ಬೆಂಗಳೂರು: ಜಿಎಸ್‌ಟಿ ಪಾವತಿಯ ವಂಚನೆಗಳನ್ನು ಪರಿಶೀಲಿಸಲು 2020ರ ಜನವರಿಯಿಂದ ಹೊಸ ವಿತರಕರಿಗೆ ಆಧಾರ್ ದೃಢೀಕರಣ ಅಥವಾ ಭೌತಿಕ ಪರಿಶೀಲನೆಯನ್ನು ಕಡ್ಡಾಯಗೊಳಿಸಲು ಜಿಎಸ್‌ಟಿ ಸಂಪರ್ಕ ಸಭೆ ನಿರ್ಧರಿಸಿದೆ.
ಹೊಸ ವಿತರಕರಿಗೆ ಆಧಾರ್ ದೃಢೀಕರಣ ಕಡ್ಡಾಯವಾಗಿರುತ್ತದೆ. ಈ ಮೊದಲು ಇದನ್ನು ಇಚ್ಛೆಗೆ ಅನುಸಾರವಾಗಿ ವಿನಾಯಿತಿ ನೀಡಲಾಗಿತ್ತು. ಎರಡು ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫ್ಲೈ- ಬೈ-ನೈಟ್ (ತ್ವರಿತ ಹಣ ಮಾಡುವ ವ್ಯವಹಾರ) ಚಟುವಟಿಕೆ ಬಳಸಿಕೊಳ್ಳುತ್ತಿರುವುದನ್ನು ನಾವು ಗಮನಿಸಿದ್ದೇವೆ. ಜೊತೆಗೆ ನಕಲಿ ಇನ್‌ವಾಯ್ಸ್‌ಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ಜಿಎಸ್‌ಟಿ ಸಂಪರ್ಕ ಸಭೆಯ ಬಳಿಕ ಹೇಳಿದ್ದಾರೆ.
ಆಧಾರ್ ದೃಢೀಕರಣ ಬಯಸದವರಿಗೆ ಭೌತಿಕ ಪರಿಶೀಲನೆ ನಡೆಸಲಾಗುವುದು. ಇದು ಪೂರ್ಣಗೊಳ್ಳಲು 3 ದಿನ ತೆಗೆದುಕೊಳ್ಳುತ್ತದೆ. ಇತ್ತೀಚೆಗೆ ಮರುಪಾವತಿ ಒಂದು ದೊಡ್ಡ ವಿಷಯವಾಗಿದೆ. ಹೀಗಾಗಿ, ಸೆಪ್ಟೆಂಬರ್ 24ರಿಂದ ಏಕಿಕೃತ ಕೇಂದ್ರ ಜಿಎಸ್‌ಟಿ ಅಥವಾ ರಾಜ್ಯ ಜಿಎಸ್‌ಟಿಯನ್ನು ಸಂಪೂರ್ಣ ಆನ್‌ಲೈನ್ ಮರುಪಾವತಿಗೆ ಒಳಪಡಿಸಲು ಜಿಎಸ್‌ಟಿಎನ್ ನಿರ್ಧರಿಸಿದೆ ಎಂದರು.
2020ರ ಜನವರಿ 1ರಿಂದ ಹೆಚ್ಚು ಸರಳೀಕೃತ ಹೊಸ ರಿಟರ್ನ್ ವ್ಯವಸ್ಥೆ ಆರಂಭ ಆಗಬಹುದು ಎಂದು ತಿಳಿಸಿದ್ದಾರೆ.