ETV Bharat / business

ಭರತ ಭೂಮಿಯಲ್ಲಿ ಜನಿಸಿ 'ಜಗ'ಮಗಿಸುತ್ತಿರುವ ಭಾರತೀಯ ಸಿಇಒಗಳು!

ಜಾಗತಿಕ ತಂತ್ರಜ್ಞಾನದ ಭೂಸಾದೃಶ್ಯದಲ್ಲಿ ದಶಕಗಳಿಂದ ಭಾರತೀಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಪ್ರಪಂಚದಾದ್ಯಂತ ತಾಂತ್ರಿಕ ಕ್ರಾಂತಿಯ ರಥವನ್ನು ಭಾರತೀಯ ಐಟಿ ಸಾಧಕರು ಎಳೆಯುತ್ತಿದ್ದಾರೆ. ವಿಶ್ವದ ಎರಡು ದೊಡ್ಡ ತಂತ್ರಜ್ಞಾನ ಕಂಪನಿಗಳಾದ ಗೂಗಲ್, ಐಬಿಎಂ ಮತ್ತು ಮೈಕ್ರೋಸಾಫ್ಟ್ ಅನ್ನು ಭಾರತೀಯ ಮೂಲದ ಸಿಇಒಗಳು ಮುನ್ನಡೆಸುತ್ತಿದ್ದಾರೆ ಎಂಬುದು ಹೆಗ್ಗಳಿಕೆ. ಈ ಮೂವರನ್ನೂ ಹೊರತುಪಡಿಸಿ ತಂತ್ರಜ್ಞಾನದ ಜಗತ್ತಿನಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಇನ್ನೂ ಅನೇಕರು ಇದ್ದಾರೆ.

Global CEOs
ಜಾಗತಿಕ ಸಿಇಒ
author img

By

Published : Dec 1, 2020, 5:24 PM IST

ನವದೆಹಲಿ: ಭಾರತೀಯ ಮೂಲದ ಕಾರ್ಯನಿರ್ವಾಹಕ ನಿರ್ದೇಶಕರು (ಸಿಇಒ), ಕಾರ್ಪೊರೇಟ್​ ನಾಯಕರು ಹಲವು ಜಾಗತಿಕ ಕಂಪನಿಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಅವರ ಕಾರ್ಯವೈಖರಿ, ಸೃಜನಶೀಲತೆಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ಜಾಗತಿಕ ತಂತ್ರಜ್ಞಾನದ ಭೂಸಾದೃಶ್ಯದಲ್ಲಿ ದಶಕಗಳಿಂದ ಭಾರತೀಯರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಪ್ರಪಂಚದಾದ್ಯಂತ ತಾಂತ್ರಿಕ ಕ್ರಾಂತಿಯ ರಥವನ್ನು ಭಾರತೀಯ ಐಟಿ ಸಾಧಕರು ಎಳೆಯುತ್ತಿದ್ದಾರೆ. ವಿಶ್ವದ ಎರಡು ದೊಡ್ಡ ತಂತ್ರಜ್ಞಾನ ಕಂಪನಿಗಳಾದ ಗೂಗಲ್, ಐಬಿಎಂ ಮತ್ತು ಮೈಕ್ರೋಸಾಫ್ಟ್ ಅನ್ನು ಭಾರತೀಯ ಮೂಲದ ಸಿಇಒಗಳು ಮುನ್ನಡೆಸುತ್ತಿದ್ದಾರೆ ಎಂಬುದು ಹೆಗ್ಗಳಿಕೆ. ಈ ಮೂವರನ್ನೂ ಹೊರತುಪಡಿಸಿ ತಂತ್ರಜ್ಞಾನದ ಜಗತ್ತಿನಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಇನ್ನೂ ಅನೇಕರು ಇದ್ದಾರೆ.

ಓದಿ: ಬಾಟಾ ಕಂಪನಿಗೆ ಭಾರತೀಯನೇ ಬಾಸ್‌‌: 126 ವರ್ಷಗಳಲ್ಲಿ ಇದೇ ಮೊದಲು

ಗೂಗಲ್‌ನ ಸಿಇಒ ಸುಂದರ್ ಪಿಚೈ, ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು. ಐಐಟಿ ಖರಗ್‌ಪುರ (ಬಿಟೆಕ್), ಸ್ಟ್ಯಾನ್‌ಫೋರ್ಡ್ (ಎಂಎಸ್) ಮತ್ತು ವಾರ್ಟನ್​ನಲ್ಲಿ (ಎಂಬಿಎ) ಶಿಕ್ಷಣ ಪಡೆದರು. ಗೂಗಲ್​ ಮುಖ್ಯಸ್ಥರಾಗುವ ಮುನ್ನ ಆಂಡ್ರಾಯ್ಡ್, ಕ್ರೋಮ್, ಗೂಗಲ್ ಮ್ಯಾಪ್​ ಮತ್ತು ಇತರ ಜನಪ್ರಿಯ ಗೂಗಲ್ ಉತ್ಪನ್ನಗಳಿಗೆ ಉತ್ಪನ್ನಗಳಲ್ಲಿ ತೊಡಗಿಸಿಕೊಂಡಿದ್ದರು.

ಮೈಕ್ರೋಸಾಫ್ಟ್ ಜೊತೆ 22 ವರ್ಷಗಳ ಒಪ್ಪಂದದ ನಂತರ ಸತ್ಯ ನಾಡೆಲ್ಲಾ ಅವರನ್ನು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ 2014ರ ಫೆಬ್ರವರಿಯಲ್ಲಿ ನೇಮಿಸಲಾಯಿತು. ಈ ಹಿಂದೆ ಮೈಕ್ರೋಸಾಫ್ಟ್​ನ ಕ್ಲೌಡ್ ಮತ್ತು ಎಂಟರ್ಪ್ರೈಸ್ ಗ್ರೂಪ್​ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದರು.

ಹೈದರಾಬಾದ್ ಮೂಲದ ಮಣಿಪಾಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಬಿಇ, ವಿಸ್ಕಾನ್ಸಿನ್-ಮಿಲ್ವಾಕೀ ವಿಶ್ವವಿದ್ಯಾಲಯದಿಂದ ಎಂಎಸ್ ಮತ್ತು ಚಿಕಾಗೊ ವಿಶ್ವವಿದ್ಯಾಲಯದ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್‌ನಿಂದ ಎಂಬಿಎ ಪಡೆದಿದ್ದಾರೆ.

ರಾಜೀವ್ ಸೂರಿ 1995ರಲ್ಲಿ ನೋಕಿಯಾ ಸೇರಿದ್ದು, 2014ರ ಏಪ್ರಿಲ್​ನಲ್ಲಿ ಅದರ ಅಧ್ಯಕ್ಷ ಮತ್ತು ಸಿಇಒ ಆಗಿ ನೇಮಕಗೊಳ್ಳುವ ಮೊದಲು ವಿವಿಧ ಹುದ್ದೆಗಳನ್ನು ಅಲಂಕರಿಸಿದರು. ಮೈಕ್ರೋಸಾಫ್ಟ್ ನೋಕಿಯಾದ ಮೊಬೈಲ್ ಫೋನ್ ವ್ಯವಹಾರ ಸ್ವಾಧೀನಪಡಿಸಿಕೊಂಡ ನಂತರ ಸೂರಿಯವರು ನೋಕಿಯಾ ಸಿಇಒ ಸ್ಥಾನಕ್ಕೆ ಏರಿದರು. ಭಾರತದಲ್ಲಿ ಜನಿಸಿದ ಸೂರಿ, ಮಣಿಪಾಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಬಿ-ಟೆಕ್ ಪದವಿ ಪಡೆದಿದ್ದಾರೆ. ಯಾವುದೇ ಸ್ನಾತಕೋತ್ತರ ಪದವಿ ಹೊಂದಿಲ್ಲ.

ಹೈದರಾಬಾದ್‌ನಲ್ಲಿ ಜನಿಸಿದ ಶಾಂತನು ನಾರಾಯಣ್​ ಅವರು 1998ರಲ್ಲಿ ಉತ್ಪನ್ನ ಸಂಶೋಧನೆಯ ಹಿರಿಯ ಉಪಾಧ್ಯಕ್ಷರಾಗಿ ಅಡೋಬ್‌ಗೆ ಸೇರಿದ್ದರು. 2005ರಲ್ಲಿ ಸಿಒಒ ಮತ್ತು 2007ರಲ್ಲಿ ಸಿಇಒ ಆಗಿ ನೇಮಕವಾದರು. ಇವರು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಪದವಿ, ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಎಂಬಿಎ ಮತ್ತು ಬೌಲಿಂಗ್ ಗ್ರೀನ್ ಸ್ಟೇಟ್ ಯೂನಿವರ್ಸಿಟಿಯಿಂದ ಎಂ.ಎಸ್ ಪೂರ್ಣಗೊಳಿಸಿದರು.

ಇಂಟರ್​ನ್ಯಾಷನಲ್​ ಬಿಸನೆಸ್‌ ಮೆಷಿನ್ಸ್ ಕಾರ್ಪೊರೇಷನ್​ನ (ಐಬಿಎಂ)​ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಭಾರತೀಯ ಮೂಲದ ಅರವಿಂದ್ ಕೃಷ್ಣ 2020ರ ಜನವರಿಯಲ್ಲಿ ನೇಮಕವಾದರು. ರೆಡ್ ಹ್ಯಾಟ್ ಒಪ್ಪಂದದ ನೇತೃತ್ವ ವಹಿಸಿದ್ದ 57 ವರ್ಷದ ಅರವಿಂದ್ ಕೃಷ್ಣ, 108 ವರ್ಷಗಳ ಇತಿಹಾಸ ಹೊಂದಿರುವ ಐಬಿಎಂ ಪ್ರಮುಖ ಹುದ್ದೆಗೆ ಏಪ್ರಿಲ್‌ನಲ್ಲಿ ಅಧಿಕಾರ ವಹಿಸಿಕೊಂಡರು.

ಇತರೆ ಜಾಗತಿಕ ಕಂಪನಿಗಳು ಸಿಇಒಗಳಿವರು:

  • ಇವಾನ್ ಮೆನೆಜೆಸ್- ಡಯಾಜಿಯೊ
  • ಅಜಯಪಾಲ್ ಸಿಂಗ್ ಬಂಗಾ- ಮಾಸ್ಟರ್ ಕಾರ್ಡ್
  • ಜಯಶ್ರೀ ಉಳ್ಳಾಲ್- ಅರಿಸ್ಟಾ ನೆಟ್‌ವರ್ಕ್ಸ್
  • ವಸಂತ ನರಸಿಂಹನ್- ನೊವಾರ್ಟಿಸ್
  • ಪುನೀತ್ ರೆನ್ಜೆನ್- ಡೆಲಾಯ್ಟ್
  • ಸಂಜಯ್ ಮೆಹ್ರೋತ್ರಾ- ಮೈಕ್ರಾನ್ ಟೆಕ್
  • ಜಾರ್ಜ್​​ ಕುರಿಯಾನ್- ನೆಟ್​ಆ್ಯಪ್
  • ಸಂದೀಪ್​ ಮಾಥ್ರಾನಿ- ವೀವರ್ಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.