಕಂಡುಬಂದಿದೆ. ಆದ್ರೆ ಮಾಸಿಕ ಅನುಕ್ರಮದಲ್ಲಿ ಪ್ರಯಾಣಿಕರ ಸಂಖ್ಯೆ ಋಣಾತ್ಮಕ ಪ್ರವೃತ್ತಿ ತೋರಿಸಿದೆ.

ಸಂಗ್ರಹ ಚಿತ್ರ
author img

By

Published : Apr 7, 2019, 11:52 AM IST

ಮುಂಬೈ/ನವದೆಹಲಿ: ಸಾಮರ್ಥ್ಯ ನಿರ್ಬಂಧ ಹಾಗೂ ಹೆಚ್ಚುತ್ತಿರುವ ಇಂಧನ ದರದ ಪರಿಣಾಮವಾಗಿ ವಿಮಾನ ಪಯಾಣದ ಟಿಕೆಟ್​ ಬೆಲೆ ಏರಿಕೆ ಹೀಗೆ ಮುಂದುವರಿದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಕಡಿತವಾಗಲಿದೆ ಎಂದು ಉದ್ಯಮ ವಲಯದ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಮಾಹಿತಿಯ ಪ್ರಕಾರ, ಫೆಬ್ರವರಿಯಲ್ಲಿ ಬೆಳವಣಿಗೆ ದರವು ಶೇ 5.62ರಷ್ಟು (1.13 ಕೋಟಿ) ಇದ್ದರೆ ಜನವರಿಯಲ್ಲಿ ಶೇ 9.10ಕ್ಕೆ ತಲುಪಿತ್ತು. ಆದರೆ, 2018ರ ಡಿಸೆಂಬರ್​ನಲ್ಲಿ ಶೇ 11.03ರಷ್ಟು ವೃದ್ಧಿಯಾಗಿತ್ತು. 2019ರ ಕ್ಯಾಲೆಂಡರ್ ವರ್ಷದಲ್ಲಿ ಮಾಸಿಕವಾಗಿ ಕ್ಷೀಣಿಸುತ್ತಾ ಸಾಗಿದೆ. ಅಂತಾರಾಷ್ಟ್ರೀಯ ವಾಯು ಸಂಚಾರ ಸಂಸ್ಥೆಯ (ಐಎಟಿಎ) ದತ್ತಾಂಶ ಸಹ ಇದನ್ನೇ ತೋರಿಸುತ್ತಿದೆ.

ಆದಾಯ ಪ್ರಯಾಣಿಕರ ಕಿಲೋಮೀಟರ್ (ಆರ್​ಪಿಕೆ) ಮಾಪನದ ಅನ್ವಯ, ಭಾರತದ ದೇಶಿ ವಾಯುಯಾನ ಪ್ರಯಾಣ ಜನವರಿಯಲ್ಲಿ ಶೇ. 12.4ಕ್ಕೆ ತಲುಪಿದ್ದರೇ ಫೆಬ್ರವರಿಯಲ್ಲಿ ಶೇ .10ರಷ್ಟು ಮಾತ್ರ ಇದೆ. 'ವಿಮಾನ ದರ ಹೆಚ್ಚಳವೇ' ಇದಕ್ಕೆ ಮುಖ್ಯ ಕಾರಣವೆಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಾರ್ಚ್​ 14ರಿಂದ ಬೋಯಿಂಗ್​ 737 ಮ್ಯಾಕ್ಸ್​ ವಿಮಾನಗಳ ಸುರಕ್ಷತೆ ಖಚಿತತೆಗೆ ಹಾರಾಟಕ್ಕೆ ಭಾರತ ಸೇರಿದಂತೆ ಇತರೆ ರಾಷ್ಟ್ರಗಳು ತಾತ್ಕಾಲಿಕ ನಿಷೇಧ ಹೇರಿವೆ. ಇದರ ಜೊತೆಗೆ ದೇಶಿ ವಿಮಾನಯಾನದಲ್ಲಿನ ಆಂತರಿಕ ಕಾರಣಗಳು ನೂರಾರು ವಿಮಾನಗಳ ಸೇವೆ ಲಭ್ಯವಾಗುತ್ತಿಲ್ಲ. ಈ ವೇಳೆ ಉದ್ಭವಿಸಿದ ಬೇಡಿಕೆಯ ಲಾಭ ಪಡೆಯಲು ಬೆಲೆ ದರ ಏರಿಸಿರುವ ಸಂಸ್ಥೆಗಳ ನಿರ್ಧಾರದಿಂದ ಪ್ರಯಾಣಿಕರು ಸಂಚಾರದಿಂದ ಹಿಮ್ಮುಖವಾಗಿದ್ದಾರೆ.

ಕಳೆದ ಎರಡು ತಿಂಗಳಿಂದ ಉದ್ಯಮದಲ್ಲಿ ನಡೆಯುತ್ತಿರುವ ಹಲವು ವಿದ್ಯಮಾನಗಳಿಂದ ಬಹಳಷ್ಟು ವಿಮಾನಗಳು ಹಾರಾಟ ನಡೆಸುತ್ತಿಲ್ಲ. ಈ ದಿಢೀರ್​ ಪರಿಣಾಮದಿಂದಾಗಿ ಈ ಅವಧಿಯಲ್ಲಿ ಶೇ. 15-20ರಷ್ಟು ಬೆಲೆ ಹೆಚ್ಚಳವಾಗಿದೆ ಎಂದು ಯಾತ್ರಾ ಡಾಟ್​ ಕಾಮ್​ನ ಶರತ್​ ಧಲ್ಲ್​ ವಿಶ್ಲೇಷಿಸಿದ್ದಾರೆ.

ದೇಶದ ಎರಡನೇ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಜೆಟ್​ ಏರ್​ವೇಸ್​, ತನ್ನ ಆರ್ಥಿಕ ಸಂಕಷ್ಟ ಮತ್ತು ವಿಮಾನ ಬಾಡಿಗೆ ಪಾವತಿ ವಿಳಂಬದಿಂದ ಫೆಬ್ರವರಿ ಮಧ್ಯದ ಅವಧಿಯಲ್ಲಿ 30 ವಿಮಾನಗಳ ಹಾರಾಟವನ್ನು ಕಡಿತಗೊಳಿಸಿದೆ. ಸ್ಪೈಸ್​ ಜೆಟ್​ ಸಹ ಶೇ. 15ರಷ್ಟಿರುವ ಬೋಯಿಂಗ್​ 737 ಮ್ಯಾಕ್ಸ್​ ವಿಮಾನಗಳ ಸೇವೆಯನ್ನು ವಿಮಾನಯಾನ ಸಚಿವಾಲಯದ ಆದೇಶದ ಅನುಸಾರ ಸ್ಥಗಿತಗೊಳಿಸಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.