ನ್ಯೂಯಾರ್ಕ್: ಸಂಪತ್ತಿನ ಗಳಿಕೆಯಲ್ಲಿ ಎಲೆಕ್ಟ್ರಿಕ್ ಕಾರು ತಯಾರಿಕ ಟೆಸ್ಲಾ ಕಂಪನಿ ಸಿಇಒ ಎಲೋನ್ ಮಸ್ಕ್ ಹೊಸ ಮೈಲಿಗಲ್ಲನ್ನು ಮುಟ್ಟಿದ್ದಾರೆ. ಒಂದೇ ದಿನದಲ್ಲಿ 25 ಬಿಲಿಯನ್ ಡಾಲರ್ (1.82 ಲಕ್ಷ ಕೋಟಿ ರೂ.; ಗಂಟೆಗೆ 75,000 ಕೋಟಿ ರೂ.) ಗಳಸಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಟೆಸ್ಲಾ ಇಂಕ್‌ನ ಮಂಗಳವಾರದ ಶೇ 20ರಷ್ಟು ಜಿಗಿತ -ಒಂದು ವರ್ಷಕ್ಕಿಂತಲೂ ದೊಡ್ಡದಾಗಿದೆ. ಇದು ಮಸ್ಕ್ ಅವರನ್ನು 174 ಬಿಲಿಯನ್ ಡಾಲರ್ಗೆ ತಳ್ಳಿದ್ದು, ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್ ಬೆಜೋಸ್ ಅವರೊಂದಿಗಿನ ಅಂತರ ತಗ್ಗಿಸಿದೆ. ರಾತ್ರೋರಾತ್ರಿ ನಾಸ್ಡಾಕ್ ಶೇ 3.7ರಷ್ಟು ಏರಿಕೆಯಾಗಿದ್ದು, ಆ್ಯಪಲ್, ಅಮೆಜಾನ್ ಮತ್ತು ಫೇಸ್‌ಬುಕ್‌ನಂತಹ ಬಿಗ್ ಟೆಕ್ ಕಂಪನಿಗಳ ಭಾರಿ ಲಾಭಗಳಿಸಿಕೊಂಡಿವೆ.
ಇದನ್ನೂ ಓದಿ: ಆದ್ಯತಾ ಸಾಲದಡಿ ಎಲೆಕ್ಟ್ರಿಕ್ ವೆಹಿಕಲ್ ಲೋನ್ಗೆ ನೀತಿ ಆಯೋಗ ಶಿಫಾರಸು: ಕೊಳ್ಳುವವರಿಗೆ ಏನು ಲಾಭ?
ಬೆಜೋಸ್‌ನ ಅಮೆಜಾನ್.ಕಾಮ್ ಇಂಕ್ ಷೇರುಗಳ ಏರಿಕೆಯು ಆತನಿಗೆ 6 ಬಿಲಿಯನ್ ಗಳಿಸಲು ಸಹಾಯ ಮಾಡಿದೆ. ಬೆಜೋಸ್ ಅವರ ನಿವ್ವಳ ಮೌಲ್ಯ 180 ಬಿಲಿಯನ್ ಡಾಲರ್ಗೆ ತಲುಪಿದೆ. ಸ್ಥಿರ ತ್ರೈಮಾಸಿಕ ಲಾಭ, ಅಧ್ಯಕ್ಷ ಜೋ ಬೈಡನ್ ಅವರ ಶುದ್ಧ ತಂತ್ರಜ್ಞಾನಗಳ ಸ್ವೀಕಾರ ಮತ್ತು ಚಿಲ್ಲರೆ ಹೂಡಿಕೆದಾರರ ಉತ್ಸಾಹದಿಂದ ಟೆಸ್ಲಾ ಷೇರುಗಳ ಏರಿಕೆಗೆ ಕಾರಣವಾಯಿತು. ಎಲೆಕ್ಟ್ರಿಕ್ ವಾಹನ ತಯಾರಕ ಟೆಸ್ಲಾ ಇಂಕ್‌ನ ಷೇರುಗಳು ಮಂಗಳವಾರ ಸುಮಾರು ಶೇ 20ಷ್ಟು ಏರಿಕೆಯಾಗಿದೆ.