ETV Bharat / business

30 ದಿನದಲ್ಲಿ 5 ಲಕ್ಷ ಬೈಕ್​, ಸ್ಕೂಟರ್​ ಮಾರಿದ ಹೀರೊ ಮೊಟೊಕಾರ್ಪ್​!

ದೇಶಿಯ ಮಾರಾಟವು 2019ರ ಜುಲೈನಲ್ಲಿ 5.11 ಲಕ್ಷಕ್ಕೆ ಹೋಲಿಸಿದರೆ 5.07 ಲಕ್ಷ ಯೂನಿಟ್​ಗಳಷ್ಟಾಗಿದೆ. 2020ರ ಜುಲೈನಲ್ಲಿ ರಫ್ತು 7,563 ಆಗಿದ್ದು, ಹಿಂದಿನ ವರ್ಷ ಇದೇ ಅವಧಿಯಲ್ಲಿ ಇದು 24,436 ರಷ್ಟಿತ್ತು.

Hero
ಹೀರೋ
author img

By

Published : Aug 1, 2020, 4:36 PM IST

ನವದೆಹಲಿ: ಹೀರೊ ಮೊಟೊಕಾರ್ಪ್ ಜುಲೈ ತಿಂಗಳಲ್ಲಿ 5.14 ಲಕ್ಷ ಯುನಿಟ್ ಮೋಟರ್‌ ಸೈಕಲ್ ಮತ್ತು ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ.

ಈ ಹಿಂದಿನ ತಿಂಗಳಿಗಿಂತ ಶೇ 14ರಷ್ಟು ಬೆಳವಣಿಗೆ ವೃದ್ಧಿಸಿದ್ದು, ಸಗಟು ರವಾನೆಯು ಕಳೆದ ವರ್ಷದ ಇದೇ ತಿಂಗಳಿಗಿಂತ 95 ಪ್ರತಿಶತಕ್ಕಿಂತ ಅಧಿಕವಾಗಿದೆ ಎಂದು ಹೇಳಿದೆ.

ದೇಶಿಯ ಮಾರಾಟವು 2019ರ ಜುಲೈನಲ್ಲಿ 5.11 ಲಕ್ಷಕ್ಕೆ ಹೋಲಿಸಿದರೆ 5.07 ಲಕ್ಷ ಯೂನಿಟ್​ಗಳಷ್ಟಾಗಿದೆ. 2020ರ ಜುಲೈನಲ್ಲಿ ರಫ್ತು 7,563 ಆಗಿದ್ದು, ಹಿಂದಿನ ವರ್ಷ ಇದೇ ಅವಧಿಯಲ್ಲಿ ಇದು 24,436 ರಷ್ಟಿತ್ತು.

ಕಳೆದ ತಿಂಗಳು ಮೋಟರ್‌ ಸೈಕಲ್‌ ಮಾರಾಟವು 4.78 ಲಕ್ಷ ಮತ್ತು ಸ್ಕೂಟರ್ ಮಾರಾಟವು 35,843 ಯೂನಿಟ್​ಗಳಷ್ಟಿದೆ. ಕಳೆದ ವರ್ಷದಲ್ಲಿ ಕ್ರಮವಾಗಿ 4.9 ಲಕ್ಷ ಮತ್ತು 45,752 ಗಳಷ್ಟಿತ್ತು.

ಹೀರೋ ಮೊಟೊಕಾರ್ಪ್ ಗ್ರಾಹಕರ ಭೇಟಿ ಕೇಂದ್ರಗಳಲ್ಲಿ ಕಟ್ಟುನಿಟ್ಟಾದ ಸುರಕ್ಷತಾ ಕ್ರಮ ಮತ್ತು ಮಾರ್ಗಸೂಚಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ವಾಹನಗಳ ಬೇಡಿಕೆಯು ಉದ್ಯಮಕ್ಕೆ ಆಶಾದಾಯಕವಾಗಿ ಕಾಣುತ್ತಿದೆ. ದೇಶದ ಹಲವು ಭಾಗಗಳಲ್ಲಿನ ಮೈಕ್ರೋ-ಲಾಕ್‌ಡೌನ್‌ಗಳಿಂದ ಮಾರಾಟದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.