ನವದೆಹಲಿ: ಭಾರತದ ಅತಿದೊಡ್ಡ ಖಾಸಗಿ ವಲಯದ ಸಾಲದಾತ ಹೆಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್ ತನ್ನ ಹೂಡಿಕೆದಾರರಿಗೆ ತಪ್ಪು ವ್ಯವಹಾರಿಕ ಮಾಹಿತಿ ಬಿಡುಗಡೆ ಮಾಡಿದೆ ಎಂಬ ಆರೋಪದ ಮೇಲೆ ಅಮೆರಿಕ ಮೂಲದ ಕಾನೂನು ಸಂಸ್ಥೆಯು ಮೇಲ್ವಿಚಾರಣೆ ನಡೆಸಲಿದೆ.
ಜಾಗತಿಕ ಹೂಡಿಕೆದಾರರ ಹಕ್ಕುಗಳ ಸಂರಕ್ಷಣೆಯ ರೋಸೆನ್ ಲಾ ಫರ್ಮ್, ಭಾನುವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕಿನ ಷೇರುದಾರರ ಪರವಾಗಿ ಸಂಭಾವ್ಯ ಸೆಕ್ಯುರಿಟೀಸ್ ಹಕ್ಕುಗಳ ಬಗ್ಗೆ ತನಿಖೆ ಪ್ರಾರಂಭಿಸುತ್ತಿದೆ. ರೋಸೆನ್ ಲಾ ಫರ್ಮ್ ಮತ್ತು ಸ್ಚಾಲ್ ಲಾ ಫರ್ಮ್ ಮೇಲ್ವಿಚಾರಣೆಯ ಉಸ್ತುವಾರಿ ಹೊತ್ತಿವೆ ಎಂದು ಹೇಳಿದೆ.
ಸಂಭಾವ್ಯ ಮೊಕದ್ದಮೆಯು ಹಲವು ಮಾಧ್ಯಮ ವರದಿಗಳನ್ನು ಆಧರಿಸಿದೆ. ಅವುಗಳ ಪೈಕಿ ಹೆಚ್‌ಡಿಎಫ್‌ಸಿ ಬ್ಯಾಂಕಿನ ವಾಹನ ಸಾಲದ ಬಗ್ಗೆ ಶಂಕೆ ವ್ಯಕ್ತವಾಗಿದೆ. ವರದಿಯ ಪ್ರಕಾರ, ಹೆಚ್‌ಡಿಎಫ್‌ಸಿ ಬ್ಯಾಂಕಿನ ಆಂತರಿಕ ಲೆಕ್ಕ ಪರಿಶೋಧನೆಯು ಕಾರು ಸಾಲದ ಗ್ರಾಹಕರಿಗೆ ವಾಹನದ ಜಿಪಿಎಸ್ ಸಾಧನಕ್ಕೆ ಸಂಬಂಧಿಸಿದ್ದಾಗಿದೆ. ಇದು ಕಾನೂನಿನ ಮತ್ತು ಆಡಳಿತ ನಿಯಮಗಳನ್ನು ಉಲ್ಲಂಘಿಸಿದ್ದಂತೆ ಆಗಲಿದೆ. ಬ್ಯಾಂಕಿನ ನೌಕರರು ಹಣಕಾಸೇತರ ವ್ಯವಹಾರಗಳಲ್ಲಿ ಪಾಲ್ಗೊಳ್ಳುವುದನ್ನು ನಿಷೇಧಿಸುತ್ತದೆ.
ಹೆಚ್‌ಡಿಎಫ್‌ಸಿ ಬ್ಯಾಂಕಿನ ಅಮೆರಿಕನ್ ಠೇವಣಿ ಸ್ವೀಕೃತಿ ಬೆಲೆಯು 2020ರ ಜುಲೈ 13ರಂದು ಪ್ರತಿ ಷೇರಿನ ಮೇಲೆ 1.37 ಡಾಲರ್ ಅಥವಾ ಶೇ 2.83ರಷ್ಟು ಕುಸಿದು 47.02 ಡಾಲರ್ಗೆ ತಲುಪಿದೆ ಎಂದು ರೋಸೆನ್ ಲಾ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ವರ್ಷ ಐಟಿ ದೈತ್ಯ ಇನ್ಫೋಸಿಸ್ ವಿರುದ್ಧ ರೋಸೆನ್ ಲಾ ಇದೇ ರೀತಿಯ ಪ್ರಕರಣದ ಮೊಕದ್ದಮೆ ಸಿದ್ಧಪಡಿಸಿತ್ತು. ಈ ವರ್ಷದ ಮೇನಲ್ಲಿ ಈ ಮೊಕದ್ದಮೆಯನ್ನು ವಜಾಗೊಳಿಸಲಾಯಿತು.