ETV Bharat / business

ಸಂಕಷ್ಟಕ್ಕೆ ಸಿಲುಕಿದ ಪಿಎನ್​ಬಿ ಬ್ಯಾಂಕ್​ಗೆ​ ನೂತನ ಸಾರಥಿ ನೇಮಕ - Punjab National Bank

ಸಿಲುಕಿರುವ ಪಂಜಾಬ್ ನ್ಯಾಷನಲ್​ ಬ್ಯಾಂಕ್​ಗೆ (ಪಿಎನ್​ಬಿ) ಎಸ್​.ಎಸ್​. ಮಲ್ಲಿಕಾರ್ಜುನ ರಾವ್ ಅವರನ್ನು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಿಸಲಾಗಿದೆ. 57 ವರ್ಷದ ರಾವ್ ಅವರು ಪ್ರಸ್ತುತ ಅಲಹಾಬಾದ್​ ಬ್ಯಾಂಕ್​ನ ಎಂಡಿ ಮತ್ತು ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದು, 2021ರ ಸೆಪ್ಟಂಬರ್​​ 18ರ ವರೆಗೆ ಪಿಎನ್​ಬಿಯ ಉನ್ನತ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಪಿಎನ್​ಬಿಯ ಆಡಳಿತ ಮಂಡಳಿ ತಿಳಿಸಿದೆ.

ಸಾಂದರ್ಭಿಕ ಚಿತ್ರ
author img

By

Published : Oct 2, 2019, 11:24 AM IST

ನವದೆಹಲಿ: ವಜ್ರೋದ್ಯಮಿ ನೀರವ್​ ಮೋದಿಯ ಸಾವಿರಾರು ಕೋಟಿ ರೂ.ಯ ಸಾಲದ ವಂಚನೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಪಂಜಾಬ್ ನ್ಯಾಷನಲ್​ ಬ್ಯಾಂಕ್​ಗೆ (ಪಿಎನ್​ಬಿ) ಎಸ್​.ಎಸ್​. ಮಲ್ಲಿಕಾರ್ಜುನ ರಾವ್ ಅವರನ್ನು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಿಸಲಾಗಿದೆ.

57 ವರ್ಷದ ರಾವ್ ಅವರು ಪ್ರಸ್ತುತ ಅಲಹಾಬಾದ್​ ಬ್ಯಾಂಕ್​ನ ಎಂಡಿ ಮತ್ತು ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2021ರ ಸೆಪ್ಟಂಬರ್​​ 18ರ ವರೆಗೆ ಅಧಿಕಾರ ಅವಧಿ ಇರಲಿದೆ ಎಂದು ಪಿಎನ್​ಬಿಯ ಆಡಳಿತ ಮಂಡಳಿ ತಿಳಿಸಿದೆ.

ಕ್ಯಾಬಿನೆಟ್ ನೇಮಕಾತಿ ಸಮಿತಿಯು (ಎಸಿಸಿ) ಎಸ್​.ಎಸ್​. ಮಲ್ಲಿಕಾರ್ಜುನ ರಾವ್ ಅವರ ಆಯ್ಕೆಯ ಹಣಕಾಸು ಸೇವಾ ಮಂಡಳಿಯ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರ ಆಗಸ್ಟ್​ ತಿಂಗಳಲ್ಲಿ ಮೂರನೇ ಹಂತದ ಬ್ಯಾಂಕ್​ಗಳ ವಿಲೀನ ಘೋಷಣೆ ಮಾಡಿತ್ತು. ಪಿಎನ್​ಬಿ ಜೊತೆಗೆ ಯುನೈಟೆಡ್​ ಬ್ಯಾಂಕ್ ಆಫ್ ಇಂಡಿಯಾ ಮತ್ತು ಓರಿಯಂಟಲ್​ ಬ್ಯಾಂಕ್ ಆಫ್ ಕಾಮರ್ಸ್​​ ಅನ್ನು ವಿಲೀನಗೊಳಿಸುವುದಾಗಿ ತಿಳಿಸಿತ್ತು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.