ಮುಂಬೈ: 2020ರ ಅಕ್ಟೋಬರ್ 27ರಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಶಶಿಧರ್ ಜಗದೀಶನ್ (ಸಶಿ) ಅವರನ್ನು ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಲು ಎಚ್‌ಡಿಎಫ್‌ಸಿ ಬ್ಯಾಂಕ್ನ ನಿರ್ದೇಶಕರ ಮಂಡಳಿ ಅನುಮೋದಿಸಿದೆ.
ಅಂಚೆ ಮತದಾನದ ಮೂಲಕ (ರಿಮೋಟ್ ಇ-ಮತದಾನದ) ನೇಮಕಾತಿ ಅನುಮೋದನೆಗೆ ಬ್ಯಾಂಕ್ನ ಷೇರುದಾರರ ಮುಂದೆ ಇಡಬೇಕು ಎಂದು ಬ್ಯಾಂಕ್ ಬಿಎಸ್‌ಇಗೆ ಸಲ್ಲಿಸಿದ ಫೈಲಿಂಗ್ನಲ್ಲಿ ತಿಳಿಸಿದೆ.
ಸಶಿ ಅವರು 1996ರಲ್ಲಿ ಹಣಕಾಸು ಕಾರ್ಯದ ವ್ಯವಸ್ಥಾಪಕರಾಗಿ ಬ್ಯಾಂಕ್‌ಗೆ ಸೇರಿದರು. 1999ರಲ್ಲಿ ಬ್ಯುಸಿನೆಸ್ ಹೆಡ್ (ಫೈನಾನ್ಸ್) ಆಗಿ, 2008ರಲ್ಲಿ ಮುಖ್ಯ ಹಣಕಾಸು ಅಧಿಕಾರಿಯಾಗಿ ನೇಮಕಗೊಂಡರು. ಕಳೆದ ಹಲವು ವರ್ಷಗಳಲ್ಲಿ ಕಾರ್ಯತಂತ್ರದ ಉದ್ದೇಶ ಸಾಧಿಸುವಲ್ಲಿ ಸಂಘಟನೆ ಜೋಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.
ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಕಗೊಳ್ಳುವ ಮೊದಲು, ಅವರು ಹಣಕಾಸು, ಮಾನವ ಸಂಪನ್ಮೂಲ, ಕಾನೂನು ಮತ್ತು ಕಾರ್ಯದರ್ಶಿ, ಆಡಳಿತ ಸೇರಿದಂತೆ ಕಾರ್ಯಗಳ ಮೇಲ್ವಿಚಾರಣೆ ಜೊತೆಗೆ ಬ್ಯಾಂಕಿನ ಕಾರ್ಯತಂತ್ರದ ಬದಲಾವಣೆ ಏಜೆಂಟ್ ಆಗಿದ್ದರು.
ಭೌತಶಾಸ್ತ್ರದಲ್ಲಿ ಪರಿಣತಿ ಜತೆಗೆ ವಿಜ್ಞಾನದಲ್ಲಿ ಪದವಿ ಮುಗಿಸಿದ್ದಾರೆ. ಅವರು ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ. ಎಕನಾಮಿಕ್ಸ್ ಆಫ್ ಮನಿ, ಬ್ಯಾಂಕಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.