ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ನಲ್ಲಿ ಜಾಗತಿಕ ಕಂಪನಿಗಳ ಹೂಡಿಕೆ ಸುಗ್ಗಿ ಮುಂದುವರೆದಿದ್ದು, ಇಂದು ಮತ್ತೆರಡು ಕಂಪನಿಗಳು ತಮ್ಮ ಬಂಡವಾಳ ಹೂಡುತ್ತಿವೆ ಎಂದು ಕಂಪನಿ ತಿಳಿಸಿದೆ.
ಸಿಂಗಾಪುರ ಸ್ವಾಯತ್ತ ಸಂಪತ್ತು ನಿಧಿ ಜಿಐಸಿ ಹಾಗೂ ಜಾಗತಿಕ ಷೇರು ಸಂಸ್ಥೆ ಟಿಪಿಜಿ ಕ್ಯಾಪಿಟಲ್ಗಳು ರಿಲಯನ್ಸ್ ಇಂಡಸ್ಟ್ರೀಸ್ನಲ್ಲಿ 7,350 ಕೋಟಿ ರೂ.ಯಷ್ಟು ಹೂಡಿಕೆ ಮಾಡುತ್ತಿವೆ. ಕಳೆದು ಒಂದು ತಿಂಗಳ ಅವಧಿಯಲ್ಲಿ ಒಟ್ಟು ಹೂಡಿಕೆಯ ಮೊತ್ತ 32,197.50 ಕೋಟಿ ರೂ.ಯಷ್ಟಾಗಿದೆ ಎಂದು ಹೇಳಿದೆ.
ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ನಲ್ಲಿ (ಆರ್ವಿಎಲ್) ಜಿಐಸಿ 5,512.5 ರೂ.ಯ ಶೇ 1.22ರ ಷೇರು ಮೊತ್ತದಲ್ಲಿ ಹೂಡಿಕೆ ಮಾಡಿದೆ. ಟಿಪಿಜಿ 1,835.5 ಕೋಟಿ ರೂ. ಹೂಡಿಕೆಯ ಜೊತೆಗೆ ಶೇ 0.41 ಷೇರಿನಷ್ಟು ಬಡ್ಡಿ ಪಡೆದಿದೆ.
ರಿಲಯನ್ಸ್ನಲ್ಲಿ ಈ ಎರಡೂ ಕಂಪನಿಗಳು ಹೂಡಿಕೆ ಮಾಡಿರುವ ಪೂರ್ವ ಹಣದ ಷೇರು ಮೊತ್ತ 4.285 ಲಕ್ಷ ಕೋಟಿ ರೂ.ಯಷ್ಟಾಗಿದೆ. ಟಿಪಿಜಿ, ಜಿಯೋ ಪ್ಲಾಟ್ಫಾರ್ಮ್ನಲ್ಲಿ 4,546.8 ಹೂಡಿಕೆ ಮಾಡಿದ ನಂತರ ರಿಲಯನ್ಸ್ ಇಂಡಸ್ಟ್ರೀಸ್ನಲ್ಲಿ ಎರಡನೇ ಅತಿದೊಡ್ಡ ಹೂಡಿಕೆಯಾಗಿದೆ. ಕಳೆದ ಸೆಪ್ಟೆಂಬರ್ನಲ್ಲಿ ಶೇ 7.28ರಷ್ಟು ಷೇರುಗಳನ್ನು 32,297.50 ಕೋಟಿ ರೂ. ಮಾರಾಟ ಮಾಡಿತ್ತು.
ರಿಲಯನ್ಸ್ ಅಂಗ ಸಂಸ್ಥೆಯಾದ ಆರ್ವಿಎಲ್ ದೇಶದಲ್ಲಿ ಅತಿದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಮತ್ತು ಹೆಚ್ಚು ಲಾಭದಾಯಕ ಚಿಲ್ಲರೆ ವ್ಯಾಪಾರ ಸಂಸ್ಥೆಯಾಗಿದೆ. ಸುಮಾರು 7,000 ನಗರ, ಪಟ್ಟಣ ಪ್ರದೇಶಗಳಲ್ಲಿ 12,000 ಮಳಿಗೆಗಳನ್ನು ಹೊಂದಿದೆ.
ರಿಲಯನ್ಸ್ ರಿಟೇಲ್ನ ಹಿಡುವಳಿ ಕಂಪನಿಯಲ್ಲಿ ಹೂಡಿಕೆ ಮಾಡಲು ಅಂತಾರಾಷ್ಟ್ರೀಯ ಕಂಪನಿಗಳ ಸಂಖ್ಯೆ ಹೆಚ್ಚಾಗುತ್ತಿವೆ. ಒಟ್ಟು ವಿದೇಶಿ ನೇರ ಹೂಡಿಕೆಯಲ್ಲಿ ದೇಶದ ಅತಿದೊಡ್ಡ ಚಿಲ್ಲರೆ ವ್ಯಾಪಾರಿ ಕಂಪನಿಯು ಸುಮಾರು 36,200 ಕೋಟಿ ರೂ.ಯ ಶೇ 7.3ರಷ್ಟು ಷೇರುಗಳನ್ನು ಮಾರಾಟ ಮಾಡಿದೆ.
ಕಳೆದ ಮೂರು ವಾರಗಳಲ್ಲಿ ಸಿಲ್ವರ್ ಲೇಕ್, ಕೆಕೆಆರ್, ಜನರಲ್ ಅಟ್ಲಾಂಟಿಕ್, ಮುಬಡಾಲಾ ಸೇರಿದಂತೆ ಮಧ್ಯಪ್ರಾಚ್ಯದಿಂದ ಅರ್ಧ ಡಜನ್ನಷ್ಟು ಜಾಗತಿಕ ನಿಧಿಗಳು ಈಗಾಗಲೇ ರಿಲಯನ್ಸ್ ಚಿಲ್ಲರೆ ವ್ಯಾಪಾರದಲ್ಲಿ ಶತಕೋಟಿ ಡಾಲರ್‌ಗಳಷ್ಟು ಹೂಡಿಕೆ ಮಾಡುವುದಾಗಿ ಘೋಷಿಸಿವೆ.