ನವದೆಹಲಿ: ಲಾಕ್ಡೌನ್ನಿಂದ ಆರ್ಬಿಐ ತಾತ್ಕಾಲಿಕವಾಗಿ ಇಎಂಐ ಪಾವತಿಯನ್ನು ನಿಷೇಧಿಸಿದೆ. ದುಷ್ಕರ್ಮಿಗಳು ಇದನ್ನು ದುರುಪಯೋಗಪಡಿಸಿಕೊಂಡು ವಂಚಿಸುವ ಸಾಧ್ಯತೆ ಇದೆ. ಬ್ಯಾಂಕ್ಗಳ ಹೆಸರಿನಲ್ಲಿ ಯಾರಾದರೂ ಕರೆ ಮಾಡಿ ಒಟಿಪಿ ಮತ್ತು ಇತರೆ ಮಾಹಿತಿ ಕೇಳಿದರೆ ನೀಡಬಾರದು ಎಂದು ಪ್ರಮುಖ ಬ್ಯಾಂಕ್ಗಳು ತಮ್ಮ ಗ್ರಾಹಕರಿಗೆ ಎಚ್ಚರಿಕೆ ನೀಡಿವೆ.
ಕಳೆದ ಕೆಲವು ದಿನಗಳಿಂದ ಎಕ್ಸಿಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಇತರ ಬ್ಯಾಂಕ್ಗಳು ತಮ್ಮ ಗ್ರಾಹಕರಿಗೆ ಎಸ್‌ಎಂಎಸ್ ಮತ್ತು ಇ-ಮೇಲ್‌ಗಳನ್ನು ವಂಚನೆಯ ಬಗ್ಗೆ ಕಳುಹಿಸಿವೆ.
ಆನ್ಲೈನ್ ವಂಚಕರು ಇಎಂಐ ವಿನಾಯಿತಿ ನೀಡುವುದಾಗಿ ಬ್ಯಾಂಕ್ಗಳ ಪ್ರತಿನಿಧಿ ಹೆಸರಿನಲ್ಲಿ ವಂಚಿಸುವ ಸಾಧ್ಯತೆ ಇದೆ. ಇದು ಹೊಸ ಸೈಬರ್ ವಂಚನೆ ವಿಧಾನವಾಗಿದೆ. ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಎಕ್ಸಿಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಇ-ಮೇಲ್ ಮೂಲಕ ಎಚ್ಚರಿಕೆ ನೀಡಿದೆ.
-
Axis Bank will never ask you to share your OTP, CVV and PIN to postpone your EMI. Always refrain from sharing confidential banking information with anyone. pic.twitter.com/1IB66HRbSu
— Axis Bank (@AxisBank) April 6, 2020 " class="align-text-top noRightClick twitterSection" data="
">Axis Bank will never ask you to share your OTP, CVV and PIN to postpone your EMI. Always refrain from sharing confidential banking information with anyone. pic.twitter.com/1IB66HRbSu
— Axis Bank (@AxisBank) April 6, 2020Axis Bank will never ask you to share your OTP, CVV and PIN to postpone your EMI. Always refrain from sharing confidential banking information with anyone. pic.twitter.com/1IB66HRbSu
— Axis Bank (@AxisBank) April 6, 2020
ಇಎಂಐ ಪಾವತಿಗಳನ್ನು ಮುಂದೂಡಿಕೆಗೆ ನೆರವಾಗಲು ನಿಮ್ಮ ಬ್ಯಾಂಕಿಂಗ್ ಖಾತೆಗಳಿಗೆ ಸಂಬಂಧಿಸಿದ ಒಟಿಪಿ, ಸಿವಿವಿ, ಪಾಸ್‌ವರ್ಡ್ ಅಥವಾ ಪಿನ್ ಅನ್ನು ಹಂಚಿಕೊಳ್ಳಲು ವಿನಂತಿಸಲು ನಿಮ್ಮನ್ನು ಸಂಪರ್ಕಿಸಬಹುದು.
ಜಾಗರೂಕರಾಗಿರಿ! ವಿವರಗಳನ್ನು ಹಂಚಿಕೊಂಡರೆ ಹಣಕಾಸಿನ ನಷ್ಟಕ್ಕೆ ಕಾರಣವಾಗುವ ನಿಮ್ಮ ಬ್ಯಾಂಕಿಂಗ್ ಮಾಹಿತಿ ಅನಗತ್ಯ ಪ್ರವೇಶ ಪಡೆಯಬಹುದು. ಇಎಂಐ ಮುಂದೂಡಿಕೆ ವಂಚನೆಗಳ ಬಗ್ಗೆ ಎಚ್ಚರವಹಿಸಿ ಎಂದು ಎಕ್ಸಿಸ್ ಬ್ಯಾಂಕ್ ಹೇಳಿದೆ.
-
Cyber fraudsters keep finding new ways to scam people. The only way to beat the #cybercriminals is to #BeAlert & be aware. Please note that EMI Deferment does not require OTP sharing. Do not share your OTP. For details on EMI Deferment scheme, visit: https://t.co/wP3Xux99vI#SBI pic.twitter.com/2GZSHX3ONa
— State Bank of India (@TheOfficialSBI) April 5, 2020 " class="align-text-top noRightClick twitterSection" data="
">Cyber fraudsters keep finding new ways to scam people. The only way to beat the #cybercriminals is to #BeAlert & be aware. Please note that EMI Deferment does not require OTP sharing. Do not share your OTP. For details on EMI Deferment scheme, visit: https://t.co/wP3Xux99vI#SBI pic.twitter.com/2GZSHX3ONa
— State Bank of India (@TheOfficialSBI) April 5, 2020Cyber fraudsters keep finding new ways to scam people. The only way to beat the #cybercriminals is to #BeAlert & be aware. Please note that EMI Deferment does not require OTP sharing. Do not share your OTP. For details on EMI Deferment scheme, visit: https://t.co/wP3Xux99vI#SBI pic.twitter.com/2GZSHX3ONa
— State Bank of India (@TheOfficialSBI) April 5, 2020
ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ, ಹೊಸ ಶೈಲಿಯ ಸೈಬರ್ ಅಪರಾಧವನ್ನು ವಂಚಕರು ಆರಂಭಿಸಿದ್ದಾರೆ. ಜನರು ಈ ಬಗ್ಗೆ ಎಚ್ಚರಿಕೆ ಮತ್ತು ಜಾಗೃತರಾಗಿರಿ ಎಂದು ಟ್ವಿಟ್ಟರ್ ಮೂಲಕ ತಿಳಿಸಿದೆ.