ಮುಂಬೈ : ಬಜೆಟ್ ಪ್ರಯಾಣಿಕ ವಿಮಾನಯಾನ ಸಂಸ್ಥೆ ಗೋಏರ್, ಪ್ರಯಾಣಿಕರಿಗೆ ಒಂದೇ ಪಿಎನ್‌ಆರ್‌ನಲ್ಲಿ ಬಹು ಸಾಲು ಕಾಯ್ದಿರಿಸಲು ಅವಕಾಶವನ್ನು ಪ್ರೈವೇಟ್ ಝೋನ್ನ 'ಗೋಫ್ಲೈ ಪ್ರೈವೇಟ್' ಎಂಬ ಯೋಜನೆಯಡಿ ಪ್ರಾರಂಭಿಸಿದೆ.
ಈ ಸೌಲಭ್ಯವು ಪೂರ್ಣ ಪ್ರಮಾಣದ ಖಾಸಗಿ ಚಾರ್ಟರ್ ಹಾರಾಟದ ಭಾಗವಾಗಿದೆ. ಗೋಫ್ಲೈ ಪ್ರೈವೇಟ್ ಗ್ರಾಹಕರಿಗೆ ಪ್ರಯಾಣ ಮತ್ತು ಅವರು ಎಷ್ಟು ಸಾಲು ಸೀಟ್ಗಳನ್ನು ನಿರ್ಬಂಧಿಸಬೇಕು ಎಂಬುದನ್ನು ನಿರ್ಧರಿಸಲು ಅನುವು ಮಾಡಿಕೊಡುತ್ತದೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಗೋಏರ್ ವಿಮಾನಯಾನವು ಇಂದು (ಶುಕ್ರವಾರ) 'ಗೋಫ್ಲೈ ಪ್ರೈವೇಟ್' ಸ್ಕೀಮ್ ಪರಿಚಯಿಸಿದೆ. ಇದರಲ್ಲಿ ಗ್ರಾಹಕರು ಅನೇಕ ಸಾಲುಗಳನ್ನು ಕಾಯ್ದಿರಿಸಬಹುದು. ಒಂದೇ ಪಿಎನ್‌ಆರ್‌ನಲ್ಲಿ ತಮ್ಮದೇ ಆದ ಖಾಸಗಿ ವಲಯ ರಚಿಸಬಹುದು ಎಂದು ಹೇಳಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ ಮಧ್ಯೆಯೂ ಪ್ರಯಾಣಿಕ ಬೇಡಿಕೆಯ ಕೊರತೆಯ ಮಧ್ಯೆ ಆದಾಯಕ್ಕಾಗಿ ಹೆಣಗಾಡುತ್ತಿರುವ ದೇಶೀಯ ವಿಮಾನಯಾನ ಸಂಸ್ಥೆ, ಪ್ರಯಾಣಿಕರಿಗೆ ಅವರ ಪಕ್ಕದ ಆಸನವನ್ನು ರಿಯಾಯಿತಿ ದರದಲ್ಲಿ ನೀಡಿ, ಸಾಮಾಜಿಕ ಅಂತರ ಖಾತರಿಪಡಿಸುತ್ತಿದೆ.