ನವದೆಹಲಿ: ಗೂಗಲ್ ಪೇ ಡಿಜಿಟಲ್ ಪ್ಲಾಟ್ಫಾರ್ಮ್ 'ನಿಯರ್ ಬೈ ಸ್ಪಾಟ್' ಸೇವೆ ಆರಂಭಿಸಿದ್ದು, ಈ ಮೂಲಕ ಬಳಕೆದಾರ ಹತ್ತಿರದ ಕಿರಾಣಿ ಅಂಗಡಿ ಸೇರಿದಂತೆ ಅಗತ್ಯ ಸರಕುಗಳ ಮಾರಾಟ ಮಳಿಗೆಯನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.
ಕೋವಿಡ್ 19 ನಿಯಂತ್ರಣಕ್ಕೆ ಲಾಕ್‌ಡೌನ್ ವಿಧಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆದೇಶಿಸಲಾಗಿದೆ. ಈ ನೂತನ ಸೇವೆ ಬೆಂಗಳೂರಿನಲ್ಲಿ ಈಗಾಗಲೇ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹೈದರಾಬಾದ್, ಚೆನ್ನೈ, ಮುಂಬೈ, ಪುಣೆ ಮತ್ತು ದೆಹಲಿಯಲ್ಲಿ ಶುರುವಾಗಲಿದೆ ಎಂದು ತನ್ನ ಬ್ಲಾಗ್ನಲ್ಲಿ ಬರೆದುಕೊಂಡಿದೆ.
ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಡಿಜಿಟಲ್ ಪಾವತಿ ಈ ಹಿಂದಿಗಿಂತ ಪ್ರಸ್ತುತ ದಿನಗಳಲ್ಲಿ ಹೆಚ್ಚು ಮಹತ್ವದ್ದಾಗಿವೆ. ಕೋವಿಡ್-19ಗೆ ಸಂಬಂಧಿಸಿದ ಪ್ರಮುಖ ಮಾಹಿತಿ ಸಹ ಇದರಲ್ಲಿ ಒಳಗೊಂಡಿರುತ್ತದೆ ಎಂದು ಕಂಪನಿ ತಿಳಿಸಿದೆ.
ಪಿಎಂ ಕೇರ್ಸ್, ಸೀಡ್ಸ್, ಗಿವ್ ಇಂಡಿಯಾ, ಯುನೈಟೆಡ್ ವೇ ಮತ್ತು ಚಾರಿಟೀಸ್ ಏಡ್ ಫೌಂಡೇಷನ್‌ನಂತಹ ಎನ್‌ಜಿಒಗಳಿಗೆ ವೈದ್ಯಕೀಯ ಕಾರ್ಯಕರ್ತರಿಗೆ ರಕ್ಷಣಾತ್ಮಕ ಸಾಧನಗಳನ್ನು ಒದಗಿಸುವಂತಹ ಕಾರ್ಯಗಳಿಗೆ ಸಾರ್ವಜನಿಕರಿಂದ ದೇಣಿಗೆಯನ್ನು ತನ್ನ ಡಿಜಿಟಲ್ ವೇ ಮೂಲಕ ಸಂಗ್ರಹಿಸುತ್ತಿದೆ.
ಗೂಗಲ್ ಪೇನಲ್ಲಿ ಪಿಎಂ-ಕೇರ್ಸ್‌ಗೆ ದೇಣಿಗೆಯಾಗಿ ಇದುವರೆಗೂ 105 ಕೋಟಿ ರೂ. ಸಂಗ್ರಹಿಸಿದೆ. ಇದರ ಮೊತ್ತ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ ಎಂದು ಹೇಳಿದೆ.