ETV Bharat / business

ಕೊರೊನಾ ವರ್ಷದಲ್ಲಿ ಕಾರ್ಪೊರೇಟ್​​ ಧನಿಕರಿಗಿಂತ ಕೌಟುಂಬಿಕ ದೇಣಿಗೆ ಅತ್ಯಧಿಕ: ವರದಿ

author img

By

Published : Mar 15, 2021, 3:59 PM IST

Updated : Mar 15, 2021, 4:09 PM IST

ಸರ್ಕಾರದ ಪರಿಶೀಲನೆಗೆ ಒಳಪಡುತ್ತಿರುವ ವಿದೇಶಿ ಧನಸಹಾಯ, ವಿಶೇಷವಾಗಿ ವಿದೇಶಿ ಕೊಡುಗೆ ನಿಯಮಗಳ ಕಾಯ್ದೆ ಬಿಗಿಗೊಳಿಸಿದ ಬಳಿಕ ಯಾವುದೇ ಬೆಳವಣಿಗೆ ಕಾಣಿಸಿಲ್ಲ (16,000 ಕೋಟಿ ರೂ.). 2020ರ ಹಣಕಾಸು ವರ್ಷದಲ್ಲಿ ಒಟ್ಟಾರೆ ನಿಧಿಯ ಪಾಲು ಶೇ.31ರಿಂದ 25ಕ್ಕೆ ಇಳಿದಿದೆ..

Funding
Funding

ನವದೆಹಲಿ : 2020ರ ಹಣಕಾಸು ವರ್ಷದಲ್ಲಿ ಕಂಪನಿ ಮತ್ತು ವಿದೇಶಿ ನಿಧಿ ದೇಣಿಗೆಗೆ ಹೋಲಿಸಿದರೆ ವೈಯಕ್ತಿಕವಾಗಿ ಲೋಕೋಪಕಾರಿ ಧನಸಹಾಯ ಮಾಡಿದವರ ಕೊಡುಗೆ ಗಮನಾರ್ಹವಾಗಿ ಹೆಚ್ಚಳಗೊಂಡಿದೆ ಎಂದು 2021ರ ದಸ್ರಾ &ಕಂಪನಿ ಹಾಗೂ ಬೈನ್ ಇಂಡಿಯಾ ಲೋಕೋಪಕಾರಿ ವರದಿಯಲ್ಲಿ ತಿಳಿದು ಬಂದಿದೆ.

ವೈಯಕ್ತಿಕ ಲೋಕೋಪಕಾರಿ ಧನಸಹಾಯವು 2019ರ ಹಣಕಾಸು ವರ್ಷದಲ್ಲಿನ 21,000 ಕೋಟಿ ರೂ. ಪೈಕಿ 2020ರಲ್ಲಿ ಶೇ.42ರಷ್ಟು 30,000 ಕೋಟಿ ರೂ. ಹೆಚ್ಚಳವಾಗಿದೆ. ಬಹುಪಾಲು ಕುಟುಂಬ ಲೋಕೋಪಕಾರಿಗಳಿಂದ ಬಂದಿದೆ.

5 ಕೋಟಿ ರೂ.ಗಳ ದೇಣಿಗೆ ನೀಡಿದ್ದವರದ್ದು, ಕಾರ್ಪೊರೇಟ್​ಗಳಿಗಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಹಿಂದಿನ ವರ್ಷಕ್ಕಿಂತ 2020ರಲ್ಲಿ 12,000 ಕೋಟಿ ರೂ.ಏರಿಕೆಯಾಗಿದೆ.

ಈ ಹೆಚ್ಚಳದಿಂದಾಗಿ ಒಟ್ಟು ಖಾಸಗಿ ಧನಸಹಾಯವು ಶೇ.23ರಷ್ಟು ಹೆಚ್ಚಳವಾಗಿದೆ. 2020 ವಿತ್ತೀಯ ವರ್ಷದಲ್ಲಿ 64,000 ಕೋಟಿ ರೂ.ಯಷ್ಟಾಗಿದೆ. ಖಾಸಗಿ ದೇಣಿಗೆಯಲ್ಲಿ ಒತ್ತಡ ಎದುರಿಸುತ್ತಿರುವ ದೇಶೀಯ ಕಂಪನಿಗಳ ಪಾಲು ಶೇ.29ರಿಂದ 28ಕ್ಕೆ ಇಳಿದಿದೆ. ಇದರ ಒಟ್ಟಾರೆ ಕೊಡುಗೆ ಕೇವಲ 3,000 ಕೋಟಿ ರೂ.ಗಳಿಂದ 18,000 ಕೋಟಿ ರೂ.ಗೆ ಏರಿದೆ.

ಸರ್ಕಾರದ ಪರಿಶೀಲನೆಗೆ ಒಳಪಡುತ್ತಿರುವ ವಿದೇಶಿ ಧನಸಹಾಯ, ವಿಶೇಷವಾಗಿ ವಿದೇಶಿ ಕೊಡುಗೆ ನಿಯಮಗಳ ಕಾಯ್ದೆ ಬಿಗಿಗೊಳಿಸಿದ ಬಳಿಕ ಯಾವುದೇ ಬೆಳವಣಿಗೆ ಕಾಣಿಸಿಲ್ಲ (16,000 ಕೋಟಿ ರೂ.). 2020ರ ಹಣಕಾಸು ವರ್ಷದಲ್ಲಿ ಒಟ್ಟಾರೆ ನಿಧಿಯ ಪಾಲು ಶೇ.31ರಿಂದ 25ಕ್ಕೆ ಇಳಿದಿದೆ.

ಇದನ್ನೂ ಓದಿ: 'ಪೆಟ್ರೋಲ್​, ಡೀಸೆಲ್ ಜಿಎಸ್​ಟಿಗೆ ಸೇರಿಸುವಂತೆ ಒಂದೇ ಒಂದು ರಾಜ್ಯವೂ ಕೇಳಿಲ್ಲ'

ಕೋವಿಡ್-19ರ ದುಷ್ಪರಿಣಾಮದಿಂದಾಗಿ ಕಾರ್ಪೊರೇಟ್ ನಿಧಿ ಮೇಲಿನ ಒತ್ತಡಗಳು 2021ರ ಆರ್ಥಿಕ ವರ್ಷದಲ್ಲಿ ಮಾತ್ರ ಹೆಚ್ಚಾಗುತ್ತವೆ ಎಂದು ವರದಿ ಸುಳಿವು ನೀಡಿದೆ. ಕಡಿಮೆ ಲಾಭದೊಂದಿಗೆ, ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಗೆ ಕುಸಿಯಲು ಸಿದ್ಧವಾಗಿದೆ ಎಂದಿದೆ.

ಈ ಕಾರ್ಪೊರೇಟ್​ ಫಂಡ್​, 2014 ರಿಂದ 2019ರವರೆಗೆ ಶೇ.17ರಷ್ಟು ಏರಿಕೆಯಾಗಿದೆ. 2021ರಲ್ಲಿ ಇದು ಈಗ ಶೇ.5ರಷ್ಟು ಕುಸಿಯುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.

Last Updated : Mar 15, 2021, 4:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.